• Home
  • »
  • News
  • »
  • jobs
  • »
  • Job Offer: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್- Zomatoದಲ್ಲಿ ಶೀಘ್ರದಲ್ಲೇ 800 ಹುದ್ದೆಗಳ ಭರ್ತಿ

Job Offer: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್- Zomatoದಲ್ಲಿ ಶೀಘ್ರದಲ್ಲೇ 800 ಹುದ್ದೆಗಳ ಭರ್ತಿ

ಜೊಮ್ಯಾಟೊ

ಜೊಮ್ಯಾಟೊ

ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಗೋಯಲ್ ಅವರನ್ನು "ಕೆಲಸಕ್ಕೆ ಸೇರಿಸಿಕೊಂಡು ನಂತರ ತೆಗೆದು ಹಾಕುವುದಿಲ್ಲ ಅಂತ ಏನ್ ಗ್ಯಾರೆಂಟಿ" ಅಂತ ಕೇಳಿದ್ದಕ್ಕೆ ಗೋಯಲ್ ಅವರು "ಎಂದಿಗೂ ಇಲ್ಲ" ಅಂತ ಉತ್ತರಿಸಿದ್ದಾರೆ.

  • Share this:

ನಾವು ಈಗ ದಿನ ಬೆಳಗಾದರೆ ಪತ್ರಿಕೆಯಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ(Tv Channels) ಈ ದೊಡ್ಡ ದೊಡ್ಡ ಐಟಿ ಕಂಪನಿಗಳು(IT Companies) ಸಾವಿರಗಟ್ಟಲೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿರುವ ಸುದ್ದಿಗಳನ್ನು ನೋಡುತ್ತಿದ್ದೇವೆ. ದೊಡ್ಡ ಐಟಿ ಕಂಪನಿಗಳಾದ ವಿಪ್ರೋ, ಮೈಕ್ರೋಸಾಫ್ಟ್, ಅಮೆಜಾನ್, ಗೂಗಲ್(Google), ಮೆಟಾ(Meta) ಮತ್ತು ಟ್ವಿಟರ್ ಈಗಾಗಲೇ ಹಲವಾರು ಉದ್ಯೋಗಿಗಳನ್ನು(Employees) ಕೆಲಸದಿಂದ ತೆಗೆದಿದ್ದು ನಮಗೆಲ್ಲಾ ಗೊತ್ತೇ ಇದೆ.


800 ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಿದೆಯಂತೆ ಜೊಮ್ಯಾಟೊ 


ಆದರೆ ಇಲ್ಲೊಂದು ವಿಚಿತ್ರವಾದ ಅನ್ನೋದಕ್ಕಿಂತಲೂ ಆಶ್ಚರ್ಯ ಮೂಡಿಸುವ ಸುದ್ದಿ ಏನೆಂದರೆ ಇಷ್ಟೊಂದು ಉದ್ಯೋಗಿಗಳನ್ನು ವಜಾಗೊಳಿಸುವುದರ ಮಧ್ಯೆ, ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಅವರು ಸೋಮವಾರ ಆಹಾರ ವಿತರಣಾ ಸಂಸ್ಥೆಯಲ್ಲಿ ಸುಮಾರು 800 ಉದ್ಯೋಗಾವಕಾಶಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಅಂತ ಒಂದು ಜಾಹೀರಾತನ್ನು ಪೋಸ್ಟ್ ಮಾಡಿದ್ದಾರೆ.


ಲಿಂಕ್ಡ್ಇನ್ ಪೋಸ್ಟ್ ನಲ್ಲಿ ಗೋಯಲ್ ಅವರು ತಮ್ಮ ಕಂಪನಿಯು ಸಿಬ್ಬಂದಿ ಮುಖ್ಯಸ್ಥರಿಂದ ಹಿಡಿದು ಜನರಲಿಸ್ಟ್, ಗ್ರೋತ್ ಮ್ಯಾನೇಜರ್, ಪ್ರಾಡೆಕ್ಟ್ ಓನರ್ ಮತ್ತು ಸಾಫ್ಟ್‌ವೇರ್ ಡೆವಲಪ್ಮೆಂಟ್ ಎಂಜಿನಿಯರ್ ಸೇರಿದಂತೆ ಐದು ಹುದ್ದೆಗಳಲ್ಲಿ ನೇಮಕ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಜೊಮ್ಯಾಟೊ ಸಿಇಒ ಮಾಡಿದ ಪೋಸ್ಟ್ ನಲ್ಲಿ ಏನೆಲ್ಲಾ ಮಾಹಿತಿ ಇದೆ ಗೊತ್ತೇ?


ಈ ಹುದ್ದೆಗಳ ಅಡಿಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಟ್ಯಾಗ್ ಮಾಡಲು ಮತ್ತು ಉದ್ಯೋಗ ಪ್ರೊಫೈಲ್ ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಖುದ್ದು ಸಿಇಒ ಅವರು ತಮ್ಮ ಇ-ಮೇಲ್ ಐಡಿಯನ್ನು ನೀಡಿದ್ದು, deepinder@zomato.com ಇದರ ಮೂಲಕವೇ ಅವರನ್ನು ಸಂಪರ್ಕಿಸಲು ಜನರಿಗೆ ಹೇಳಿದ್ದಾರೆ. ಫುಡ್ ಟೆಕ್ ಕಂಪನಿಯ ಸ್ಥಾಪಕರು ಪ್ರತಿ ಪಾತ್ರಕ್ಕೆ ವಿಶೇಷಣಗಳು ಮತ್ತು ಅವಶ್ಯಕತೆಗಳನ್ನು ಸಹ ಈ ಪೋಸ್ಟ್ ನಲ್ಲಿ ಸೇರಿಸಿದ್ದಾರೆ.


ಕಾರ್ಯಕ್ಷಮತೆಯ ಆಧಾರದ ಮೇಲೆ ಕಂಪನಿಯು ತನ್ನ ಸುಮಾರು 3 ಪ್ರತಿಶತದಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದ ಎರಡು ತಿಂಗಳ ನಂತರ ಸಾಮೂಹಿಕ ನೇಮಕಾತಿಯ ಈ ಪೋಸ್ಟ್ ಅನ್ನು ನೋಡಿದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಆಶ್ಚರ್ಯ ಪಟ್ಟುಕೊಂಡು ಇದನ್ನು "ಮಾರ್ಕೆಟಿಂಗ್ ಗಿಮಿಕ್" ಎಂದು ಕರೆದಿದ್ದಾರೆ.


ಇದನ್ನೂ ಓದಿ: JOBS: ಕನ್ನಡ ಮಾತಾಡೋಕೆ ಬಂದ್ರೆ 28 ಸಾವಿರ ಸಂಬಳ-ಆಸಕ್ತರು ಈಗಲೇ ಅಪ್ಲೈ ಮಾಡಿ


ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಗೋಯಲ್ ಅವರನ್ನು "ಕೆಲಸಕ್ಕೆ ಸೇರಿಸಿಕೊಂಡು ನಂತರ ತೆಗೆದು ಹಾಕುವುದಿಲ್ಲ ಅಂತ ಏನ್ ಗ್ಯಾರೆಂಟಿ" ಅಂತ ಕೇಳಿದ್ದಕ್ಕೆ ಗೋಯಲ್ ಅವರು "ಎಂದಿಗೂ ಇಲ್ಲ" ಅಂತ ಉತ್ತರಿಸಿದ್ದಾರೆ.


"ಇದು 24x7 ಕೆಲಸವಾಗಿದ್ದು, ಅಲ್ಲಿ ಕೆಲಸ ಮತ್ತು ಜೀವನ ಸಮತೋಲನದ ಸಾಂಪ್ರದಾಯಿಕ ಉದ್ಯೋಗಿ ಮನಸ್ಥಿತಿ ಕೆಲಸ ಮಾಡುವುದಿಲ್ಲ" ಎಂದು ಜಾಬ್ ಪೋಸ್ಟ್ ನಲ್ಲಿ ಬರೆಯಲಾಗಿದೆ.


ಈ ಕೆಲಸದ ಬಗ್ಗೆ ಹೇಗೆಲ್ಲಾ ಕಾಮೆಂಟ್ ಮಾಡಿದ್ದಾರೆ ನೋಡಿ


ಕೆಲವು ಲಿಂಕ್ಡ್ಇನ್ ಬಳಕೆದಾರರು ಇದನ್ನು "ಶೋಷಣೆ" ಎಂದು ಕರೆದರು ಮತ್ತು ಸಿಇಒಗಳು ನಿಗದಿಪಡಿಸಿದ ಈ "ವಿಷಕಾರಿ" ಕೆಲಸದ ವಾತಾವರಣವನ್ನು ಕಟುವಾಗಿ ಟೀಕಿಸಿದರು.


ಸರಿಯಾದ ಆದ್ಯತೆ ಮತ್ತು ಫಲಿತಾಂಶಗಳನ್ನು ಪಡೆಯಲು ಉದ್ಯೋಗ ಹೊಂದಿರುವವರು "ಮಿನಿ-ಸಿಇಒ" ಆಗಿರುತ್ತಾರೆ ಎಂದು ವಿವರಣೆಯಲ್ಲಿ ಸೇರಿಸಲಾಗಿದೆ.


ಇತರ ಸ್ಥಾನಗಳ ಪಟ್ಟಿಯಲ್ಲಿ, ಜನರಲಿಸ್ಟ್ ಹುದ್ದೆಯಲ್ಲಿ ಆಯ್ಕೆಯಾಗುವವರು ನಾಯಕತ್ವ ತಂಡದೊಂದಿಗೆ ಸಮನ್ವಯ ಸಾಧಿಸುತ್ತಾರೆ ಮತ್ತು ಗ್ರೋತ್ ಮ್ಯಾನೇಜರ್ ಅವರು ಜೊಮ್ಯಾಟೊದ ರೆಸ್ಟೋರೆಂಟ್ ಪಾಲುದಾರರ ಪೋರ್ಟ್‌ಫೋಲಿಯೋದೊಂದಿಗೆ ಕೆಲಸ ಮಾಡುತ್ತಾರೆ ಎಂದು ಗೋಯಲ್ ವಿವರಿಸಿದರು.ಏನದು ಇತ್ತೀಚಿನ ಹಗರಣ?


ಇತ್ತೀಚೆಗೆ, ಗೋಯಲ್ ತಮ್ಮ ವಿತರಣಾ ಏಜೆಂಟರನ್ನು ಒಳಗೊಂಡ ಹಗರಣವನ್ನು ಒಪ್ಪಿಕೊಂಡಿದ್ದರು, ಇದನ್ನು ಉದ್ಯಮಿ ವಿನಯ್ ಸತಿ ಎತ್ತಿ ತೋರಿಸಿದ್ದರು. ಜೊಮ್ಯಾಟೊದಲ್ಲಿ ಆರ್ಡರ್ ಮಾಡುವಾಗ ಕ್ಯಾಶ್ ಆನ್ ಡೆಲಿವರಿ ವಿಧಾನವನ್ನು ಬಳಸುವಂತೆ ಡೆಲಿವರಿ ಎಕ್ಸಿಕ್ಯೂಟಿವ್ ಕೇಳಿದರು ಎಂದು ಸತಿ ಹೇಳಿದ್ದಾರೆ.


"ಕ್ಯಾಶ್ ಆನ್ ಡೆಲಿವರಿ ಮೂಲಕ ನೀವು 700-800 ರೂಪಾಯಿಗಳ ಮೌಲ್ಯದ ಆಹಾರವನ್ನು ಆರ್ಡರ್ ಮಾಡಿದಾಗ, ಅದಕ್ಕಾಗಿ ನೀವು ಕೇವಲ 200 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.


ನೀವು ಆಹಾರವನ್ನು ತೆಗೆದುಕೊಂಡಿಲ್ಲ ಅಂತ ಅಲ್ಲಿ ತೋರಿಸುತ್ತೇನೆ, ಆದರೆ ನೀವು ಆರ್ಡರ್ ಮಾಡಿದ ಆಹಾರ ನಿಮಗೆ ಬಂದು ತಲುಪುತ್ತದೆ ಎಂದು ನಾನು ಜೊಮ್ಯಾಟೊಗೆ ತೋರಿಸುತ್ತೇನೆ" ಎಂದು ಡೆಲಿವರಿ ಎಕ್ಸಿಕ್ಯೂಟಿವ್ ಹೇಳಿದರು ಅಂತ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದರು.

Published by:Latha CG
First published: