Jobs: ಬೆಂಗಳೂರಿನಲ್ಲಿ 260 ಅಂಗನವಾಡಿ ಕಾರ್ಯಕರ್ತೆಯರ & ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೆಲವೊಂದು ಸೂಚನೆಗಳನ್ನು ಹೊರಡಿಸಿದೆ. ಆ ನಿಯಮಗಳನುಸಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 6 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ 97 ಅಂಗನಾಡಿ ಕಾರ್ಯಕರ್ತೆಯರು ಹಾಗೂ 260 ಅಂಗನವಾಡಿ ಸಹಾಯಕಿಯರ ಗೌರವಧನ ಆಧಾರಿತ ಹುದ್ದೆಗಳು ಖಾಲಿ ಇವೆ. ಈ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್​ಲೈನ್​ ಮೂಲಕ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ,

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 16, 2021. ಸೆಪ್ಟೆಂಬರ್ 16ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ www.anganwadirecruit.kar.nic.in ವೆಬ್​ಸೈಟ್​ಗೆ ಭೇಟಿ ನೀಡಿ.

ಸ್ಥಳ     ಅಂಗನವಾಡಿ ಕಾರ್ಯಕರ್ತೆಯರ             ಹುದ್ದೆಗಳ ಸಂಖ್ಯೆಅಂಗನವಾಡಿ ಸಹಾಯಕಿಯರ ಹುದ್ದೆಗಳ ಸಂಖ್ಯೆ

ಆನೇಕಲ್ 731
ಬೆಂಗಳೂರು ದಕ್ಷಿಣ 623
ಬೆಂಗಳೂರು

 9

13
ಬೆಂಗಳೂರು ಉತ್ತರ 30 103
ಬೆಂಗಳೂರು ಕೇಂದ್ರ 26 52
ಬೆಂಗಳೂರು ಪೂರ್ವ 1938
ಒಟ್ಟು 97260ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೆಲವೊಂದು ಸೂಚನೆಗಳನ್ನು ಹೊರಡಿಸಿದೆ. ಆ ನಿಯಮಗಳನುಸಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಿದೆ.

 • ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಇದರೊಂದಿಗೆ ಲಗತ್ತಿಸಿರುವ ನೇಮಕಾತಿ ಮಾರ್ಗಸೂಚಿ/ ನಿಬಂಧನೆಗಳನ್ನು ಓದಿಕೊಂಡು ನಂತರ ಅಗತ್ಯ ದಾಖಲೆಗಳೊಂದಿಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.

 • ಖಾಲಿ ಇರುವ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆ/ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ವಾರ್ಡ್​/ ಗ್ರಾಮದಲ್ಲೇ ವಾಸವಾಗಿರಬೇಕು. ಈ ಬಗ್ಗೆ ಸಂಬಂಧಿಸಿದ ತಹಶೀಲ್ದಾರ್​ ಕಚೇರಿಯಿಂದ ವಾಸ ಸ್ಥಳ ದೃಢೀಕರಣ ಪತ್ರವನ್ನು ಪಡೆದು ಸಲ್ಲಿಸಬೇಕು. ಇತರೆ ವಾರ್ಡ್​/ಗ್ರಾಮದಲ್ಲಿ ವಾಸವಿರುವವರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

 • ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿಗಳನ್ನು ಹಾಗೂ ದಾಖಲಾತಿಗಳನ್ನು ಆನ್​ಲೈನ್​ ಮೂಲಕ ಮಾತ್ರ ಸಲ್ಲಿಸಬೇಕು

 • ಸರ್ಕಾರದ ಮಾರ್ಗಸೂಚಿ ಪ್ರಕಾರ ಹಾಲಿ ಕಾರ್ಯಕರ್ತೆಯರು ಅರ್ಜಿ ಆಹ್ವಾನಿಸಿರುವ ಅಂಗನವಾಡಿ ಕೇಂದ್ರಗಳಿಗೆ ವರ್ಗಾವಣೆ ಕೋರಿದಲ್ಲಿ ವರ್ಗಾವಣೆಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಅಂತಹ ಕೇಂದ್ರಕ್ಕೆ ಅರ್ಜಿ ಆಹ್ವಾನಿಸಲಾಗಿದ್ದರೂ ಹೊಸ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

 • ಹೊಸದಾಗಿ ಮಂಜೂರಾಗಿರುವ ಅಂಗನವಾಡಿ ಕೇಂದ್ರಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅನಿವಾರ್ಯ ಕಾರಣದಿಂದಾಗಿ ಸ್ಥಳ ಬದಲಾವಣೆ ಮಾಡುವ ಸಂದರ್ಭ ಬಂದಲ್ಲಿ, ಆಗ ಅರ್ಜಿ ಆಹ್ವಾನಿಸಿರುವ ಅಂಗನವಾಡಿ ಕೇಂದ್ರಗಳಿಗೆ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

 • ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸುವಲ್ಲಿ ಆಗುವ ತಪ್ಪು ಒಪ್ಪುಗಳಿಗೆ ಅರ್ಜಿದಾರರೇ ಹೊಣೆಗಾರರಾಗಿರುತ್ತಾರೆ. ಅರ್ಜಿಗಳನ್ನು ಅಪ್​ಲೋಡ್​ ಮಾಡುವಲ್ಲಿನ ತಾಂತ್ರಿ ಸಮಸ್ಯೆಗಳನ್ನು ಇಲಾಖೆಯಿಂದ ಪರಿಹರಿಸಲಾಗುವುದಿಲ್ಲ.

 • ಆಯ್ಕೆಯ ವಿವರಗಳನ್ನು ಆನ್​ಲೈನ್ ಮೂಲಕ ಪ್ರಚಾರ ಪಡಿಸಲಾಗುವುದಿಲ್ಲ. ಫಲಿತಾಂಶಗಳನ್ನು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳ ಸೂಚನಾಫಲಕಗಳಲ್ಲಿ ಪ್ರಕಟಿಸಲಾಗುತ್ತದೆ.

 • ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ ಎಂದು ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.

 • ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಯು ಖಾಯಂ ಹುದ್ದೆಯಲ್ಲ, ಸಂಪೂರ್ಣವಾಗಿ ಗೌರವಧನ ಆಧಾರಿತ ಸೇವೆಯಾಗಿದ್ದು, ನಿಯಮಾನುಸಾರ ಪಾವತಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ಆರಂಭಇಲಾಖೆಹುದ್ದೆವಿದ್ಯಾರ್ಹತೆಕೊನೆಯ ದಿನಾಂಕ

ಹೆಚ್ಚಿನ ಮಾಹಿತಿಗಾಗಿ

ಸೆಪ್ಟೆಂಬರ್ 16ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಅಂಗನಾಡಿ ಕಾರ್ಯಕರ್ತೆಯರುಎಸ್​ಎಸ್​ಎಲ್​ಸಿ ಉತ್ತೀರ್ಣಅಕ್ಟೋಬರ್ 16 www.anganwadirecruit.kar.nic.in
ಸೆಪ್ಟೆಂಬರ್ 16ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಅಂಗನವಾಡಿ ಸಹಾಯಕಿಯರುಕನಿಷ್ಠ 4ನೇ ತರಗತಿ ಗರಿಷ್ಠ 9ನೇ ತರಗತಿ ಉತ್ತೀರ್ಣಅಕ್ಟೋಬರ್ 16 www.anganwadirecruit.kar.nic.in

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳೇನು?

 • ಅರ್ಜಿ ನಿಗದಿನ ನಮೂನೆಯಲ್ಲಿ

 • ಜನನ ಪ್ರಮಾಣ ಪತ್ರ/ ಜನ್ಮ ದಿನಾಂಕ ಇರುವ ಎಸ್​ಎಸ್​ಎಲ್​ಸಿ ಅಂಕಪಟ್ಟಿ

 • ವಿದ್ಯಾರ್ಹತೆ ಪ್ರಮಾಣ ಪತ್ರ( ಕಾರ್ಯಕರ್ತೆ ಹುದ್ದೆಗೆ ಎಸ್​ಎಸ್​ಎಲ್​ಸಿ ಪಾಸಾಗಿರಬೇಕು

 • ಮತ್ತು ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ ಗರಿಷ್ಠ 9ನೇ ತರಗತಿ ಉತ್ತೀರ್ಣರಾಗಿರಬೇಕು)

 • ತಹಶೀಲ್ದಾರರು/ ಉಪ ತಹಶೀಲ್ದಾರರಿಂದ ಪಡೆದ 3 ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ

 • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಲಗತ್ತಿಸುವುದು.

 • ವಿಧವೆಯಾದಲ್ಲಿ ಪತಿಯ ಪ್ರಮಾಣ ಪತ್ರ ಲಗತ್ತಿಸಬೇಕು(ವಿಧವಾ ವೇತನದ ದೃಢೀಕರಣ ಪತ್ರವನ್ನು ಪರಿಗಣಿಸುವುದಿಲ್ಲ)

Published by:Latha CG
First published: