ಕಲಬುರಗಿ: ಕುಕ್ಕರ್ ಜೋಡಿಸಿಟ್ಟಿರೋದು ನೋಡಿದ್ರೆ, ಇದೇನಪ್ಪ ಕುಕ್ಕರ್ ಅಂಗಡಿನಾ ಅಂದ್ಕೋಬೇಕು. ಹಾಗೇ ಒಳಗಡೆ ಘಮಘಮಿಸೋ ಅಡುಗೆ ನೋಡ್ತಿದ್ರೆ ಇದ್ಯಾವ ಸ್ಪೆಷಲ್ ಹೋಟೆಲ್ ಅನ್ಕೋಬೇಕು. ಇನ್ನು ಇಲ್ಲಿ ಅಡುಗೆ ಮಾಡೋದು ಕುಕ್ಕರ್ ನಲ್ಲಿ, ಬಡಿಸೋದೇನಿದ್ರು ಕುಕ್ಕರ್ನಲ್ಲೇ. ಅರೆ! ಇದ್ಯಾವುದಪ್ಪ ಕುಕ್ಕರ್ ಹೋಟೆಲ್ (Cooker Dhaba) ಅಂತೀರಾ? ಈ ಸ್ಟೋರಿ ನೋಡಿ.
ಯೆಸ್, ಇದು ಕಲಬುರಗಿಯ ಕಪನೂರ ಇಂಡಸ್ಟ್ರೀಸ್ ಬಳಿ ಇರುವ ಸಂಜಯ ಎಂಬುವವರಿಗೆ ಸೇರಿದ ಸಿಟಿ ಹೈವೆ ಡಾಬಾ. ಹೆಸರೇನೋ ಹೀಗಿದ್ರು ಜನರಿಗೆಲ್ಲ ಇದು ʼಕುಕ್ಕರ್ ಡಾಬಾʼ ಅಂತಾನೇ ಪರಿಚಯ.
ಯಾಕಂದ್ರೆ ಇಲ್ಲಿ ಯಾವುದೇ ಅಡುಗೆ ಮಾಡೋದಿದ್ರೂ ಅದೆಲ್ಲವೂ ಕುಕ್ಕರ್ನಿಂದ್ಲೇ. ಆರ್ಡರ್ ಪಡೆದು 10 ನಿಮಿಷಗಳ ಕಾಲ ಗ್ರಾಹಕರು ಕಾದ್ರೆ ಸಾಕು, ಟೇಸ್ಟಿ ಹಾಗೂ ಬಿಸಿಬಿಸಿಯಾದ ಆಹಾರವನ್ನು ಕುಕ್ಕರ್ನಲ್ಲೇ ರೆಡಿ ಮಾಡಿಕೊಡಲಾಗುತ್ತೆ. ಹೀಗಾಗಿ ಕುಕ್ಕರ್ ಟೇಸ್ಟ್ ಸವಿಯಲೆಂದೇ ನೂರಾರು ಜನರು ಬರ್ತಾರೆ.
ಕುಕ್ಕರ್ ವಿಸಲ್ನಲ್ಲೇ ರೆಡಿ!
ಗ್ರಾಹಕರಿಗೆ ಕೊಡುವ ಅಡುಗೆ ಬಿಸಿಯಾಗಿರ್ಬೇಕು. ಚೆನ್ನಾಗಿ ಬೇಯಿಸಬೇಕು ಅನ್ನೋ ಕಾರಣಕ್ಕೆ ಇಲ್ಲಿ ಪ್ರತಿಯೊಂದನ್ನೂ ಕುಕ್ಕರ್ನಲ್ಲಿಯೇ ಬೇಯಿಸಲಾಗುತ್ತೆ. ಗ್ರಾಹಕರು ಬಂದು ಆರ್ಡರ್ ಮಾಡಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕಾದರೆ ಸಾಕು ಕುಕ್ಕರಿನಲ್ಲಿ ಬೆಂದ ಬಿಸಿ ಬಿಸಿಯಾದ ಅಡುಗೆ ಗ್ರಾಹಕರ ಟೇಬಲ್ ಮೇಲೆ ಇರುತ್ತದೆ.
ಇದನ್ನೂ ಓದಿ: Kalaburagi: ಬರೋಬ್ಬರಿ 100 ವರ್ಷಗಳಿಂದ ಅನ್ನದಾನ, ಇದೇ ನೋಡಿ ಭಕ್ತಿ ಅಂದ್ರೆ!
ಟೇಸ್ಟಿ ನಾನ್ ವೆಜ್ ಖಾದ್ಯಗಳು
ನಾನ್ ವೆಜ್ ಐಟಂಗಳಾದ ಚಿಕನ್, ಮಟನ್ ಅಷ್ಟೇ ಯಾಕೆ ರೈಸ್ ಕೂಡ ಇಲ್ಲಿ ಆರ್ಡರ್ ಪಡೆದ ನಂತರವೇ ಮಾಡಲಾಗುತ್ತದೆ. ಯಾವುದು ಕೂಡ ಮುಂಚಿತವಾಗಿ ಮಾಡಿಟ್ಟಿರುವುದಿಲ್ಲ. ಹೀಗಾಗಿಯೇ ಈ ಡಾಬಾ ತುಂಬಾ ಫೇಮಸ್ ಆಗಿದೆ.
ಇದನ್ನೂ ಓದಿ: Kalaburagi: ಎದುರು ಮನೆಯಲ್ಲಿ ಗಂಡು ಮಗು ಹುಟ್ಟಿದ್ರೆ ಈ ಮನೆಲಿ ಇಡೀ ತಿಂಗಳು ಹಬ್ಬ!
ಕುಕ್ಕರ್ ಡಾಬಾಕ್ಕೆ ಹೀಗೆ ಬನ್ನಿ (ಚಿತ್ರಕೃಪೆ:ಗೂಗಲ್ ಮ್ಯಾಪ್ಸ್)
ಸೀಟಿಯೇ ಈ ಡಾಬಾ ಸ್ಪೆಷಲ್
ಇಲ್ಲಿ ದೊರೆಯುವ ಇನ್ನೊಂದು ವಿಶೇಷ ಆಹಾರವೆಂದರೆ ಸ್ಪೆಷಲ್ ಸೀಟಿ ರೈಸ್. ಖಾಜು ಹಾಗೂ ಇತರ ಡ್ರೈ ಫ್ರುಟ್ಸ್ಗಳನ್ನು ಹಾಕಿ ಕುಕ್ಕರ್ನಲ್ಲಿ ಬೇಯಿಸಿ ಗರಮಾ ಗರಂ ರೈಸ್ ಗ್ರಾಹಕರಿಗೆ ನೀಡಲಾಗುತ್ತೆ. ಈ ರೈಸ್ನ ಟೆಸ್ಟ್ ಇಲ್ಲಿನ ಕಲಬುರಗಿ ಜನರನ್ನ ಆಕರ್ಷಿಸುತ್ತಿದೆ. ಒಟ್ಟಿನಲ್ಲಿ ಕಲಬುರಗಿಯ ಅದೆಷ್ಟೇ ಡಾಬಾಗಳಿದ್ರು ಈ ಕುಕ್ಕರ್ ಡಾಬಾ ಸಖತ್ ಸೌಂಡ್ ಮಾಡ್ತಿದೆ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ