ಟೆಕ್ನಾಲಜಿ ಕ್ಷೇತ್ರದಲ್ಲಿ (Technology) ಹಲವು ವರ್ಷಗಳಿಂದ ಪುರುಷ ಪ್ರಾಬಲ್ಯವೇ ಹೆಚ್ಚು. ಆದರೆ ಇಂದಿನ ದಿನಗಳಲ್ಲಿ ಹಾಗಿಲ್ಲ. ಮಹಿಳೆಯರು ಟೆಕ್ನಾಲಜಿ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿದ್ದಾರೆ. ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಮಹಿಳೆಯರು ಈಗ ಪುರುಷರಷ್ಟೇ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಮಹಿಳೆಯರು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆದಿದ್ದಾರೆ. ಡಿಜಿಟಲ್ ತಂತ್ರಜ್ಞಾನದಲ್ಲಿ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಂಡು, ಸ್ವಾವಲಂಬಿ ಉದ್ಯೋಗಿಗಳಾಗಿ, ತಾವೂ ಸಹ ಉದ್ಯಮ ಕ್ರಾಂತಿ ಆರಂಭಿಸಿದ್ದಾರೆ. ಇಲ್ಲಿ ಮಹಿಳೆಯರ ದೈನಂದಿನ ಆರ್ಥಿಕತೆ ಮತ್ತು ಟೆಕ್ನಾಲಜಿ ಮತ್ತು ಉದ್ಯಮದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಕೆಲವು ಟಿಪ್ಸ್ ನೀಡಲಾಗಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿನ ಅಡೆತಡೆ ನಿವಾರಣೆಗೆ ಮಹಿಳೆಯರಿಗಾಗಿ ಕೆಲವು ಟಿಪ್ಸ್
ಮಹಿಳೆಯರು ತಂತ್ರಜ್ಞಾನದಲ್ಲಿನ ವಿವಿಧ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ದಿನನಿತ್ಯದ ಜೀವನದ ಸವಾಲುಗಳನ್ನು ಸುಲಭಗೊಳಿಸಲು ಹೊಸ ತಂತ್ರಗಳನ್ನು ಅಳವಡಿಕೆ ಮಾಡಿಕೊಳ್ಳುತ್ತಾರೆ. ಆರ್ಥಿಕತೆಯ ಅಭಿವೃದ್ಧಿಯು ಮಹಿಳೆಯರಿಗೆ ಕೆಲಸ ಮಾಡಲು ಮತ್ತು ತಮ್ಮದೇ ಆದ ಉದ್ಯಮ ಹೊಂದಲು, ಉದ್ಯಮಿಯಾಗಲು ಅವಕಾಶ ನೀಡಿದೆ.
ತಂತ್ರಜ್ಞಾನ ಕ್ಷೇತ್ರವು ಮಹಿಳೆಯರಿಗೆ ವಿಫುಲ ಅವಕಾಶ ನೀಡಿದೆ. ಮಹಿಳಾ ಸಬಲೀಕರಣ ಪರಿಕಲ್ಪನೆ ದಿನೇ ದಿನೇ ಗಟ್ಟಿಯಾಗಲು ಮಹಿಳೆಯರು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಬೇಕು. ದಿನನಿತ್ಯದ ಕಾರ್ಯದಲ್ಲಿ ತಂತ್ರಜ್ಞಾನದ ಪ್ರವೇಶ ಮತ್ತು ಅಳವಡಿಕೆಯು ಮಹಿಳೆಯರನ್ನು ಹೆಚ್ಚು ಸ್ವತಂತ್ರ ಮತ್ತು ದಕ್ಷತೆ ಸೃಷ್ಟಿಸುವಲ್ಲಿ ಎರಡು ಮಾತಿಲ್ಲ.
ಕಾರ್ಪೊರೇಟ್ ವಲಯದಲ್ಲಿ ಮಹಿಳೆಯರು ಲ್ಯಾಪ್ ಟಾಪ್, ಮೊಬೈಲ್, ಡಾಟಾ ಹೀಗೆ ತಮ್ಮದೇ ಖರ್ಚು ವೆಚ್ಚಗಳನ್ನು ಸರಿಯಾಗಿ ನಿಭಾಯಿಸಲು ದುಡಿಮೆ ಮತ್ತು ದುಡ್ಡು ಬೇಕು. ಇದು ಸ್ವಾವಲಂಬನೆಯ ಮೊದಲ ಹೆಜ್ಜೆಯಾಗಲಿ. ಮೊಬೈಲ್ ಬಿಲ್ ಪಾವತಿಸಲು ಸಹ ಇನ್ನೊಬ್ಬರ ಮೇಲೆ ಅವಲಂಬಿತರಾಗುವುದು ಸರಿಯಲ್ಲ. ದಿನದ ಅವಶ್ಯಕತೆ ಪೂರೈಸಲು ಬೇಕಾದ ದುಡಿಮೆಯನ್ನು ಮಹಿಳೆ ಮಾಡಲೇಬೇಕು. ಸ್ವಾವಲಂಬಿ ಆಗಲೇಬೇಕು.
ಮಹಿಳಾ ಉದ್ಯೋಗಿಗಳಿಗೆ ಸಲಹೆಗಳು
ಆನ್‌ಲೈನ್ ಮತ್ತು ವೈಯಕ್ತಿಕ ಬ್ರ್ಯಾಂಡಿಂಗ್ ನತ್ತ ಮಹಿಳೆಯರು ಚಿತ್ತ ಹರಿಸುವುದು ತುಂಬಾ ಅನುಕೂಲಕರ ಎಂಬುದು ಟೆಕ್ ತಂತ್ರಜ್ಞರ ಮಾತಾಗಿದೆ. ತಮ್ಮ ಕೌಶಲ್ಯ, ಅನುಭವ ಮತ್ತು ಸಾಧನೆಗಳನ್ನು ಪ್ರದರ್ಶಿಸಲು ಸಾಮಾಜಿಕ ಜಾಲತಾಣಗಳನ್ನು ಸಕ್ರಿಯವಾಗಿ ಬಳಕೆ ಮಾಡಬಹುದು. ತಮ್ಮದೇ ಆದ ವೆಬ್‌ಸೈಟ್, ಬ್ಲಾಗ್ ಅಥವಾ ಸಾಮಾಜಿಕ ಮಾಧ್ಯಮ ಪ್ರೊಫೈಲ್ ರಚಿಸುವ ಮೂಲಕ ವೈಯಕ್ತಿಕ ಬ್ರ್ಯಾಂಡಿಂಗ್ ಶುರು ಮಾಡಬಹುದು.
ಲೋಕಲ್ ಮಹಿಳೆಯರ ಕೌಶಲ್ಯ ಮತ್ತು ಅಲಂಕಾರಿಕ ವಸ್ತುಗಳ ತಯಾರಿಕೆ ಹೀಗೆ ಕೆಲವೊಮದಷ್ಟು ವಿಷಯಗಳನ್ನು ಆಸಕ್ತಿದಾಯಕವಾಗಿ ಆನ್ ಲೈನ್ ಮೂಲಕ ಹಂಚಿಕೊಳ್ಳಬಹುದು. ಯೂಟ್ಯೂಬ್ ಪ್ರೊಫೈಲ್ ಮಾಡಿ, ಲೈಕ್ ಗಿಟ್ಟಿಸಬಹುದು. ಗ್ರಾಹಕರರನ್ನು ಸೆಳೆಯಲು ಬೇಕಾದ ತಂತ್ರಗಾರಿಕೆ ಸಹ ಅಳವಡಿಸಬಹುದು.
ರಿಮೋಟ್ ಕೆಲಸದ ಮೂಲಕ ಪ್ರಪಂಚದಾದ್ಯಂತ ಜನರ ಜೊತೆ ಪರಿಣಾಮಕಾರಿಯಾಗಿ ಸಂವಹನ ಮಾಡಬಹುದು. ವೀಡಿಯೊ ಕಾನ್ಫರೆನ್ಸಿಂಗ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್ ಮತ್ತು ಸಹಯೋಗ ಪರಿಕರಗಳಂತಹ ತಂತ್ರಜ್ಞಾನ ಬಳಸಿಕೊಳ್ಳಬಹುದು.
ಕೌಶಲ್ಯ ಅಭಿವೃದ್ಧಿ ತಂತ್ರಗಾರಿಕೆಗೆ ಹೆಚ್ಚು ಒತ್ತು ನೀಡುವುದು
ತಂತ್ರಜ್ಞಾನವು ಮಹಿಳೆಯರಿಗೆ ವ್ಯಾಪಕ ಶ್ರೇಣಿಯ ಆನ್ ಲೈನ್ ಕೋರ್ಸ್‌ಗಳು, ಟ್ಯುಟೋರಿಯಲ್ ಮತ್ತು ಸಂಪನ್ಮೂಲ ಒದಗಿಸಿದೆ. ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ತಮ್ಮ ಮೌಲ್ಯವನ್ನು ಹೆಚ್ಚಿಸಲು ಈ ಸಂಪನ್ಮೂಲಗಳ ಲಾಭ ಪಡೆಯಬಹುದು.
ಇದನ್ನೂ ಓದಿ: ಮಹಿಳಾ ದಿನಾಚರಣೆಗೆ ಸ್ಪೆಷಲ್ ಆಗಿ ವಿಶ್ ಮಾಡಿದ ಗೂಗಲ್!
ಮಹಿಳೆಯರು ತಮ್ಮ ಕ್ಷೇತ್ರದಲ್ಲಿ ಇತರೆ ವೃತ್ತಿಪರರ ಜೊತೆಗೆ ನೆಟ್‌ವರ್ಕ್ ಹೊಂದಲು ಲಿಂಕ್ಡ್‌ಇನ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಬಳಸಬಹುದು. ಚರ್ಚೆಗಳಲ್ಲಿ ಭಾಗವಹಿಸುವುದು, ಮಾರ್ಗದರ್ಶಕರು ಸಹಯೋಗಿಗಳ ಸಲಹೆ ಪಡೆಯುವುದು, ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಸೂಕ್ತ ವೇದಿಕೆ ಬಳಸುವುದು, ತಮ್ಮ ಬ್ರ್ಯಾಂಡ್ ಮತ್ತು ಸಾಧನಗಳ ಪ್ರಸಾರ ಮಾಡುವುದು ಉತ್ತಮ ಮಾರ್ಗವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ