• Home
  • »
  • News
  • »
  • kalburgi
  • »
  • Agriculture Tips: ಕೃಷಿಕರೇ ಗಮನಿಸಿ, ಸೋಯಾಬಿನ್​ಗೆ ದರ ನಿಗದಿ; ಖರೀದಿ ಕೇಂದ್ರ ಸ್ಥಾಪನೆ

Agriculture Tips: ಕೃಷಿಕರೇ ಗಮನಿಸಿ, ಸೋಯಾಬಿನ್​ಗೆ ದರ ನಿಗದಿ; ಖರೀದಿ ಕೇಂದ್ರ ಸ್ಥಾಪನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್‌ ಸೋಯಾಬಿನ್‌ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಡಿಸೆಂಬರ್‌ 23ರವರೆಗೆ ನೋಂದಣಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ತೊಗರಿ‌ ಕಣಜ ಕಲಬುರಗಿಯಲ್ಲಿ (Kalaburagi News) ಸೋಯಾಬಿನ್‌ ಬೆಳೆದ ರೈತರಿಗಾಗಿ (Soyabean Farmers)  ಖರೀದಿ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಿದ್ದು ಬೆಲೆ ನಿಗದಿ ಕೂಡ ಮಾಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಸೋಯಾಬಿನ್‌ ಖರೀದಿಗಾಗಿ ಒಟ್ಟು 40 ಕೇಂದ್ರಗಳನ್ನು ಸ್ಥಾಪಿಸಿದ್ದು, ಪ್ರತಿ ಕ್ವಿಂಟಾಲ್‌ಗೆ ₹4,300 ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ. ರೈತರು ರೆಜಿಸ್ಟರ್ ಮಾಡುವ ಮೂಲಕ ತಾವು ಬೆಳೆದ ಬೆಳೆಯನ್ನು (Agriculture Tips) ಮಾರಾಟ ಮಾಡಬಹುದಾಗಿದೆ.


    ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್‌ ಸೋಯಾಬಿನ್‌ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಡಿಸೆಂಬರ್‌ 23ರವರೆಗೆ ನೋಂದಣಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ರೈತರು ಖರೀದಿ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. 2023ರ ಫೆಬ್ರವರಿ 2ರವರೆಗೆ ಸೋಯಾಬಿನ್‌ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಕರಣೆಯಲ್ಲಿ ತಿಳಿಸಲಾಗಿದೆ.


    ಇದನ್ನೂ ಓದಿ: Positive Story: ಕುಷ್ಠರೋಗಿಗಳಿಗೆ ಈ ದಂಪತಿಯೇ ಆಪತ್ಬಾಂಧವರು; ಹನಮಂತ-ಬಸಮ್ಮ ದಂಪತಿಯ ಕಥೆ ಕೇಳಿ


    ಹೆಚ್ಚಿನ ಮಾಹಿತಿಗಾಗಿ ಇಲ್ಲಿದೆ ಸಂಪರ್ಕ ಸಂಖ್ಯೆ
    ಸೋಯಾಬಿನ್‌ ಮಾರಾಟ ಮಾಡಲು ಇಚ್ಚಿಸುವ ರೈತರು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕರು ದೂರವಾಣಿ ಸಂಖ್ಯೆ 7899199990 ಅಥವಾ ಅನಿಲಕುಮಾರ ಹಾದಿಮನಿ‌ ಅವರನ್ನು ಸಂಪರ್ಕಿಸಬಹುದಾಗಿದೆ.


    ಇದನ್ನೂ ಓದಿ: Kalaburagi Fair: ಭಕ್ತಿಯ ಶಕ್ತಿಗೆ ಸರಪಳಿಯೇ ತುಂಡು ತುಂಡಾಯ್ತು! ಇದು ಕಲಬುರಗಿ ವೀರಭದ್ರೇಶ್ವರ ರಥೋತ್ಸವದ ಝಲಕ್


    ಅಥವಾ ಶಾಖಾ ವ್ಯವಸ್ಥಾಪಕರಾದ ಶೃತಿ ಸಜ್ಜನ್‌ ಅವರ ದೂರವಾಣಿ ಸಂಖ್ಯೆ 9449864446 ಸ ಸಂಪರ್ಕಿಸಲು ಕೊರಲಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: