Wipro is Hiring: ಫ್ರೆಶರ್ಸ್​ಗೆ ವಿಪ್ರೋದಲ್ಲಿ 3.5ಲಕ್ಷ ಪ್ಯಾಕೇಜ್ ಆಫರ್, ಅರ್ಜಿ ಹಾಕೋಕೆ ಹೀಗೆ ಮಾಡಿ

Jobs for freshers: 2020 ಮತ್ತು 2021ರಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳನ್ನು ವಿಪ್ರೋ ನೇಮಕಾತಿ ಮಾಡಿಕೊಳ್ಳಲಿದೆ.

ವಿಪ್ರೋ

ವಿಪ್ರೋ

  • Share this:
ಭಾರತದ ದೈತ್ಯ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ(Multinational Company) ಒಂದಾದ ವಿಪ್ರೋ ಕಂಪನಿಯು ಫ್ರೆಶರ್ಸ್​​ಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದೆ. ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ವಿಪ್ರೋ, ಮುಖ್ಯವಾಗಿ ಫ್ರೆಶರ್ಸ್​​ಗೆ ಮಣೆ ಹಾಕಿದೆ. ‘ಎಲೈಟ್ ನ್ಯಾಷನಲ್ ಟಾಲೆಂಟ್ ಹಂಟ್ 2020 & 2021‘(Elite National Talent Hunt 2020 and 2021) ಎಂಬ ಫ್ರೆಶರ್ಸ್​​ ನೇಮಕಾತಿಯನ್ನು(Fresher's Recruitment) ಘೋಷಿಸಿದೆ. ಬೆಂಗಳೂರು(Bengaluru) ಮೂಲದ ಐಟಿ ಸಂಸ್ಥೆ ವಿಪ್ರೋ ದೇಶಾದ್ಯಂತ ಅತ್ಯುತ್ತಮ ಎಂಜಿನಿಯರಿಂಗ್ ಪ್ರತಿಭೆಗಳನ್ನು ಆಕರ್ಷಿಸಲು ಮುಂದಾಗಿದೆ. ಆ ಪ್ರಕಾರ, 2020 ಮತ್ತು 2021ರಲ್ಲಿ ಪದವಿ(Degree) ಅಥವಾ ಸ್ನಾತಕೋತ್ತರ ಪದವಿ(Post Graduates) ಪಡೆದ ವಿದ್ಯಾರ್ಥಿಗಳನ್ನು ವಿಪ್ರೋ ನೇಮಕಾತಿ ಮಾಡಿಕೊಳ್ಳಲಿದೆ.

ಅರ್ಹತಾ ಮಾನದಂಡಗಳೇನು?

ವಿಪ್ರೊ ಕಂಪನಿಯು ಅಭ್ಯರ್ಥಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಕೆಲವೊಂದು ಅರ್ಹತಾ ಮಾನದಂಡಗಳನ್ನು ನೀಡಿರುತ್ತದೆ. ಅವುಗಳಲ್ಲಿ

1. ಶಿಕ್ಷಣ

  • 10ನೇ ತರಗತಿ: ಶೇ.60/ ಅದಕ್ಕಿಂತ ಮೇಲ್ಪಟ್ಟು

  • 12ನೇ ತರಗತಿ: ಶೇ.60/ ಅದಕ್ಕಿಂತ ಮೇಲ್ಪಟ್ಟು

  • ಪದವಿ: ಶೇ.60 ಅಥವಾ CGPA 6.0/ ಅದಕ್ಕಿಂತ ಮೇಲ್ಪಟ್ಟು- ಇದು ವಿಶ್ವವಿದ್ಯಾಲಯದ ಮಾರ್ಗಸೂಚಿಗಳಂತೆ ಅನ್ವಯವಾಗುತ್ತದೆ ಎಂದು ವಿಪ್ರೋ ತನ್ನ ವೆಬ್​ಸೈಟ್​ನಲ್ಲಿ ತಿಳಿಸಿದೆ.


2. ವಿದ್ಯಾರ್ಹತೆ:

  • ಬಿಇ/ ಬಿ.ಟೆಕ್/ ಎಂ.ಟೆಕ್

  • ವಿಪ್ರೋ ಕಂಪನಿಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತ/ ರಾಜ್ಯ ಸರ್ಕಾರದಿಂದ ಗುರುತಿಸಲ್ಪಟ್ಟಿರುವ ಯಾವುದೇ ವಿಶ್ವವಿದ್ಯಾಲಯದಿಂದ ಪೂರ್ಣ ಅವಧಿಯ ಪದವಿ ಪಡೆದಿರಬೇಕು.

  • 10, 12 ಅಥವಾ ಡಿಗ್ರಿಯನ್ನು ಪಾರ್ಟ್​ ಟೈಂ/ ಕರೆಸ್ಪಾಂಡೆನ್ಸೆಸ್/ ದೂರ ಶಿಕ್ಷಣದ ಮೂಲಕ ಮಾಡಿದ್ದರೆ ಅಂತಹ ಅಭ್ಯರ್ಥಿಯನ್ನು ಪರಿಗಣಿಸಲಾಗುವುದಿಲ್ಲ.


ಇದನ್ನೂ ಓದಿ:SBI Recruitment 2021: ಸ್ಟೇಟ್ ಬ್ಯಾಂಕ್​​ನಲ್ಲಿ 606 ಹುದ್ದೆ ಖಾಲಿ ಇದೆ, ಯಾವುದೇ ಪರೀಕ್ಷೆ ಬರೆಯಬೇಕಿಲ್ಲ!

3.ಯಾವ ಬ್ರ್ಯಾಂಚ್​​ನಲ್ಲಿ ಸ್ಟಡಿ ಮಾಡಿರಬೇಕು?

ಕಂಪ್ಯೂಟರ್ ಸೈನ್ಸ್​/ ಐಟಿ/ ಸರ್ಕ್ಯೂಟಲ್​​

4. ಹುದ್ದೆಯ ಹೆಸರು:

ಪ್ರಾಜೆಕ್ಟ್ ಎಂಜಿನಿಯರ್

ಪ್ಯಾಕೇಜ್:

₹3.5 ಲಕ್ಷ (ವಾರ್ಷಿಕ)



ಇತರೆ ಮಾನದಂಡಗಳು



  • ಕಳೆದ 6 ತಿಂಗಳಲ್ಲಿ ವಿಪ್ರೋ ನಡೆಸಿದ ಯಾವುದೇ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಲ್ಲ.

  • ಭಾರತೀಯ ಪ್ರಜೆಯಾಗಿರಬೇಕು ಅಥವಾ ಪಿಐಒ/ಒಸಿಐ ಕಾರ್ಡ್​ ಹೊಂದಿರಬೇಕು.

  • ಭೂತಾನ್ ಮತ್ತು ನೇಪಾಳ ಪ್ರಜೆಗಳು ತಮ್ಮ ಪೌರತ್ವ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.


ಆಯ್ಕೆ ಪ್ರಕ್ರಿಯೆ:

  • ಅಭ್ಯರ್ಥಿಗಳು 128 ನಿಮಿಷಗಳ ಆನ್​ಲೈನ್​ ಮೌಲ್ಯಮಾಪನ ಪರೀಕ್ಷೆಯನ್ನು ಎದುರಿಸಬೇಕು ಎಂದು ವಿಪ್ರೋ ಹೇಳಿದೆ.

  • ಮೊದಲನೆಯದಾಗಿ 48 ನಿಮಿಷಗಳ ಸಾಮರ್ಥ್ಯ ಪರೀಕ್ಷೆ ಇರುತ್ತದೆ.

  • ಎರಡನೆಯದಾಗಿ ಲಿಖಿತ ಮತ್ತು ಸಂವಹನ ಪರೀಕ್ಷೆ ಇರುತ್ತದೆ. ಇದರಲ್ಲಿ ಪ್ರಬಂಧ ಬರವಣಿಗೆಗೆ 20 ನಿಮಿಷ ಕೊಡಲಾಗುತ್ತದೆ.

  • ಕೊನೆಯದಾಗಿ ಒಂದು ಗಂಟೆಯ ಆನ್​ಲೈನ್​ ಪ್ರೋಗ್ರಾಮಿಂಗ್ ಪರೀಕ್ಷೆ ಇರುತ್ತದೆ.

  • ಕೋಡಿಂಗ್ ಪರೀಕ್ಷೆಗೆ ಅಭ್ಯರ್ಥಿಗಳು ಯಾವುದೇ ಪ್ರೋಗ್ರಾಮಿಂಗ್ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಉದಾ: ಜಾವಾ, ಸಿ, ಸಿ++ ಅಥವಾ ಪೈಥಾನ್.

  • ಆನ್​ಲೈನ್​ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅಭ್ಯರ್ಥಿಗಳು ಟೆಕ್ನಿಕಲ್ ಇಂಟರ್​ವ್ಯೂ ಮತ್ತು ಹೆಚ್​ಆರ್​ ಸಂದರ್ಶನಗಳನ್ನು ಎದುರಿಸಬೇಕು.


ಇದೇ ರೀತಿ ಮತ್ತೊಂದು ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್​) ಸಹ 500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಐಟಿ ಸಂಸ್ಥೆಯು 2020 & 2021ರಲ್ಲಿ ಉತ್ತೀರ್ಣರಾದ ಬಿಇ/ಬಿ.ಟೆಕ್/ಎಂಇ/ಎಂ.ಟೆಕ್/ಎಂಸಿಎ/ಎಂ.ಎಸ್ಸಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಿದೆ.
Published by:Latha CG
First published: