ಕಲಬುರಗಿ: ಇದೇನೋ ನೋಡೋಕೆ ಚೆಂದದ ಚಪ್ಪಲಿ. ಹಾಗಂತ ಮುಟ್ಟೋಕ್ ಹೋದ್ರೆ, ಹುಷಾರ್! ಈ ಚೆಂದದ ಚಪ್ಪಲಿ (Anti Rape Footwear) ಚೆಂದದ ಹುಡುಗಿಯರ ಪಾಲಿನ ಜೀವರಕ್ಷಕ. ಹುಡುಗಿಯರನ್ನ ದೂರದಿಂದ ನೋಡ್ಬೇಕೇ ವಿನಃ ಮುಟ್ಟೋಕ್ (Life Saver Slipper) ಹೋಗ್ಬಾರ್ದು ಅಂತಾನೇ ಈ ಚಪ್ಪಲಿ ತಯಾರಿಸಿರೋದು! ಇನ್ಮುಂದೆ ಯಾರಾದ್ರೂ ತೊಂದ್ರೆಕೊಟ್ರೆ ಯುವತಿಯರು ಚಪ್ಪಲಿ ತೆಗೆದು ಬಾರಿಸ್ತೀನಿ ಅನ್ಬೇಕಿಲ್ಲ, ಕಿಕ್ ಕೊಟ್ರೆ ಸಾಕು ಎಂತವನೂ ಓಡಿ ಬಿಲ ಸೇರೋದು ಗ್ಯಾರಂಟಿ
ನಿಜ, ಈ ಜೋಡಿ ಚಪ್ಪಲಿ ಸೀಕ್ರೆಟೇ ಅಂತದ್ದು! ಮೇಲ್ನೋಟಕ್ಕೆ ಚೆಂದದ ಚಪ್ಪಲಿಯೇ ಆದ್ರೂ ಅದರ ಅಡಿ ಭಾಗದಲ್ಲಿ ಬ್ಯಾಟರಿ, ವೈರ್ಗಳೆಲ್ಲ ಇವೆ. ಒಂದು ಚಪ್ಪಲಿ ಎಲೆಕ್ಟ್ರಿಕ್ ಶಾಕ್ ಕೊಟ್ರೆ, ಇನ್ನೊಂದು ಚಪ್ಪಲಿ ಜಿಪಿಎಸ್ ಮೂಲಕ ನಿಮ್ಮ ಲೊಕೇಶನ್ ತೋರಿಸುತ್ತೆ. ಅಲ್ಲದೇ ಈ ಚಪ್ಪಲಿ ಸೈರನ್ ಸಹ ಮೊಳಗಿಸುತ್ತೆ ಈ ಚಪ್ಪಲಿ.
ಹೇಗೆ ಶಾಕ್ ಹೊಡೆಯುತ್ತೆ?
ಅಂದಹಾಗೆ ಈ ಚಪ್ಪಲಿಯನ್ನ ಆವಿಷ್ಕಾರ ಮಾಡಿರೋದು ಕಲಬುರಗಿ ನಗರದ ಎಸ್ ಆರ್ ಎನ್ ಮೇಹತಾ ಖಾಸಗಿ ಸ್ಕೂಲ್ನ 10 ನೇ ತರಗತಿ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಬಿರಾದಾರ. ಇವ್ರಿಗೆ ಅವರ ಸೈನ್ಸ್ ಟೀಚರ್ ಸುಮಯ್ಯಾ ನೆರವಾಗಿದ್ದಾರೆ. ಈ ಚಪ್ಪಲಿಗೆ ಆ್ಯಂಟಿ ರೇಪ್ ಫೂಟ್ವೇರ್ ಅಂತಾ ಹೆಸರಿಟ್ಟಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಈ ಫುಟ್ ವೇರ್ ಆವಿಷ್ಕಾರ ಮಾಡಲಾಗಿದೆ. ಎರಡು ಫುಟ್ ವೇರ್ನಲ್ಲಿ ಎರಡು ಬಗೆಯ ಮಹಿಳಾ ಸುರಕ್ಷತೆಯ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಒಂದು ಫುಟ್ವೇರ್ನಲ್ಲಿ ವಿದ್ಯುತ್ ಶಾಕ್, ಮತ್ತೊಂದರಲ್ಲಿ ಜಿಪಿಎಸ್ ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ: Positive Story: ಕಾಲುಗಳಿಲ್ಲದ ಕೃಷಿ ಸಾಧಕರಿಗೆ ಸಿಕ್ತು ನೆರವಿನ ಭರವಸೆ; ಇದು ನ್ಯೂಸ್ 18 ಕನ್ನಡ ಡಿಜಿಟಲ್ ವರದಿ ಪರಿಣಾಮ
ಗುಂಡಿ ಒತ್ತಿದ್ರೆ ಲೊಕೇಷನ್ ರವಾನೆ!
ಕಾಮುಕರು ಮಹಿಳೆ ಮೇಲೆ ಏರಗಿದ್ರೆ ಒಂದು ಚಪ್ಪಲಿಯಿಂದ ಕಿಕ್ ಮಾಡಿದ್ರೆ ಸಾಕು 0.5 ಆ್ಯಂಪ್ಸ್ ವಿದ್ಯುತ್ ಶಾಕ್ ಹೊಡೆಯುತ್ತೆ. ಇನ್ನೊಂದು ಸ್ಯಾಂಡಲ್ನಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು, ಗುಂಡಿ ಒತ್ತಿದ್ರೆ ಸಾಕು ಜಿಪಿಎಸ್ ಮೂಲಕ ಪೋಷಕರಿಗೆ ಮತ್ತು ಪೊಲೀಸರಿಗೆ ಲೊಕೇಷನ್ ಸಮೇತ ಮಾಹಿತಿ ರವಾನೆ ಆಗುತ್ತೆ.
13 ತಿಂಗಳ ನಿರಂತರ ಸಂಶೋಧನೆ!
13 ತಿಂಗಳ ಕಾಲ ನಿರಂತರ ಸಂಶೋಧನೆ ಮಾಡಿ ಮಹಿಳೆಯರ ಸುರಕ್ಷತಾ ಸ್ಮಾರ್ಟ್ ಫುಟ್ ವೇರ್ನ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಬಿರಾದಾರ ಆವಿಷ್ಕಾರ ಮಾಡಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಇಂಡಿಯಾ ಇಂಟರ್ನ್ಯಾಷನಲ್ ಇನ್ವೇನ್ಷನ್ ಮತ್ತು ಇನೊವೇಷನ್ ಎಕ್ಸ್ಪೋ -2022 ರಲ್ಲಿ ಈ ಮಹಿಳಾ ಸೇಫ್ಟಿ ಫುಟ್ ಮಾದರಿಗೆ ಬೆಳ್ಳಿ ಪದಕ ಲಭಿಸಿದೆ. ಅಲ್ಲದೆ 2023 ರಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಸೈನ್ಸ್ ಎಕ್ಸ್ಪೋ-2023 ಕ್ಕೂ ಈ ಲೇಡಿ ಸೇಫ್ಟಿ ಫುಟ್ ವೇರ್ ಸೆಲೆಕ್ಟ್ ಆಗಿದೆ.
ಬ್ಯಾಟರಿ ಚಾರ್ಜ್ ಹಾಕಬಹುದು!
ಈ ಇನ್ನೋವೇಷನ್ಗೆ ಎಲೆಕ್ಟ್ರಾನಿಕ್ ಸರ್ಕ್ಯೂಟ್, ಬ್ಯಾಟರಿ, ಸೆಲ್ ಬಳಕೆ ಮಾಡಲಾಗಿದೆ. ನಡೆಯುವಾಗಲೆ ಬ್ಯಾಟರಿ ಚಾರ್ಜ್ ಆಗುವಂತೆ ಕೆಮಿಕಲ್ ಎನರ್ಜಿಯಿಂದ ಎಲೆಕ್ಟ್ರಿಕಲ್ ಎನರ್ಜಿಯಾಗಿ ಪರಿವರ್ತಿಸುವ ತಂತ್ರಜ್ಞಾನವನ್ನೂ ಬಳಸಲಾಗಿದೆ.
ಇದನ್ನೂ ಓದಿ: Kalaburagi: ರಾಷ್ಟ್ರಕೂಟ ರಾಜ ಸ್ನಾನಕ್ಕೆ ನಿರ್ಮಿಸಿದ ಕೊಳದಲ್ಲಿ ಈಜುವ ಖುಷಿಯೇ ಬೇರೆ!
ಒಟ್ಟಿನಲ್ಲಿ ಈ ಆ್ಯಂಟಿ ರೇಪ್ ಫೂಟ್ ವೇರ್ ಅಪ್ರಾಪ್ತ ಬಾಲಕಿಯರು ಹಾಗೂ ವಿದ್ಯಾರ್ಥಿನಿಯರಿಗೆ ಹೆಚ್ಚು ಯೂಸ್ ಫುಲ್ ಆಗುತ್ತೆ. ಹಿಂದೆಲ್ಲ ಹೆಣ್ಮಕ್ಕಳ ತಂಟೆಗೆ ಬಂದ್ರೆ ಚಪ್ಪಲಿ ತೆಗೆದು ಬಾರಿಸಬೇಕಿತ್ತು. ಆದ್ರೆ ಈ ಸ್ಮಾರ್ಟ್ ಫೂಟ್ ವೇರ್ ಧರಿಸಿದರೆ ಜಸ್ಟ್ ಕಿಕ್ ಕೊಟ್ಟರೆ ಸಾಕು ಮುಂದೆ ಇರೋನು ಕಾಲಿಗೆ ಬುದ್ದಿ ಹೇಳೋದ್ರಲ್ಲಿ ಡೌಟೇ ಇಲ್ಲ. ಇಂತಹ ಚಪ್ಪಲಿ ಆವಿಷ್ಕಾರದ ಮಾಡಿದ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಿರಾದಾರ ಅವರಿಗಂತೂ ಬಿಗ್ ಸೆಲ್ಯೂಟ್ ಹೇಳಲೇಬೇಕು.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ