ಕಲಬುರಗಿ: ಬಾಡಿ ನಿಂತಿರೋ ತೊಗರಿ ಗಿಡ, ಇದ್ಯಾಕೆ ಹೀಗೆ ಅಳುಮುಖ ಹಾಕಿ ನಿಂತಿದ್ದೀಯಪ್ಪ ಅಂತ ಕೃಷಿಕರು (Farmers Problem) ತಾವು ಬೆಳೆದ ಬೆಳೆಯನ್ನ ಕೇಳಿದ್ರೂ ಉತ್ತರವಿಲ್ಲ. ಶ್ರಮ ಹಾಕಿ, ಬೆವರು ಹರಿಸಿ ಕಷ್ಟಪಟ್ಟು ದುಡಿದು ಹೀಗಾಯ್ತಲ್ಲ ಅನ್ನೋ ಕಲಬುರಗಿಯ (Kalaburagi News) ತೊಗರಿ ಬೆಳೆಗಾರರ (Tur Dal Farmers) ತಲೆನೋವಿಗೆ ಪರಿಹಾರ ಸಿಕ್ಕಿದೆ. ನಿಧಾನವಾಗಿಯಾದ್ರೂ ನೆಟೆರೋಗ ಎಂಬ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗೋ ಆಶಾಭಾವನೆ ಮೂಡಿದೆ.
ಈ ವರ್ಷ ಕಲಬುರಗಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಜಮೀನಿನಲ್ಲಿ ಅಪಾರ ನೀರು ಆವರಿಸಿ ಬೇರಿಗೆ ನೀರು ಹತ್ತಿರೋದ್ರಿಂದ ನೆಟೆರೋಗ ಭಾದಿಸುತ್ತಿದೆ. ಈಗಾಗಲೇ ಏನಿಲ್ಲ ಅಂದ್ರೂ ಅರ್ಧಕ್ಕೆ ಅರ್ಧದಷ್ಟು ಬೆಳೆ ನೆಟೆರೋಗದ ಪಾಲಾಗಿದೆ. ಉಳಿದಿರೋ ಫಸಲುಗಳದ್ದೂ ಗ್ಯಾರಂಟಿ ಇಲ್ಲ.
ರೈತರೇ ಗಮನಿಸಿ
ಹೀಗಾಗಿ ಕೃಷಿಕರು ತೊಗರಿಯನ್ನ ಉಳಿಸಬೇಕೆಂದರೆ ಕೃಷಿ ವಿಜ್ಞಾನಿಗಳ ಈ ಸಲಹೆ ಅನುಸರಿಸೋಕೆ ಸಲಹೆ ನೀಡಲಾಗಿದೆ. ಶೇಕಡಾ 5 ಅಥವಾ 10 ರಷ್ಟು ಬೆಳೆ ನಾಶವಾದ ರೈತರು 10 ಗ್ರಾಂ ಟೈಕೊಡರ್ಮಾವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಯ ಬಡ್ಡೆ ಭಾಗಕ್ಕೆ ಸಿಂಪಡಿಸಬೇಕು.ನೀರಿನಲ್ಲಿ ಕರಗುವ 19-19 ಗೊಬ್ಬರರನ್ನು ಪ್ರತಿ ಲೀಟರ್ ನೀರಿನಲ್ಲಿ 5 ಗ್ರಾಂ ಬೆರೆಸಿ ಸಿಂಪಡಿಸಿದಾಗ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತೆ ಅಂತಾರೆ ಪರಿಣಿತರು.
ಇದನ್ನೂ ಓದಿ: Kalaburagi: ತೆಲಂಗಾಣದಿಂದ ಕರ್ನಾಟಕಕ್ಕೆ ಉರುಳು ಸೇವೆ ಮಾಡಿದ ಮಹಿಳೆ!
ಇನ್ನು ಮುಂಬರುವ ವರ್ಷದಲ್ಲಿ ರೈತರು ಬಿತ್ತನೆಗೂ ಮೊದಲು ಮಣ್ಣು ಪರೀಕ್ಷೆಗೆ ಒಳಪಡಿಸಬೇಕು. ಯಾವ ಹಂತದಲ್ಲಿ ನ್ಯೂಟ್ರಿಯನ್ ಅಂಶವನ್ನು ಹೊಂದಿದೆ ಎಂದು ತಿಳಿದುಕೊಂಡು ಬೆಳೆಗೆ ಬೇಕಾಗುವ ಸೂಕ್ಷ್ಮ, ಮಾಧ್ಯಮ ಹಾಗೂ ಮೈಕ್ರೋ ಪೋಷಕಾಂಶಗಳು ನೀಡಬೇಕು.
ಇದನ್ನೂ ಓದಿ: Anti Rape Footwear: ಅತ್ಯಾಚಾರ ತಡೆಯುತ್ತೆ ಈ ಚಪ್ಪಲಿ! ಕಲಬುರಗಿ ವಿದ್ಯಾರ್ಥಿನಿಯಿಂದ ಸಂಶೋಧನೆ
ಬೀಜೋಪಚಾರ ಮಾಡುವುದರ ಜೊತೆಗೆ ಸರ್ಟಿಫೈಡ್ ಬೀಜಗಳನ್ನ ಬಳಸಿದರೆ ಸಮೃದ್ಧವಾದ ಬೆಳೆಯನ್ನು ಪಡೆಯಬಹುದು ಎಂಬುವುದು ಕೃಷಿ ವಿಜ್ಞಾನಿಗಳ ಸಲಹೆ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ