ಕಲಬುರಗಿಯ ಬ್ರಾಂಡ್ ತೊಗರಿ ಬೇಳೆ (Tur Dal) "ಭೀಮಾ ಪಲ್ಸ್" ಬ್ರ್ಯಾಂಡ್ ಹೆಸರಿನಡಿ ಗುಣಮಟ್ಟದ ತೊಗರಿ ಬೇಳೆ ಸಂಸ್ಕರಣೆ ಮಾಡಿ ಮಾರಾಟ ಮಾಡಲು ಭೌಗೋಳಿಕ ಸೂಚ್ಯಂಕದ (GI Tag) ಲೋಗೋ ಪರವಾನಿಗೆ ಪಡೆಯಲು ಕಲಬುರಗಿ (Kalaburagi Farmers) ಮತ್ತು ಯಾದಗಿರಿ ಜಿಲ್ಲೆಯ ರೈತರು, ರೈತ ಉತ್ಪಾದಕ ಸಂಸ್ಥೆ, ಸ್ವ-ಸಹಾಯ ಸಂಘಗಳು, ಗುಂಪುಗಳು, ದಾಲ್ ಮಿಲ್ಲರ್ ಗಳು, ವ್ಯಾಪಾರಿಗಳು ಹಾಗೂ ಎಫ್.ಪಿ.ಓ.ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭೌಗೋಳಿಕ ಸೂಚ್ಯಂಕದ (GI Tag) ಲೋಗೋ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಇದರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬ ವಿವರ ಇಲ್ಲಿದೆ ನೋಡಿ.
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಗೆ ಜಿ.ಐ ಟ್ಯಾಗ್ ದೊರೆತಿದ್ದು, ಇದರ ಮಾಲೀಕರು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಮತ್ತು ರಾಯಚೂರು ಕೃಷಿ ವಿ.ವಿ. ಇದೆ. ಹೀಗಾಗಿ ಇಲ್ಲಿನ ತೊಗರಿ ಬೇಳೆಯನ್ನು ಜಿ.ಐ.ಟ್ಯಾಗ್ ಲೋಗೋದೊಂದಿಗೆ ಭೀಮಾ ಪಲ್ಸ್ ಬ್ರ್ಯಾಂಡ್ ಹೆಸರಿನಡಿ ಮಾರಾಟ ಮಾಡಲು ಪರವಾನಿಗೆ ಪಡೆಯಲು ನೋಂದಣಿ ಮಾಡಿಸುವುದು ಅವಶ್ಯಕವಾಗಿದೆ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ತಿಳಿಸಿದ್ದಾರೆ.
ಇದನ್ನೂ ಓದಿ: Indian Railways: 6 ರೈಲು ನಿಲ್ದಾಣ ಬಂದ್; ಕರ್ನಾಟಕದ ರೈಲು ಪ್ರಯಾಣಿಕರಿಗೆ ಕಹಿ ಸುದ್ದಿ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ನಮೂನೆಯನ್ನು ಕಲಬುರಗಿ ಎ.ಪಿ.ಎಂ.ಸಿ. ಯಾರ್ಡ್ ನಲ್ಲಿರುವ ಮಂಡಳಿ ಕಚೇರಿ, ರಾಯಚೂರು ಕೃಷಿ ವಿ.ವಿ. ಕಲಬುರಗಿ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳಿಂದ ಪಡೆದು ಇಲ್ಲಿಗೆ ಸಲ್ಲಿಸಲು ತಿಳಿಸಲಾಗಿದೆ.
ಇದನ್ನೂ ಓದಿ: Uttara Kannada: ಅಯ್ಯಪ್ಪನ ದರ್ಶನಕ್ಕೆ ಹೊರಟ ನಾಯಿ! ಪಾದಯಾತ್ರಿಗಳ ಜೊತೆ ಶಬರಿಮಲೆಗೆ ಪಯಣ
ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
ಹೆಚ್ಚಿನ ಮಾಹಿತಿಗೆ ಕಲಬುರಗಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಣಾನಿ, ಡಾ.ಮುನಿಸ್ವಾಮಿ-9380461607, ದೂರವಾಣಿ ಸಂಖ್ಯೆ 08472-256776 ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೋರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ