ನವದೆಹಲಿ (ಸೆ. 21): ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆ (NDA – National Defence Academy) ಬರೆಯಲು ಮಹಿಳೆಯರಿಗೂ ಅವಕಾಶ ನೀಡಿದ ಬೆನ್ನಲ್ಲೇ ಈಗಾಗಲೇ ಸೇನೆ ಸೇರುವ ಕನಸನ್ನೊತ್ತ ಅನೇಕರು ತಯಾರಿ ನಡೆಸುತ್ತಿದ್ದಾರೆ. ಸೇನೆ ಅತ್ಯುನ್ನತ ಪರೀಕ್ಷೆಗಳಲ್ಲಿ ಇದೇ ಮೊದಲ ಬಾರಿ ತಾವು ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದು, ಕೇಂದ್ರ ಸರ್ಕಾರ ಈ ಕುರಿತು ಹೊಸ ಮಾಹಿತಿ ಯಾವಾಗ ನೀಡಲಿದೆ ಎಂದು ಕಾತುರರಾಗಿದ್ದಾರೆ. ಅಂತಹವರಿಗೆ ಈಗ ಸರ್ಕಾರ ಹೊಸ ಸುದ್ದಿ ನೀಡಿದೆ. ಎನ್ಡಿಎಗೆ ಈಗಾಗಲೇ ಮಹಿಳಾ ಅಭ್ಯರ್ಥಿಗಳ ಪ್ರವೇಶಕ್ಕೆ ಸಿದ್ದತೆ ನಡೆಸಲಾಗುತ್ತಿದ್ದು, ಮುಂದಿನ ವರ್ಷ ಅಂದರೆ, ಮೇ 2022ರಲ್ಲಿ ಮಹಿಳೆಯರು ಪರೀಕ್ಷೆಗೆ ಹಾಜರಾಗಬಹುದು ಎಂದು ತಿಳಿಸಿದೆ.
ಈ ಕುರಿತು
ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ಮಹಿಳೆಯರಿಗಾಗಿ ಸೇನೆಯಲ್ಲಿ ವೈದ್ಯಕೀಯ ಮಾನದಂಡಗಳನ್ನು ಮತ್ತು ತರಬೇತಿ ನಿಯಮ, ಮೂಲಬೂತ ಸೌಕರ್ಯಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ. ಇದರಲ್ಲಿ ಪುರುಷರ ಮತ್ತು ಮಹಿಳೆಯರ ವಸತಿ ಪ್ರದೇಶದ ನಡುವೆ ದೈಹಿಕ ಬೇರ್ಪಡಿಕೆ ಒಳಗೊಂಡಿರಲಿದೆ ಎಂದಿದೆ.
ಇದರ ನಡುವೆ ಸರ್ಕಾರ ದೈಹಿಕ ತರಬೇತಿಗಳನ್ನು ನಿಯಮ ಕೊಂಚ ಸಡಿಲಗೊಳಿಸುವಿಕೆ ಮಾಡಲಾಗಿದೆ. ಫೈರಿಂಗ್, ಸಹಿಷ್ಣುತೆ ತರಬೇತಿ, ಮೈದಾನದ ತರಬೇತಿ ಸೇರಿದಂತೆ ಅನೇಕ ಸೇವಾ ವಿಷಯಗಳು ಸಶಸ್ತ್ರ ಪಡೆಗಳ ಯುದ್ಧ ಭೂಮಿಯ ಯೋಗ್ಯತೆಯ ಮೇಲೆ ನಿರಂತರ ಪರಿಣಾಮ ಬೀರುತ್ತವೆ ಎಂದಿದೆ.
ಸದ್ಯ ವೈದ್ಯಕೀಯ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಆಯ್ಕೆ ಮಾನದಂಡಗಳನ್ನು ಪೂರೈಸಲು ಅವಕಾಶವಿದೆ. ಮಹಿಳೆಯರಿಗೆ ಮಾನದಂಡಗಳ ಕುರಿತು ಇನ್ನು ಪ್ರಕ್ರಿಯೆ ನಡೆಯುತ್ತಿದೆ. ಮಹಿಳೆಯರ ವಯಸ್ಸು ಮತ್ತು ತರಬೇತಿಯ ಸ್ವರೂಪವನ್ನು ಗಣನೆಗೆ ತೆಗೆದುಕೊಂಡು, ಕಾರ್ಯಾಚರಣೆಯ ರೂಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮಹಿಳಾ ಅಭ್ಯರ್ಥಿಗಳಿಗೆ ದೈಹಿಕ ಮಾನದಂಡಗಳಿಲ್ಲ. ಹೀಗಾಗಿ ಅವುಗಳನ್ನು ರೂಪಿಸಲಾಗುವುದು. ಈ ಕುರಿತು ತಜ್ಞರ ಸಲಹೆಯಂತೆ ಕಾರ್ಯಚಾರಣೆ ರೂಪಿಸಿ, ವಿಶ್ಲೇಷಣೆ ಮಾಡಲಾಗುವುದು.
ಇದನ್ನು ಓದಿ: ಭವಿಷ್ಯದಲ್ಲಿ ಉತ್ತಮ ಸಂಪಾದನೆ ಕನಸು ಕಾಣುತ್ತಿದ್ರೆ ಪಿಯುಸಿ ಬಳಿಕ ಈ ಕೋರ್ಸ್ ಆರಿಸಿಕೊಳ್ಳಿ
ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ಅಂಶವೆಂದರೆ ವಸತಿ ಗೃಹಗಳನ್ನು ದೈಹಿಕ ಪ್ರತ್ಯೇಕತೆ ಅವಶ್ಯಕತೆ ಇದೆ. ಇದರಲ್ಲಿ ಶೌಚಾಲಯ ಮತ್ತು ವೈದ್ಯಕೀಯ ಸೌಲಭ್ಯ ಹೆಚ್ಚಿಸಬೇಕಿದೆ. ಜೊತೆಗೆ ಇದಕ್ಕೂ ಮುನ್ನ ಸ್ತ್ರೀರೋಗ ತಜ್ಞರು, ಕ್ರೀಡಾ ಔಷಧ ತಜ್ಞರು ಮತ್ತು ಸಲಹೆಗಾರರು, ಶುಶ್ರೂಷಾ ಸಿಬ್ಬಂದಿ ಮತ್ತು ಮಹಿಳಾ ಸೇವಕರನ್ನು ಮಹಿಳಾ ಅಭ್ಯರ್ಥಿಗಳಿಗೂ ಮುಂಚೆ ಸೇರಿಸಿಕೊಳ್ಳಬೇಕಿದೆ.
ಈ ಮೇಲಿನವುಗಳ ಪೂರೈಕೆಗೆ ಒಂದು ಕ್ರಮ ರೂಪಿಸಲು ಎನ್ಡಿಎನಲ್ಲಿ ಮಹಿಳಾ ಅಭ್ಯರ್ಥಿಗಳಿಗಾಗಿ ಒಂದು ತಜ್ಞರನ್ನು ಒಳಗೊಂಡ ಒಂದು ಅಧ್ಯಯನ ಗುಂಪನ್ನು ರಚಿಸಲಾಗಿದೆ ಎಂದು ತಿಳಿಸಿದೆ.
ಇದನ್ನು ಓದಿ: ನ್ಯಾಯಾಲಯದಲ್ಲಿ ಸ್ಟೇನೋಗ್ರಾಫರ್, ಟೈಪಿಸ್ಟ್ ಹುದ್ದೆ ಖಾಲಿ; SSLC ಪಾಸ್ ಆಗಿದ್ರೆ ಸಾಕು
ಕಳೆದ ತಿಂಗಳು ಎನ್ಡಿಎಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ಬರೆಯಲು ನಿರಾಕರಣೆ ಕುರಿತ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,, ಭಾರತೀಯ ಸೇನೆಯನ್ನು ತರಾಟೆಗೆ ತೆಗೆದುಕೊಂದು ಛೀಮಾರಿ ಹಾಕಿತ್ತು. ನೀತಿ ನಿರ್ಧಾರದ ಮೇಲೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಹೇಳುವ ಸೇನೆಯ ಕ್ರಮ ‘ಲಿಂಗ ತಾರತಮ್ಯ‘ವನ್ನು ತೋರಿಸುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿತು. ಕುಶ್ ಕಾಲ್ರಾ ಎಂಬುವವರು ಎನ್ಡಿಎ ಪರೀಕ್ಷೆಯನ್ನ ಮಹಿಳೆಯರೂ ಬರೆಯುವಂತೆ ಅವಕಾಶ ಕೋರಿ ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ, ಸೇನೆಯಲ್ಲಿರುವ ಲಿಂಗ ತಾರತಮ್ಯ ಧೋರಣೆಯನ್ನ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು
ಇದಾದ ಬಳಿಕ ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರ ಸರ್ಕಾರ ಎನ್ಡಿಎ ಮೂಲಕ ಸೇನೆಯಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ