ಕಲಬುರಗಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಿಂದ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಸಂಸ್ಥೆಯಿಂದ 6 ತಿಂಗಳ ಅವಧಿಗೆ ಡಿಪ್ಲೋಮಾ ಇನ್ ಕೋ- ಆಪರೇಟಿವ್ ಮ್ಯಾನೇಜ್ಮೆಂಟ್ (DCM) ತರಬೇತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಸಂಸ್ಥೆಯ (Diploma Training) ಮೂಲಕ ಸಹಕಾರ ಸಂಘ ಸಂಸ್ಥೆ, ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಪದೋನ್ನತಿ , ವೇತನ ಬಡ್ತಿಗೆ ಈ ಪದವಿಯು ಕಡ್ಡಾಯವಾಗಿದೆ. ಹೀಗಾಗಿ ಈ ತರಬೇತಿಯು ಪ್ರಾಮುಖ್ಯತೆ ಪಡೆದುಕೊಂಡಿದ್ದು ಹೆಚ್ಚಿನ ವಿವರಗಳು ಇಲ್ಲಿವೆ ನೋಡಿ.
ತರಬೇತಿ ಹೆಸರು | ಡಿಪ್ಲೋಮಾ ಇನ್ ಕೋ- ಆಪರೇಟಿವ್ ಮ್ಯಾನೇಜ್ಮೆಂಟ್ |
ಯಾವತ್ತಿಂದ ಶುರು? | ಜನವರಿ |
ಸಂಪರ್ಕ ಮಾಹಿತಿ | ಪ್ರಾಂಶುಪಾಲರು ಕಲಬುರಗಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ - ಆಪರೇಟಿವ್ ಮ್ಯಾನೇಜ್ಮೆಂಟ್ , ಆದರ್ಶನಗರ , ಪ್ರಗತಿ ಕಾಲೋನಿ , ಸೇಡಂ , ರಸ್ತೆ , ಕಲಬುರಗಿ -585 105. |
ದೂರವಾಣಿ ಸಂಖ್ಯೆ | 08472-245340 ಅಥವಾ 9742307153, |
ಇದನ್ನೂ ಓದಿ: Kalaburagi: ಮಲ್ಲಗಂಬ ಏರಿದ ಅಂಧ ಮಕ್ಕಳು! ಶಾಲೆ ಕಟ್ಟೋದೇ ಇವರ ಉದ್ದೇಶವಂತೆ
ಇಲ್ಲಿದೆ ಹೆಚ್ಚಿನ ವಿವರ
ಪ್ರಸಕ್ತ ಅವಧಿಯ ತರಬೇತಿ 2023 ರ ಜನವರಿ ತಿಂಗಳಿಂದ ಪ್ರಾರಂಭವಾಗುತ್ತಿದೆ. ಕೂಡಲೇ ತರಬೇತಿಯನ್ನು ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಕಲಬುರಗಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಸಂಪರ್ಕಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಕನಿಷ್ಠ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಶಿಷ್ಯವೇತನ ಹಾಗೂ ವಸತಿ ಸೌಲಭ್ಯ ನೀಡಲಾಗುವುದು.
ಸಂಪರ್ಕಿಸಿ
ಪ್ರಾಂಶುಪಾಲರು ಕಲಬುರಗಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ - ಆಪರೇಟಿವ್ ಮ್ಯಾನೇಜ್ಮೆಂಟ್ , ಆದರ್ಶನಗರ , ಪ್ರಗತಿ ಕಾಲೋನಿ , ಸೇಡಂ , ರಸ್ತೆ , ಕಲಬುರಗಿ -585 105.
ಇದನ್ನೂ ಓದಿ: Special Talent: ಕಲಬುರಗಿಯ ಈ ಪೋರನಿಗೆ ಇಂಗ್ಲೀಷ್ ಸುಲಿದ ಬಾಳೆಹಣ್ಣಿನಷ್ಟೇ ಸಲೀಸು!
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ- 08472-245340, 9742307153, 9916726886,9113916753 ಸಂಪರ್ಕಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ