Amazonನಲ್ಲಿ ಅರೆಕಾಲಿಕ, ಪೂರ್ಣ ಉದ್ಯೋಗ; ಯಾವುದೇ ಪದವಿ ಬೇಡ, ಪರೀಕ್ಷೆ ಇಲ್ಲ; ಇಲ್ಲಿದೆ ಮಾಹಿತಿ

ದೈತ್ಯ ಇ ಕಾಮರ್ಸ್​ ಸಂಸ್ಥೆಯಾಗಿರುವ ಅಮೆಜಾನ್​ನಲ್ಲಿ ಡೆಲಿವರಿ ಪಾರ್ಟನರ್​ ಆದರೆ ಸಾಕು ಉತ್ತಮ ಸಂಪಾದನೆ ಜೊತೆ ಉದ್ಯೋಗವನ್ನು ಪಡೆಯಬಹುದು

amazon jobs

amazon jobs

  • Share this:
    ತಕ್ಷಣಕ್ಕೆ ಉತ್ತಮ ಆದಾಯದ ಮಾರ್ಗ ನೋಡುತ್ತಿದ್ದಂತೆ ನಿಮಗೆ ಅಮೆಜಾನ್​ (amazon) ಉತ್ತಮ ಅವಕಾಶ. ದೇಶದ ಉದ್ದಗಲಕ್ಕೂ ವ್ಯಾಪಿಸಿರುವ ಅಮೆಜಾನ್​ನಲ್ಲಿ ಅರೆಕಾಲಿಕ ಅಥವಾ ಪೂರ್ಣ ಅವಧಿ ಉದ್ಯೋಗ ಮಾಡುವ ಮೂಲಕ ನೀವು ಸಂಪಾದನೆ ಮಾಡಬಹುದು. ಅರೆ ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ. ದೈತ್ಯ ಇ ಕಾಮರ್ಸ್​ ಸಂಸ್ಥೆಯಾಗಿರುವ ಅಮೆಜಾನ್​ನಲ್ಲಿ ಡೆಲಿವರಿ ಪಾರ್ಟನರ್​ ಆದರೆ ಸಾಕು ಉತ್ತಮ ಸಂಪಾದನೆ ಜೊತೆ ಉದ್ಯೋಗವನ್ನು ಪಡೆಯಬಹುದು. ಇದರಿಂದ ವಾರ್ಷಿಕವಾಗಿ ರೂ 3 ಲಕ್ಷದವರೆಗೆ ಗಳಿಸಬಹುದು. ಹಾಗಾದ್ರೆ ಹೇಗೆ ಈ ಡೆಲಿವರಿ ಪಾರ್ಟನರ್​ ಆಗಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ

    ಅಮೆಜಾನ್​ ಡೆಲಿವರಿ ಪಾರ್ಟನರ್​ ಆಗುವುದು ಹೇಗೆ? (how to become Amazon delivery Partener)
    -ಅಮೆಜಾನ್ ಫ್ಲೆಕ್ಸ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
    -ಅದರಂತೆ ಅಮೆಜಾನ್ ಫ್ಲೆಕ್ಸ್‌ನ FAQ ಪುಟಕ್ಕೆ ಭೇಟಿ ನೀಡಬೇಕು
    -ಅಮೆಜಾನ್ ವಿತರಣಾ ಪಾಲುದಾರರಾಗಲು, ನೀವು ಮೊದಲು ನಿಮ್ಮ ಕೆಲವು ಮಾಹಿತಿಯನ್ನು ಒದಗಿಸಬೇಕು
    -ಅಮೆಜಾನ್ ಫ್ಲೆಕ್ಸ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು
    -ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ನೀವು ಯಾವ ರೀತಿಯ ವಾಹನವನ್ನು ಹೊಂದಿದ್ದೀರಿ ಎಂಬುವುದು ಸೇರಿದ ಅಲ್ಲಿ ಕೇಳಿದ ಮಾಹಿತಿ ಒದಗಿಸಬೇಕು
    -ನಂತರ ನೀವು ಆಪ್‌ನಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳಬೇಕು.
    -ನಿಮ್ಮ ಪ್ರಸ್ತುತ ಅಮೆಜಾನ್ ಖಾತೆಯ ಮೂಲಕ ಆಪ್‌ಗೆ ಲಾಗ್ ಇನ್ ಆಗಬೇಕು
    -ನಿಮ್ಮ ಬಳಿ ಅಮೆಜಾನ್​ ಖಾತೆ ಇಲ್ಲದಿದ್ದರೆ, ನೀವು ಹೊಸದನ್ನು ರಚಿಸಬಹುದು.

    ಈ ಮಾಹಿತಿ ನೀಡುವುದು ಅಗತ್ಯ (these information is necessary)
    ನೀವು ಆಪ್ ಕೇಳಿದ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು. ಇದಾದ ಬಳಿಕ ನಿಮ್ಮ ಸೇವಾ ಪ್ರದೇಶವನ್ನು ಆರಿಸಬೇಕು. ನೀವು ವಿತರಣಾ ಸೇವೆಯನ್ನು ಒದಗಿಸಲು ಬಯಸುತ್ತೀರಿ. ತೆರಿಗೆ ಕಡಿತ ಮತ್ತು ಪಾವತಿಯ ರಸೀದಿಗಾಗಿ ನೀವು ಇತರ ಕೆಲವು ಮಾಹಿತಿಯನ್ನು ಸಹ ನೀಡಬೇಕಾಗುತ್ತದೆ

    ಡೆಲಿವರಿ ಪಾರ್ಟನರ್​ ಆಗಲು ಏನು ಬೇಕು (what is Needed for amazon delivery partner)
    ಅಮೆಜಾನ್​ನಲ್ಲಿ ಡೆಲಿವರಿ ಪಾರ್ಟನರ್​ ಆಗಲಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶ. ನಿಮ್ಮ ಬಳಿ ಆಂಡ್ರಾಯ್ಡ್​ ಪೋನ್​ ಇರಬೇಕು. ಅದರಲ್ಲಿ ಕನಿಷ್ಠ 2GB RAM ಇರಬೇಕು. ಫೋನ್ ಫ್ಲ್ಯಾಶ್, ಜಿಪಿಎಸ್ ಸ್ಥಳ ಸೇವೆ ಮತ್ತು ಧ್ವನಿ ಮತ್ತು ಡೇಟಾ ಸಂಪರ್ಕ, ಕ್ಯಾಮರಾದೊಂದಿಗೆ ಸಕ್ರಿಯ ಸಿಮ್ ಕಾರ್ಡ್ ಹೊಂದಿರಬೇಕು.
    ಎರಡನೇ ಪ್ರಮುಖ ಅಂಶ ಎಂದರೆ ನಿಮ್ಮ ಬಳಿ ನಿಮ್ಮದೇ ಸ್ವಂತ ವಾಹನ ಹೊಂದಿರಬೇಕು. ಮಾನ್ಯತೆ ಪಡೆದ ಡ್ರೈವಿಂಗ್​ ಲೈಸೆನ್ಸ್​, ವಾಹನದ ಆರ್​ಸಿ ಬುಕ್​, ವಿಮಾ ಪತ್ರ, ಮಾಲಿನ್ಯ ಪ್ರಮಾಣಪತ್ರ,ಪ್ಯಾನ್ ಕಾರ್ಡ್ ಮತ್ತು ಉಳಿತಾಯ ಅಥವಾ ಪಾವತಿ ಸ್ವೀಕೃತಿಗಾಗಿ ಚಾಲ್ತಿ ಖಾತೆಯನ್ನು ಹೊಂದಿರಬೇಕು.

    ಹೇಗೆ ಸಂಪಾದನೆ (how to Earn)
    ಡೆಲಿವರಿ ಪಾರ್ಟನರ್​ ಪ್ರತಿ ಗಂಟೆಗೆ 120 ರಿಂದ 140 ರೂಪಾಯಿಗಳನ್ನು ಗಳಿಸಬಹುದು. ಗರಿಷ್ಠ 6 ಗಂಟೆಗಳ ಕಾಲ ಕೆಲಸ ಮಾಡಬಹುದು. ಇದರ ಪ್ರಕಾರ, ನೀವು ತಿಂಗಳಿಗೆ ಸರಾಸರಿ ರೂ. 25,000 ಮತ್ತು ವಾರ್ಷಕ್ಕೆ ಸರಾಸರಿ ರೂ. 3 ಲಕ್ಷ ರೂ ಗಳಿಸಬಹುದು. ಈ ಉದ್ಯೋಗವನ್ನು ಅರೆಕಾಲಿಕವಾಗಿ ಮಾಡಿದರೆ ದಿನಕ್ಕೆ ಗರಿಷ್ಠ 4 ಗಂಟೆ ಕೆಲಸ ಮಾಡಿದರೆ, ನೀವು ತಿಂಗಳಿಗೆ ಸರಾಸರಿ ರೂ 17,000 ಗಳಿಸಬಹುದು. ವರ್ಷಕ್ಕೆ ಸರಾಸರಿ 2 ಲಕ್ಷದವರೆಗೆ ಗಳಿಸಬಹುದು. ಅಮೆಜಾನ್ ಪ್ರಕಾರ, ಡೆಲಿವರಿ ಪಾರ್ಟನರ್​ ತಮ್ಮ ಗಳಿಕೆಯ ಶೇ 1 ರಷ್ಟನ್ನು ತೆರಿಗೆಯಾಗಿ ಪಾವತಿಸಬೇಕು

    ಅರ್ಜಿ ಸಲ್ಲಿಕೆ ಹೇಗೆ (how to apply)
    ಈ ಹುದ್ದೆ ಆರಿಸಿಕೊಳ್ಳಬೇಕು ಎಂದಾದರೆ ಈ ಲಿಂಕ್​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
    Published by:Seema R
    First published: