Kalyana Karnataka: ಹೈನುಗಾರರಿಗೆ ಸಿಹಿಸುದ್ದಿ! ರೈತರ ಮನೆ ಬಾಗಿಲಿಗೇ ಬರುತ್ತೆ ಸಂಚಾರಿ ಚಿಕಿತ್ಸಾಲಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಶು ಸಂಚಾರಿ ಚಿಕಿತ್ಸಾಲಯಕ್ಕೆ ಕೇಂದ್ರ ಸರ್ಕಾರವು 275 ಸಂಚಾರಿ ಪಶು ಚಿಕಿತ್ಸಾಲಯಗಳನ್ನು ನಡೆಸಲು ಆರ್ಥಿಕ ನೆರವು ನೀಡಲಿದೆ. ಅವುಗಳಲ್ಲಿ 68 ವಾಹನಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾರ್ಯನಿರ್ವಹಿಸಲಿವೆ.

  • News18 Kannada
  • 2-MIN READ
  • Last Updated :
  • Gulbarga, India
  • Share this:

    ಕಲಬುರಗಿ: ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ (Karnataka Government) 68 ಪಶು ಸಂಚಾರಿ ಚಿಕಿತ್ಸಾಲಯಗಳನ್ನು (Mobile Hospital) ಆರಂಭಿಸಲು ನಿರ್ಧರಿಸಿದೆ. ಈ ಮೂಲಕ ಸರ್ಕಾರ ಜಾನುವಾರುಗಳಿಗೆ ಮನೆ ಬಾಗಿಲಲ್ಲೇ ಚಿಕಿತ್ಸೆ ನೀಡಲು ಮುಂದಾಗಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾದಿಂದಲೂ ಶ್ಲಾಘನೆ ವ್ಯಕ್ತವಾಗಿದೆ.


    ಶೀಘ್ರದಲ್ಲೇ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ 68 ಸಂಚಾರಿ ಪಶು ಚಿಕಿತ್ಸಾಲಯಗಳು ಆರಂಭಿಸುವ ಆಲೋಚನೆ ನಡೆದಿದೆ. ಆದಷ್ಟು ಬೇಗ ಜಾನುವಾರುಗಳಿಗೆ ಮನೆ ಬಾಗಿಲಲ್ಲೇ ಚಿಕಿತ್ಸೆ ದೊರೆಯಲಿದೆ. ಪ್ರಾಣಿಗಳ ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆಯಡಿ ಪ್ರಾಣಿಗಳ ಸಂಚಾರಿ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.


    ಹಿಂದೆಯಿಂದಲೂ ಇದ್ದ ಯೋಜನೆ
    ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಆರಂಭಿಸಿ ಆಯ್ದ ಜಿಲ್ಲೆಗಳಿಗೆ 18 ವಾಹನಗಳನ್ನು ಮಂಜೂರು ಮಾಡದ್ದರು. ಇದೀಗ ಇನ್ನೂ 68 ಚಿಕಿತ್ಸಾಲಯಗಳ ಮೂಲಕ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಕಲ್ಯಾಣ ಕರ್ನಾಟಕದಲ್ಲಿ ಎಲ್ಲಾ ಚಿಕಿತ್ಸಾಲಯಗಳು ಕಾರ್ಯನಿರ್ವಹಿಸಲಿವೆ ಎಂಬ ಮಾಹಿತಿಯನ್ನು ಸಚಿವ ಚವ್ಹಾಣ್ ನೀಡಿದ್ದಾರೆ.


    ಎಲ್ಲೆಲ್ಲಿ ಎಷ್ಟು ಚಿಕಿತ್ಸಾಲಯಗಳು
    ಪಶು ಸಂಚಾರಿ ಚಿಕಿತ್ಸಾಲಯಕ್ಕೆ ಕೇಂದ್ರ ಸರ್ಕಾರವು 275 ಸಂಚಾರಿ ಪಶು ಚಿಕಿತ್ಸಾಲಯಗಳನ್ನು ನಡೆಸಲು ಆರ್ಥಿಕ ನೆರವು ನೀಡಲಿದೆ. ಅವುಗಳಲ್ಲಿ 68 ವಾಹನಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾರ್ಯನಿರ್ವಹಿಸಲಿವೆ.



    ಇದನ್ನೂ ಓದಿ: Indian Army: ಭಾರತೀಯ ಸೇನೆ ಸೇರಲು ಸುವರ್ಣಾವಕಾಶ! ಈಗಲೇ ಹೀಗೆ ಅಪ್ಲೈ ಮಾಡಿ


    ಉಳಿದ ಚಿಕಿತ್ಸಾಲಯಗಳು ರಾಜ್ಯದ ಇತರ ಭಾಗಗಳಲ್ಲಿ ಕಾರ್ಯನಿರ್ವಹಿಸಲಿವೆ. 275 ಸಂಚಾರಿ ಪಶು ಚಿಕಿತ್ಸಾಲಯಗಳಲ್ಲಿ ಬೆಂಗಳೂರು ವಿಭಾಗಕ್ಕೆ ಎಪ್ಪತ್ತು ವಾಹನಗಳು, ಬೆಳಗಾವಿ ವಿಭಾಗಕ್ಕೆ 82 ಸಂಚಾರಿ ಕ್ಲಿನಿಕ್‌ಗಳನ್ನು ಮಂಜೂರು ಮಾಡಲಾಗುವುದು ಎಂದು ತಿಳಿಸಲಾಗಿದೆ.


    ಇದನ್ನೂ ಓದಿ:Kalaburagi: ಮನೆಯೊಂದು 101 ಬಾಗಿಲು! ಕಲಬುರಗಿಯಲ್ಲೊಂದು ವಿಶಿಷ್ಟ ಮನೆ


    ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ
    ಪಶು ಸಂಚಾರಿ ಚಿಕಿತ್ಸಾಲಯ ಸೌಲಭ್ಯ ಪಡೆಯಲು ರೈತರು ರೈತರು ಟೋಲ್ ಫ್ರೀ ಸಂಖ್ಯೆ-1962 ಅಥವಾ 8277100200 ಕಂಟ್ರೋಲ್ ರೂಮ್ ಸಂಖ್ಯೆಗೆ ಕರೆ ಮಾಡಬಹುದು. ಇದು ಮೊಬೈಲ್ ಕ್ಲಿನಿಕ್ ಅನ್ನು ರೈತರ ಮನೆ ಬಾಗಿಲಿಗೆ ಕಳುಹಿಸುತ್ತದೆ. ಪ್ರತಿ ಸಂಚಾರಿ ಚಿಕಿತ್ಸಾಲಯದಲ್ಲಿ ಪಶುವೈದ್ಯರು ಮತ್ತು ಅವರ ಸಹಾಯಕರು ಇರಲಿದ್ದಾರೆ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: