FlipKart Jobs: FlipKartನಲ್ಲಿದೆ ವರ್ಕ್​ ಫ್ರಂ ಹೋಂ ಹುದ್ದೆ; ಇಂದೇ ಅಪ್ಲೈ ಮಾಡಿ

ವರ್ಕ್ ಫ್ರಮ್‌ ಹೋಮ್‌ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಭರ್ಜರಿ ನ್ಯೂಸ್‌ ಇದೆ. ಭಾತದ ಪ್ರತಿಷ್ಠಿತ ಕಂಪನಿಯೊಂದು ಹಲವು ನೇಮಕಾತಿಗಳನ್ನು ಹೊರಡಿಸಿದ್ದು, ವರ್ಕ್‌ ಫ್ರಮ್‌ ಹೋಮ್‌ ಗೆ ಆದ್ಯತೆ ನೀಡಿದೆ. ಯಾವ ಕಂಪನಿ? ಏನು ಕೆಲಸ? ಯಾವಾಗ ಅರ್ಜಿ ಸಲ್ಲಿಕೆ ಅಂತಿರಾ? ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್

 • Share this:
  ಕಚೇರಿಗೆ (Office) ಹೋಗಿ ಕೆಲಸ ಮಾಡಲು ಸಾಧ್ಯವಾಗದೇ ಇರುವವರಿಗೆ ವರ್ಕ್‌ ಫ್ರಮ್‌ ಹೋಮ್‌ (Work From Home) ಖಂಡಿತ ಒಂದು ವರದಾನ. ಚಿಕ್ಕ ಮಕ್ಕಳಿರುವ ಮಹಿಳೆಯರು, ದೂರದ ಊರಿಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗದೇ ಇರುವವರು ಹೀಗೆ ಹಲವರು ಮನೆಯಿಂದಲೇ ಮಾಡುವ ಕೆಲಸ ಯಾವುದಾದರೂ ಇದೆಯೇ ಎಂದು ಹುಡುಕುತ್ತಲೇ ಇರುತ್ತಾರೆ. ಹೀಗೆ ವರ್ಕ್ ಫ್ರಮ್‌ ಹೋಮ್‌ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಭರ್ಜರಿ ನ್ಯೂಸ್‌ ಇದೆ. ಭಾರತದ ಪ್ರತಿಷ್ಠಿತ ಕಂಪನಿಯೊಂದು (Company) ಹಲವು ನೇಮಕಾತಿಗಳನ್ನು ಹೊರಡಿಸಿದ್ದು, ವರ್ಕ್‌ ಫ್ರಮ್‌ ಹೋಮ್‌ ಗೆ ಆದ್ಯತೆ ನೀಡಿದೆ. ಯಾವ ಕಂಪನಿ? ಏನು ಕೆಲಸ? ಯಾವಾಗ ಅರ್ಜಿ (application) ಸಲ್ಲಿಕೆ ಅಂತಿರಾ? ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿ.

  ಫ್ಲಿಪ್‌ಕಾರ್ಟ್ ನಲ್ಲಿ ಭರ್ಜರಿ ನೇಮಕಾತಿ
  ವರ್ಕ್‌ ಫ್ರಮ್‌ ಹೋಮ್‌ ಅವಕಾಶವಿರುವ ಉದ್ಯೋಗ ಹುಡುಕುತ್ತಿರುವವರಿಗೆ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಗುಡ್‌ ನ್ಯೂಸ್‌ ನೀಡಿದೆ. ರೀಟೇಲರ್ ಕಂಪನಿಯು ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಫ್ಲಿಪ್‌ಕಾರ್ಟ್ ಭಾರತದಾದ್ಯಂತ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ, ಬಿಹಾರ, ದೆಹಲಿ ಮತ್ತು ಇತರ ರಾಜ್ಯಗಳಾದ್ಯಂತ ವಿವಿಧ ಉದ್ಯೋಗ ಪೋಸ್ಟ್‌ಗಳಿಗೆ ನೇಮಕಾತಿ ಲಭ್ಯವಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

  ಹುದ್ದೆಗಳು ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ
  ಬ್ಯುಸಿನೆಸ್ ಫೈನಾನ್ಸಿಯಲ್ ಪಾಟ್ನರ್, ಸೀನಿಯರ್ ಎಕ್ಸಿಕ್ಯೂಟಿವ್‌, ಮ್ಯಾನೇಜರ್, ಟೆಕ್‌ ಲೀಡ್‌, ಸೆಕ್ಯೂರಿಟಿ ಇಂಜಿನಿಯರ್‌ ಹೀಗೆ ಹಲವಾರು ನೇಮಕಾತಿಗಳಿಗೆ ಸುತ್ತೋಲೆ ಹೊರಡಿಸಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಫ್ಲಿಪ್‌ಕಾರ್ಟ್ ರಾಷ್ಟ್ರವ್ಯಾಪಿ ನೇಮಕಾತಿ ಅಭಿಯಾನವನ್ನು ನಡೆಸಲಿದೆ. ಉದ್ಯೋಗಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಕಂಪನಿಯ ಲಿಂಕ್ಡ್‌ಇನ್ ಪುಟದಲ್ಲಿ ಅಥವಾ ಫ್ಲಿಪ್‌ಕಾರ್ಟ್ ಜಾಬ್ ಸೈಟ್‌ನಲ್ಲಿ ಪಡೆಯಬಹುದು.

  ಇದನ್ನೂ ಓದಿ:  High Court Recruitment: ಕರ್ನಾಟಕ ಹೈ ಕೋರ್ಟ್​ನಲ್ಲಿ ಗ್ರೂಪ್​ ಡಿ ಹುದ್ದೆಗೆ ಅರ್ಜಿ ಸಲ್ಲಿಸಲು ನಾಳೆಯೇ ಕಡೆಯ ದಿನ

  ಆಸಕ್ತ ಅಭ್ಯರ್ಥಿಗಳು https://www.flipkartcareers.com/#!/joblist ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡುವ ಮೂಲಕ ಫ್ಲಿಪ್‌ ಕಾರ್ಟ್‌ ಹೊರಡಿಸಿರುವ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

  ಉತ್ತಮ ಅಭ್ಯರ್ಥಿ ಆಯ್ಕೆಗೆ ಹುಡುಕಾಟ
  ನೇಮಕಾತಿ ಪ್ರಕ್ರಿಯೆಯನ್ನು ಪ್ರಕಟಿಸಿದ ಕಂಪನಿಯು, “ಅತ್ಯುತ್ತಮ ಜನರು ಉತ್ತಮ ತಂಡಗಳನ್ನು ಮಾಡುತ್ತಾರೆ. ಮತ್ತು ನಮ್ಮ ಉನ್ನತ-ಕಾರ್ಯನಿರ್ವಹಣೆಯನ್ನು ಒಳಗೊಂಡ ತಂಡಗಳಿಗೆ ಸರಿಹೊಂದುವಂತಹ ಸರಿಯಾದ ಜನರನ್ನು ಹುಡುಕಲು ನಾವು ನಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಪ್ರತಿಯೊಬ್ಬರೂ ಬೇರೆ ಬೇರೆ ಆಲೋಚನೆಗಳು, ಶೈಲಿಗಳು ಮತ್ತು ಕ್ರಿಯೆಗಳ ವೈವಿಧ್ಯತೆಯನ್ನು ಹೊಂದಿದ್ದಾರೆ. ಟೀಮ್‌ ಲೀಡರ್‌ ನಿಂದ ಹಿಡಿದು ಪ್ರತಿಯೊಬ್ಬ ಉದ್ಯೋಗಿಯವರೆಗೆ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ" ಎಂದು ತಿಳಿಸಿದೆ.

  "ಗ್ರಾಹಕರೇ ತಮ್ಮ ಮೊದಲ ಆದ್ಯತೆ"
  ನಾವು ಸಮರ್ಪಿತ ಕಾರ್ಯಸ್ಥಳ ಸಮಾನತೆಯ ಚಾರ್ಟರ್ ಅನ್ನು ಹೊಂದಿದ್ದೇವೆ, ಅದು ಪ್ರತಿಭೆಯ ಆಕರ್ಷಣೆ, ಪ್ರತಿಭೆ ಅಭಿವೃದ್ಧಿ ಮತ್ತು ಸಂಸ್ಕೃತಿ ಮತ್ತು ನೀತಿಗಳ ಮೇಲೆ ಕೇಂದ್ರೀಕರಿಸುತ್ತದೆ, ಇದು ಬಲವಾದ ನಾಯಕತ್ವದ ಬದ್ಧತೆಯಿಂದ ಬೆಂಬಲಿತವಾಗಿದೆ ಎಂದಿದೆ. ಗ್ರಾಹಕರೇ ತಮ್ಮ ಮೊದಲ ಆದ್ಯತೆ ಮತ್ತು ಅವರ ಉತ್ಪನ್ನಗಳು ಮತ್ತು ಸೇವೆಗಳು ಈ ತತ್ವವನ್ನು ಕಂಪನಿ ಆಧರಿಸಿವೆ ಎಂದು ಅದು ಸ್ಪಷ್ಟಪಡಿಸಿದೆ. ಕಂಪನಿಯ ಉದ್ಯೋಗಿಗಳು ಕಂಪನಿಯು ಸ್ಪರ್ಧಾತ್ಮಕವಾಗಿ ಉಳಿಯಲು ಮತ್ತು ಮಾರುಕಟ್ಟೆ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡಬೇಕು ಎಂದು ಹೇಳಿಕೆ ತಿಳಿಸಿದೆ.

  ಇದನ್ನೂ ಓದಿ: KKRTC Recruitment: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ನೇಮಕಾತಿ; ಅರ್ಜಿ ಸಲ್ಲಿಕೆಗೆ ನಾಳೆಯೇ ಕಡೆಯ ದಿನ

  ಕೊರೋನಾ ನಂತರ ಪ್ರಪಂಚದಾದ್ಯಂತದ ಕೆಲಸದ ಪದ್ಧತಿ ಬದಲಾಗಿದೆ. ಖಾಸಗಿ ಕಂಪನಿಗಳಷ್ಟೇ ಅಲ್ಲ, ಸರ್ಕಾರಿ ಕಚೇರಿಗಳೂ ತಾತ್ಕಾಲಿಕವಾಗಿ ವರ್ಕ್ ಫ್ರಮ್ ಹೋಮ್ ಮಾದರಿಗೆ ಬದಲಾಗಿವೆ. ಇದನ್ನು ಅನುಸರಿಸಿ, ಫ್ಲಿಪ್‌ಕಾರ್ಟ್ ಕೂಡ ಹೊಸ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಹೊಂದಿರುತ್ತದೆ ಎಂದು ಘೋಷಿಸಿದೆ.
  ಫ್ಲಿಪ್‌ಕಾರ್ಟ್ ವಾಲ್‌ಮಾರ್ಟ್ ಮಾಲೀಕತ್ವದ ಫ್ಲಿಪ್‌ಕಾರ್ಟ್ ಗ್ರೂಪ್‌ನ ಒಂದು ಭಾಗವಾಗಿದೆ, ಫ್ಲಿಪ್‌ಕಾರ್ಟ್ ಹೋಲ್‌ಸೇಲ್, ಮೈಂತ್ರಾ ಮತ್ತು ಕ್ಲಿಯರ್‌ಟ್ರಿಪ್‌ನಂತಹ ಕಂಪನಿಗಳನ್ನು ಒಳಗೊಂಡಿದೆ.
  Published by:Ashwini Prabhu
  First published: