Indian Flag in Kalaburagi: ಅಬ್ಬಬ್ಬಾ! ರಾಷ್ಟ್ರಧ್ವಜದ ಗಾತ್ರವೇ ಅಚ್ಚರಿ ಹುಟ್ಟಿಸುತ್ತೆ! ವಿಡಿಯೋ ನೋಡಿ

Azadi Ka Amrut Mahotsav Special: ಸರಕಾರ ಹಾಗೂ ಸಂಘ ಸಂಸ್ಥೆಗಳು 75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಹಲವು ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಕಲಬುರಗಿಯಲ್ಲಿ ಕುಟುಂಬವೊಂದು 75 ಅಡಿ ಉದ್ದ ರಾಷ್ಟ್ರ ಧ್ವಜ ನಿರ್ಮಿಸಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಿದೆ. ನೀವೂ ವೀಕ್ಷಿಸಿ!

ಬೃಹತ್ ಗಾತ್ರದ ರಾಷ್ಟ್ರಧ್ವಜ

"ಬೃಹತ್ ಗಾತ್ರದ ರಾಷ್ಟ್ರಧ್ವಜ"

 • Share this:
  ಕಲಬುರಗಿ: ದೇಶದಾದ್ಯಂತ 75ನೇ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ಹರ್ ಘರ್ ತಿರಂಗಾ ಅಭಿಯಾನ (Har Ghar Tiranga) ಕೂಡ ಕೇಂದ್ರ ಸರ್ಕಾರ ಆರಂಭಿಸಿದ್ದು, ಸ್ವಾತಂತ್ರೋತ್ಸವದ ಹಿನ್ನಲೆ ಕಲಬುರಗಿ ಜಿಲ್ಲೆಯಲ್ಲಿ ಬೃಹತ್ ಆಕಾರದ ರಾಷ್ಟ್ರ ಧ್ವಜ ನಿರ್ಮಾಣ ಮಾಡುವ ಮೂಲಕ ಇಲ್ಲೊಂದು ಕುಟುಂಬ ರಾಷ್ಟ್ರಪ್ರೇಮವನ್ನು ಮೆರೆದಿದ್ದು. ರಾಷ್ಟ್ರ ಧ್ವಜ ನಿರ್ಮಿಸಿದ ಸ್ಥಳ ಇದೀಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಹೌದು, ದೇಶದ್ಯಾಂತ ಆಚರಿಸುತ್ತಿರುವ 75 ನೇ ಸ್ವಾತಂತ್ರ್ಯ ಅಮೃತೋತ್ಸವ ಅಂಗವಾಗಿ ಕಲಬುರಗಿ ಜಿಲ್ಲೆಯ (Kalaburagi) ಕಮಲಾಪುರ ಹೃದಯ ಭಾಗವಾದ ಕುದುರೆ ಮುಖ ಬಳಿ ಬಮ್ಮಣ ಪರಿವಾರದ ವತಿಯಿಂದ ಕಲ್ಯಾಣ ಕರ್ನಾಟಕ (Kalyan Karnataka) ಭಾಗದ ಅತೀ ದೊಡ್ಡ ರಾಷ್ಟ್ರಧ್ವಜವನ್ನು (Indian Flag)  ನಿರ್ಮಿಸಲಾಗಿದ್ದು, ಏಳು ದಿನಗಳ ಕಾಲ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

  75 ಅಡಿ ಉದ್ದದ ತಿರಂಗ
  ಕಲಬುರಗಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 15 ರ ಬಾಚನಾಳ ಸಮೀಪದ ಕುದುರೆ ಮುಖ ಪರ್ವತ ಬಳಿಯ 23 ಎಕರೆ ವಿಶಾಲ ಪ್ರದೇಶದಲ್ಲಿ ಧ್ವಜಾರೋಹಣ ಅನಾವರಣ ಮಾಡಲಾಯಿತು. ಭಾರತ ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿ ಅನ್ನದಾತನ ಭೂಮಿಯಲ್ಲಿ 75 ಅಡಿ ಉದ್ದ 50 ಅಡಿ ಅಗಲದ ಸುಮಾರು 140 ಕೆಜಿಯ ಗಾತ್ರದ ರಾಷ್ಟ್ರಧ್ವಜ ಅನಾವರಣಗೊಂಡಿದೆ.

  Kamalapur Kalaburagi
  ಧ್ವಜ ನೋಡಲು ಕಮಲಾಪುರಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  150 ಅಡಿ ಎತ್ತರ ಧ್ವಜ
  ಭಾರತೀಯ ಸೈನ್ಯದ ವತಿಯಿಂದ ಜಮ್ಮುವಿನ ಲಡಾಖ್ ಪ್ರದೇಶದಲ್ಲಿ ಗಾಂಧಿ ಜಯಂತಿಯ ಅಂಗವಾಗಿ 150 ಅಡಿ ಎತ್ತರ ಧ್ವಜವನ್ನು ಹಾರಿಸಲಾಗಿತ್ತು. ಈಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಅಮೃತ್ ಮಹೋತ್ಸವ ಅಂಗವಾಗಿ ಬಾರಿ ಗಾತ್ರದ ಖಾದಿ ಬಟ್ಟೆಯಿಂದ ತಯಾರಿಸಿದ ತಿರಂಗಾ ಧ್ವಜ ಪ್ರದರ್ಶನಕ್ಕೆ ಇಡಲಾಗಿದೆ.

  ಖಾದಿ ಬಟ್ಟೆಯಿಂದ ತಯಾರಾದ ತಿರಂಗ
  ಧಾರವಾಡ ಜಿಲ್ಲೆಯ ಗರಗ ಗ್ರಾಮದ ರಾಷ್ಟ್ರಧ್ವಜ ತಯಾರಿಸುವ 300 ಮಹಿಳೆಯರು ಇಲ್ಲಿಗೆ ಆಗಮಿಸಿ ಶುದ್ದ ಹತ್ತಿಯನ್ನು ಉಪಯೋಗಿಸಿ ನೇಯ್ದ ಖಾದಿ ಬಟ್ಟೆಯಿಂದ ಒಂದುವರೆ ತಿಂಗಳು ಪ್ರಯತ್ನವಾಗಿ ಧ್ವಜ ತಯಾರು ಮಾಡಲಾಗಿದೆ.

  ಇದನ್ನೂ ಓದಿ: Kalaburagi: ಥೇಟ್ ಭಾರತಮಾತೆಯೇ ಕಲಬುರಗಿಯಲ್ಲಿ ಪ್ರತ್ಯಕ್ಷ! ಫೋಟೊ ನೋಡಿ ಖುಷಿಪಡಿ

  ಅಲ್ಲದೆ ಕೇಂದ್ರ ಸರ್ಕಾರದ ಧ್ವಜ ಸಹಿತಿ ಮಂಡಳಿ ಮಾರ್ಗಸೂಚಿ ಪಾಲಿಸಲಾಗಿದ್ದು, ಇಂದಿನ ಯುವ ಪೀಳಿಗೆಯಲ್ಲಿ ದೇಶಭಿಮಾನ ಮೂಡಿಸಲು ವಿಶಿಷ್ಟವಾಗಿ ಧ್ವಜಾರೋಹಣ ನೇರವೇರಿಸಲಾಗುತ್ತಿದೆ ಎಂಬುವುದು ಬಮ್ಮಣ್ಣ ಕುಟುಂಬಿಕರ ಅಭಿಪ್ರಾಯವಾಗಿದೆ.

  ಒಟ್ಟಿನಲ್ಲಿ ಬಮ್ಮಣ್ಣ ಪರಿವಾರದ ದೇಶಪ್ರೇಮ ನಿಜಕ್ಕೂ ಮೆಚ್ಚುವಂತದ್ದು, ಶುದ್ಧ ಖಾದಿ ಬಳಸಿ ಬೃಹತಾಕಾರದ ಧ್ವಜ ನಿರ್ಮಿಸುವ ಮೂಲಕ ಜನರಲ್ಲಿ ದೇಶಪ್ರೇಮ ಹೆಚ್ಚಿಸುವ ಪ್ರಯತ್ನವನ್ನ ಬಮ್ಮಣ ಪರಿವಾರದವರ ನಡೆಸಿದ್ದಾರೆ. ಇವರ ಈ ಕಾರ್ಯಕ್ಕೆ ಜಿಲ್ಲಾಡಳಿತ ಸೇರಿದಂತೆ ಕಲಬುರಗಿ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಇದನ್ನೂ ಓದಿ: Kalaburagi Karate King: ಕರಾಟೆ ಕಿಂಗ್ ಅಂಬ್ರೇಶ್! ಕಲಬುರಗಿಯಲ್ಲಿ ಈಗ ಇವರದ್ದೇ ಹೆಸರು!

  ಇನ್ನು ಈ ಧ್ವಜವು ಇಂದಿನಿಂದ ಆಗಸ್ಟ್ 17ರ ವರೆಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು, ದೇಶಾಭಿಮಾನಿಗಳು ಕಮಲಾಪುರದ ಕುದುರೆಮುಖ ಬಳಿ ಇರುವ ಬಾಚನಾಳ ಕ್ರಾಸ್ ಗೆ ಬಂದ್ರೆ ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದುದಾಗಿದೆ‌.

  ವರದಿ: ಶ್ರೀಕಾಂತ್ ಬಿರಾಳ
  Published by:guruganesh bhat
  First published: