• Home
 • »
 • News
 • »
 • kalburgi
 • »
 • Kalaburagi: ಮಾದಕ ವ್ಯಸನ ಬಿಡಿಸೋಕೆ ಪಾದಯಾತ್ರೆ ಹೊರಟ ಸ್ವಾಮೀಜಿ!

Kalaburagi: ಮಾದಕ ವ್ಯಸನ ಬಿಡಿಸೋಕೆ ಪಾದಯಾತ್ರೆ ಹೊರಟ ಸ್ವಾಮೀಜಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಆರಂಭವಾದ ಸದ್ಭಾವನ ಪಾದಯಾತ್ರೆ 23 ದಿನಗಳ ಕಾಲ 118 ಹಳ್ಳಿಗಳಲ್ಲಿ ಸಂಚಾರ ಮಾಡಲಿದೆ.

 • News18 Kannada
 • 4-MIN READ
 • Last Updated :
 • Gulbarga, India
 • Share this:

  ಕಲಬುರಗಿ: ಜೋಳಿಗೆ ಹಾಕಿ ಪಾದಯಾತ್ರೆ ಹೊರಟಿರೋ ಪ್ರಸಿದ್ಧ ಮಠದ ಸ್ವಾಮೀಜಿ. ಮತ್ತೊಂದೆಡೆ ತಂಬಾಕು, ಗುಟ್ಕಾ, ಸಿಗರೇಟು, ಡ್ರಿಂಕ್ಸ್ ಬಾಟಲಿಗಳನ್ನ ಜೋಳಿಗೆಗೆ (Swamiji Padayatra) ಹಾಕ್ತಿರೋ ಜನರು. ಈ ದೃಶ್ಯಗಳು ಕಂಡುಬಂದಿದ್ದು ಕಲಬುರಗಿ ಜಿಲ್ಲೆಯ (Kalaburagi News) ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ. ಇತ್ತೀಚಿಗೆ ದುಶ್ಚಟಗಳಿಗೆ ದಾಸರಾಗೋದು ಹೆಚ್ಚಾಗ್ತಿದೆ. ಜೀವಕ್ಕೆ ಹಾನಿ ಅಂತಾ ಗೊತ್ತಿದ್ರೂ ಮಾದಕ ವಸ್ತುಗಳನ್ನ ತಿಂದು ಕ್ಯಾನ್ಸರ್ ಸೇರಿದಂತೆ ಇನ್ನಿತರ ಮಾರಕ ಕಾಯಿಲೆಗಳಿಗೆ ಬಲಿಯಾಗ್ತಿದಾರೆ.


  ಸಮಾಜದಲ್ಲಿನ ದುಶ್ಚಟಗಳನ್ನ ಹೋಗಲಾಡಿಸಲು ಅಫಜಲಪುರ ಪಟ್ಟಣದ ಶ್ರೀ ಗುರುಮಳೇಂದ್ರ ಶಿವಾಚಾರ್ಯರ ಸಂಸ್ಥಾನ ಹಿರೇಮಠದ ಸ್ವಾಮೀಜಿ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಮುಂದಾಗಿದ್ದಾರೆ. ಅದಕ್ಕಾಗಿ ಇಂದು ಮಣ್ಣೂರು ಗ್ರಾಮದಲ್ಲಿ ಸದ್ಭಾವನ ಪಾದಯಾತ್ರೆ ಮೂಲಕ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಆರಂಭಿಸಿದ್ದಾರೆ.
  ಜೋಳಿಗೆಗೆ ಗುಟ್ಕಾ, ತುಂಬಾಕು, ಮದ್ಯದ ಬಾಟಲಿ ಹಾಕಲು ಮನವಿ
  ಮಣ್ಣೂರ ಗ್ರಾಮದ ಪ್ರತಿಯೊಂದು ಗಲ್ಲಿಗಳಲ್ಲಿ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ ಸ್ವಾಮೀಜಿಯವರ ಜೋಳಿಗೆಗೆ ಜನರು ಗುಟ್ಕಾ, ತುಂಬಾಕು, ಮದ್ಯದ ಬಾಟಲಿಗಳು ಹಾಕಿ ಸದ್ಭಾವನ ಪಾದಯಾತ್ರೆಗೆ ಜೈ ಎನ್ನುತ್ತಿದ್ದಾರೆ.


  ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ
  ಇನ್ನು ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಸದ್ಭಾವನ ಪಾದಯಾತ್ರೆಗೆ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಪಾದಯಾತ್ರೆಗೆ ಭಾರಿ ಜನಸ ಸ್ಪಂದನೆ ವ್ಯಕ್ತವಾಗ್ತಿದೆ. ಸ್ವಯಂಚಾಲಿತವಾಗಿ ದುಶ್ಚಟಗಳನ್ನ ಬಿಟ್ಟವರಿಗೆ ಸ್ವಾಮೀಜಿಗಳು ಲಿಂಗದಿಕ್ಷೆ ಮಾಡ್ತಿದ್ದಾರೆ.


  ಇದನ್ನೂ ಓದಿ: Koranti Hanuman: ಮಹಾಮಾರಿ ದೂರ ಮಾಡುವ ಕೋರಂಟಿ ಹನುಮಾನ್!


  118 ಹಳ್ಳಿಗಳಲ್ಲಿ ಸಂಚಾರ
  ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಆರಂಭವಾದ ಸದ್ಭಾವನ ಪಾದಯಾತ್ರೆ 23 ದಿನಗಳ ಕಾಲ 118 ಹಳ್ಳಿಗಳಲ್ಲಿ ಸಂಚಾರ ಮಾಡಲಿದೆ. ಲಿಂಗೈಕ್ಯ ಶ್ರೀ ಶಾಂತವೀರ ಮಳೇಂದ್ರ ಶಿವಾಚಾರ್ಯರ ಜನ್ಮಶತಮಾನೋತ್ಸವ ಅಂಗವಾಗಿ ಜನರಲ್ಲಿ ಸದ್ಗುಣಗಳನ್ನ ಬಿತ್ತಲು ಈ ಸದ್ಭಾವನ ಪಾದಯಾತ್ರೆ ಆರಂಭಿಸಲಾಗಿದೆ.


  ಇದನ್ನೂ ಓದಿ: Baby Elephant In Hassan: ಗ್ರಾಮಸ್ಥರೇ ತೋಡಿದ ಖೆಡ್ಡಾಕ್ಕೆ ಬಿದ್ದ ಮುದ್ದಿನ ಮರಿ ಕಾಡಾನೆ!


  ಮಾದಕ ವಸ್ತುಗಳನ್ನು ಸೇವಿಸಿ ಜೀವನವನ್ನೇ ಹಾಳಾಗೋದನ್ನ ತಡೆಯೋಕೆ ಹಮ್ಮಿಕೊಂಡಿರೋ ಈ ಪಾದಯಾತ್ರೆಗೆ ಭರಪೂರ ಬೆಂಬಲ ವ್ಯಕ್ತವಾಗಿದೆ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: