Wipro Recruitment 2021: ಫ್ರೆಶರ್ಸ್​​​ಗೆ ವಿಪ್ರೋದಲ್ಲಿ ಬಂಪರ್ ಉದ್ಯೋಗ, ವಾರ್ಷಿಕ ಪ್ಯಾಕೇಜ್ ₹ 3.5 ಲಕ್ಷ

ಕಳೆದ ಆರು ತಿಂಗಳಲ್ಲಿ ವಿಪ್ರೋ ನಡೆಸಿದ ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಪ್ರಸ್ತುತ ನೇಮಕಾತಿ ಕಾರ್ಯಕ್ರಮಕ್ಕೆ ಅರ್ಹರಲ್ಲ ಎಂದು ಕಂಪನಿ ಸ್ಪಷ್ಟವಾಗಿ ಹೇಳಿದೆ.

Wipro

Wipro

  • Share this:
Wipro Recruitment 2021: ಟೆಕ್​ ದೈತ್ಯ ವಿಪ್ರೋ(Wipro) ಎಲೈಟ್​ ನ್ಯಾಷನಲ್​ ಟಾಲೆಂಟ್​ ಹಂಟ್​(Elite National Talent Hunt) ಎಂಬ ಫ್ರೆಶರ್ಸ್​​ ಹೈರಿಂಗ್(Fresher's Hiring)​ ಪ್ರೋಗ್ರಾಮ್​​ನಡಿ ಎಂಜಿನಿಯರಿಂಗ್​ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕಂಪನಿ ವೆಬ್​ಸೈಟ್​ ಪ್ರಕಾರ, 2020, 2021 ಮತ್ತು 2022ರಲ್ಲಿ ಪಾಸಾಗಲಿರುವ ಬಿಇ/ ಬಿ.ಟೆಕ್/ ಎಂಇ/ಎಂ.ಟೆಕ್ ​ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಫ್ಯಾಶನ್​ ಟೆಕ್ನಾಲಜಿ, ಟೆಕ್ಸ್​​ಟೈಲ್​ ಎಂಜಿನಿಯರಿಂಗ್​, ಎಗ್ರಿಕಲ್ಚರ್ ಮತ್ತು ಫುಡ್​ ಟೆಕ್ನಾಲಜಿ ವಿಭಾಗಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬ್ರಾಂಚ್​​​ಗಳಿಗೆ ಫ್ರೆಶರ್ಸ್(Fresher's)​ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.































ಸಂಸ್ಥೆವಿಪ್ರೋ
ಹುದ್ದೆಯ ಹೆಸರುಪ್ರಾಜೆಕ್ಟ್​ ಎಂಜಿನಿಯರ್
ವಿದ್ಯಾರ್ಹತೆಬಿಇ/ಬಿಟೆಕ್​/ಎಂಇ/ಎಂಟೆಕ್​
ವಯೋಮಿತಿಗರಿಷ್ಠ 25 ವರ್ಷ
ವೇತನವಾರ್ಷಿಕ ಪ್ಯಾಕೇಜ್​ 3.5 ಲಕ್ಷ
ಅನುಭವಫ್ರೆಶರ್ಸ್​
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ31/01/2022

ವಿದ್ಯಾರ್ಹತೆ

ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.60ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಇದನ್ನೂ ಓದಿ: IIIT Bangalore: ರಿಸರ್ಚ್​​ ಅಸೋಸಿಯೇಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನ, BE, B Tech ಅಭ್ಯರ್ಥಿಗಳಿಗೆ ಅವಕಾಶ

ವಯೋಮಿತಿ

ಶೈಕ್ಷಣಿಕ ಅರ್ಹತೆಯ ಜೊತೆಗೆ ಅಭ್ಯರ್ಥಿಯ ವಯೋಮಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಭ್ಯರ್ಥಿಗಳ ವಯಸ್ಸು ಗರಿಷ್ಠ 25 ವರ್ಷ ಮೀರಿರಬಾರದು.

ಈ ಅಭ್ಯರ್ಥಿಗಳಿಗೆ ಅವಕಾಶವಿಲ್ಲ

ಕಳೆದ ಆರು ತಿಂಗಳಲ್ಲಿ ವಿಪ್ರೋ ನಡೆಸಿದ ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಪ್ರಸ್ತುತ ನೇಮಕಾತಿ ಕಾರ್ಯಕ್ರಮಕ್ಕೆ ಅರ್ಹರಲ್ಲ ಎಂದು ಕಂಪನಿ ಸ್ಪಷ್ಟವಾಗಿ ಹೇಳಿದೆ.

ಭಾರತೀಯ ನಾಗರಿಕರಾಗಿರಬೇಕು

ಅಭ್ಯರ್ಥಿಗಳು ಭಾರತೀಯ ನಾಗರಿಕರು ಅಥವಾ PIO ಅಥವಾ OCI ಕಾರ್ಡುದಾರರಾಗಿರಬೇಕು. ಭೂತಾನ್ ಮತ್ತು ನೇಪಾಳದ ವ್ಯಕ್ತಿಗಳು ತಮ್ಮ ಪೌರತ್ವ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು.

ಇದನ್ನೂ ಓದಿ:KSRLPS Recruitment 2021: ಪದವಿ ಆದವರಿಗೆ ಸರ್ಕಾರಿ ಉದ್ಯೋಗ, ಮಾಸಿಕ ವೇತನ ₹ 28,000

ಹುದ್ದೆ & ವೇತನ

ಆಯ್ಕೆಯಾದ ಅಭ್ಯರ್ಥಿಗಳನ್ನು 'ಪ್ರಾಜೆಕ್ಟ್ ಎಂಜಿನಿಯರ್' ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ಜೊತೆಗೆ ವಾರ್ಷಿಕ ಪ್ಯಾಕೇಜ್​​ 3.5 ಲಕ್ಷ ರೂ. ನೀಡಲಾಗುತ್ತದೆ.

ಕೆಲಸ ಹುಡುಕುತ್ತಿದ್ದಾರಾ? ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಕೊನೆಯ ದಿನಾಂಕ

ಮೌಲ್ಯಮಾಪನದ ದಿನಾಂಕವನ್ನು ನಂತರ ತಿಳಿಸಲಾಗುವುದು. ಅರ್ಜಿಗಳ ನೋಂದಣಿಗೆ ಕೊನೆಯ ದಿನಾಂಕ ಜನವರಿ 31, 2022.
Published by:Latha CG
First published: