• Home
  • »
  • News
  • »
  • kalburgi
  • »
  • Good News: ಕಲಬುರಗಿ ಪಾಲಿಕೆ ವತಿಯಿಂದ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ

Good News: ಕಲಬುರಗಿ ಪಾಲಿಕೆ ವತಿಯಿಂದ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ

 Job Recruitment

Job Recruitment

ಕಲಬುರಗಿಯ ನಿವಾಸಿಗಳಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಕಲಬುರಗಿಯ ಸಾರ್ವಜನಿಕರಿಗೆ ಎಂದೇ ವಿಶೇಷ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ದೀನದಯಾಳ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಸಿಎಲ್ಎಫ್ ಉತ್ತರ ಮತ್ತು ದಕ್ಷಿಣಕ್ಕೆ ಸಂಬಂಧಿಸಿದಂತೆ ಕೌಶಲ್ಯ ತರಬೇತಿ (Skill Development) ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ವಿವಿಧ ತರಬೇತಿ ಸಂಸ್ಥೆಗಳ ಮೂಲಕ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಲಬುರಗಿ ಜಿಲ್ಲೆಯ (Kalaburagi News)  ಅರ್ಹ ಅಭ್ಯರ್ಥಿಗಳು ಸಹ ಈ ಯೋಜನೆಯ ಅಡಿ ಅರ್ಜಿಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

    ತರಬೇತಿಯ ಹೆಸರುವಿದ್ಯಾರ್ಹತೆ
    ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ ತರಬೇತಿ10ನೇ ತರಗತಿ ಪಾಸ್
    ಡೊಮೆಸ್ಟಿಕ್ ಐಟಿ- ಹೆಲ್ಪ್​ಡೆಸ್ಕ್ ಅಟೆಂಡೆಂಟ್ ತರಬೇತಿಪಿಯುಸಿ
    ಸೀನಿಯರ್ ಥೆರಪಿಸ್ಟ್ ತರಬೇತಿ10ನೇ ತರಗತಿ ಪಾಸ್
    ಲ್ಫ್ ಎಂಪ್ಲಾಯ್ಮೆಂಟ್ ಟೈಲರ್ ತರಬೇ8ನೇ ತರಗತಿ ಉತ್ತೀರ್ಣ

    ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು?
    ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ ತರಬೇತಿ ಪಡೆಯಲು 10ನೇ ತರಗತಿ ಪಾಸ್ ಆಗಿರಬೇಕು. ಡೊಮೆಸ್ಟಿಕ್ ಐಟಿ- ಹೆಲ್ಪ್​ಡೆಸ್ಕ್ ಅಟೆಂಡೆಂಟ್ ತರಬೇತಿ ಪಡೆಯಲು ಪಿಯುಸಿ ಉತ್ತೀರ್ಣದೊಂದಿಗೆ 6 ತಿಂಗಳ ಅನುಭವವನ್ನ ಹೊಂದಿರಬೇಕು.


    ಇದನ್ನೂ ಓದಿ: Positive Story: ಶಾಲೆ ಆಡಳಿತ ಮಕ್ಕಳ ಕೈಗೆ, ಪಾಠ ಮಾಡೋದೂ ವಿದ್ಯಾರ್ಥಿಗಳೇ!


    ಸೀನಿಯರ್ ಥೆರಪಿಸ್ಟ್ ತರಬೇತಿ ಪಡೆಯಲು 10ನೇ ತರಗತಿ ಉತ್ತೀರ್ಣದೊಂದಿಗೆ ಎರಡು ವರ್ಷ ಅನುಭವ ಹೊಂದಿರಬೇಕು. ಸೆಲ್ಫ್ ಎಂಪ್ಲಾಯ್ಮೆಂಟ್ ಟೈಲರ್ ತರಬೇತಿ ಪಡೆಯಲು 8ನೇ ತರಗತಿ ಉತ್ತೀರ್ಣದೊಂದಿಗೆ ಆರು ತಿಂಗಳು ಅನುಭವವಿರಬೇಕು. ಸೀವಿಂಗ್ ಮಷಿನ್ ಆಪರೇಟರ್ ತರಬೇತಿ ಪಡೆಯಲು ಐದನೇ ತರಗತಿ ಪಾಸ್ ಆಗಿರಬೇಕು. ಅವರು ಕಲಬುರಗಿ ನಿವಾಸಿಗಳೇ ಆಗಿರಬೇಕು. ಈ ಎಲ್ಲಾ ತರಬೇತಿಗೆ ಅರ್ಹ ಅಭ್ಯರ್ಥಿಗಳು 18 ರಿಂದ 35 ವರ್ಷದೊಳಗಿರಬೇಕು.


    ಇದನ್ನೂ ಓದಿ: Kalaburagi Fair: ಭಕ್ತಿಯ ಶಕ್ತಿಗೆ ಸರಪಳಿಯೇ ತುಂಡು ತುಂಡಾಯ್ತು! ಇದು ಕಲಬುರಗಿ ವೀರಭದ್ರೇಶ್ವರ ರಥೋತ್ಸವದ ಝಲಕ್


    ಲಗತ್ತಿಸಬೇಕಾದ ದಾಖಲೆಗಳು ಹೀಗಿದೆ
    ಎಲ್ಲಾ ಸಮುದಾಯದ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕಲಬುರ್ಗಿ ಮಹಾನಗರ ಪಾಲಿಕೆಯ ರೂಂ ನಂಬರ್ 47ರ ಸಂಬಂಧಪಟ್ಟ ಶಾಖೆಯ ಸಮುದಾಯ ಘಟಕದಿಂದ ಪಡೆದು ಅರ್ಜಿಯನ್ನು ಜಾತಿ-ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಲಗತ್ತಿಸಿ ಅರ್ಜಿಯನ್ನು ಭರ್ತಿ ಮಾಡಿ ನವೆಂಬರ್ 30ರೊಳಗಾಗಿ ಪಾಲಿಕೆ ಕಚೇರಿಗೆ ಸಲ್ಲಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: