Work From Home ಸಾಕು, ನಾಳೆಯಿಂದ ಕಚೇರಿಗೆ ಬನ್ನಿ ಎಂದು ಉದ್ಯೋಗಿಗಳಿಗೆ ಕರೆ ನೀಡಿದ wipro

18 ತಿಂಗಳಗಳ ಸುದೀರ್ಘ ಕಾಲದ ವರ್ಕ್​ ಫ್ರಂ ಹೋಂ ನಂತರ ಇದೀಗ ನಮ್ಮ ನಾಯಕರು ಕಚೇರಿಗೆ ಮರಳುತ್ತಿದ್ದಾರೆ. ಎಲ್ಲರೂ ಲಸಿಕೆ ಪಡೆದಿದ್ದು, ಸುರಕ್ಷತಾ ನಿಯಮ ಪಾಲಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯ ನಿರ್ಹಹಿಸಲು ಸಜ್ಜಾಗಿದ್ದಾರೆ

ವಿಪ್ರೋ

ವಿಪ್ರೋ

  • Share this:
    ಬೆಂಗಳೂರು (ಸೆ. 12):  ಕೊರೋನಾ​ ಸೋಂಕು ಕಡಿಮೆಯಾಗುವುದರ ಜೊತೆಗೆ ಕೋವಿಡ್​ 19 ಲಸಿಕೆ ದೇಶದ ಜನ ಸಾಮಾನ್ಯರಿಗೆಲ್ಲಾ ಸಿಗುತ್ತಿದೆ. ಈ ಹಿನ್ನಲೆ ಹಲವು ಕಂಪನಿಗಳು ಇದೀಗ ವರ್ಕ್​ ಫ್ರಂ ಹೋಂಗಳಿಂದ (work From Home) ತಮ್ಮ ಉದ್ಯೋಗಿಗಳನನು ನಿಧಾನವಾಗಿ ಕಚೇರಿಗೆ ಕರೆಸಿಕೊಳ್ಳುವತ್ತ ಚಿಂತನೆ ನಡೆಸಿದೆ. ಈಗಾಗಲೇ ಈ ಸಂಬಂಧ ಅನೇಕ ಸಾಫ್ಟ್​ ವೇರ್​ ಕಂಪನಿಗಳು ತಿಳಿಸಿದ್ದು, ಈ ವರ್ಷದ ಅಂತ್ಯ ಇಲ್ಲ, ಮುಂದಿನ ವರ್ಷದಿಂದ ತಮ್ಮ ಸಿಬ್ಬಂದಿಗಳನ್ನು ಕಚೇರಿಗೆ ಬರುವಂತೆ ತಿಳಿಸಿದೆ. ಈ ನಡುವೆ ಐಟಿ ದಿಗ್ಗಜರಲ್ಲೊಂದಾಗಿರುವ ಸಿಲಿಕಾನ್​ ಸಿಟಿಯ ವಿಪ್ರೋಂ (Wipro) ಕಂಪನಿ ಕೂಡ ತಮ್ಮ ಕಂಪನಿ ನೌಕರರಿಗೆ ವರ್ಕ್​ ಫ್ರಂ ಹೋಂ ಕೆಲಸ ನಿಲ್ಲಿಸಿ ಕಚೇರಿಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ. ಅಲ್ಲದೇ ನಾಳೆಯಿಂದಲೇ ಅಂದರೆ ಸೆ. 13ರಿಂದಲೇ ಕಚೇರಿಗೆ ಸಿಬ್ಬಂದಿಗಳನ್ನು ಕರೆಸಿಕೊಳ್ಳಿತ್ತಿದೆ.

    ಈ ಕುರಿತು ಟ್ವಿಟರ್​ ಮೂಲಕ ತಿಳಿಸಿರುವ ವಿಪ್ರೋಂ ಕಂಪನಿ ಸಿಇಒ ರಿಶದ್​ ಪ್ರೇಮ್​ಜಿ (Rishad Premji), 18 ತಿಂಗಳಗಳ ಸುದೀರ್ಘ ಕಾಲದ ವರ್ಕ್​ ಫ್ರಂ ಹೋಂ ನಂತರ ಇದೀಗ ನಮ್ಮ ನಾಯಕರು ಕಚೇರಿಗೆ ಮರಳುತ್ತಿದ್ದಾರೆ. ಎಲ್ಲರೂ ಲಸಿಕೆ ಪಡೆದಿದ್ದು, ಸುರಕ್ಷತಾ ನಿಯಮ ಪಾಲಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯ ನಿರ್ಹಹಿಸಲು ಸಜ್ಜಾಗಿದ್ದಾರೆ ಎಂದು ತಿಳಿಸಿದ್ದಾರೆ.



    ಅಷ್ಟೇ ಅಲ್ಲದೇ, ಸಿಬ್ಬಂದಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿರುವ ಹಿನ್ನಲೆ ಯಾವ ರೀತಿ ಕೊರೋನಾ ಮಾರ್ಗಸೂಚಿಗಳನ್ನು ಕಾಪಾಡಲಾಗುತ್ತದೆ. ಅಲ್ಲದೇ, ಉದ್ಯೋಗಿಗಳ ಆರೋಗ್ಯ ಕಾಳಜಿ ಹೇಗೆ ನಿರ್ವಹಿಸಲಾಗುತ್ತದೆ ಎಂಬುದುನ್ನು ಸಣ್ಣ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

    ಇನ್ನು ಪ್ರಾಥಮಿಕವಾಗಿ ವಾರದಲ್ಲಿ ಎರಡು ದಿನ ಮಾತ್ರ ಕಚೇರಿಯಿಂದ ಕೆಲಸ ನಿರ್ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿಯಿಂದ ಕೆಲಸ ನಿರ್ವಹಿಸಲಾಗುವುದು ಎಂದು ತಿಳಿಸಲಾಗಿದೆ.

    ಕೋವಿಡ್​ ಸೋಂಕು ಜಗತ್ತನ್ನು ತಲ್ಲಣಗೊಳಿಸುತ್ತಿದ್ದಂತೆ ನಮ್ಮ ಕಂಪನಿಯ ಯೋಜನೆಗಳನ್ನು ಮುಂದುವರೆಸುವುದರ ಜೊತೆಗೆ ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದಾಗಿ ಸಂಪೂರ್ಣವಾಗಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿತ್ತು. ಇದರಲ್ಲಿ ಶೇ 3ಕ್ಕಿಂತಲೂ ಕಡಿಮೆ ಉದ್ಯೋಗಿಗಳು ಮಾತ್ರ ಕಚೇರಿಯಿಂದ ಕೆಲಸ ನಿರ್ವಹಿಸುತ್ತಿದ್ದರು ಎಂದು ಕಂಪನಿ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

    ಇದನ್ನು ಓದಿ: ನಿಮ್ಮ ಸಾಧನೆ ಮೂಲಕ ಸೋಲಿನ ಮನಸ್ಥಿತಿಯನ್ನು ಗೆದ್ದಿದ್ದೀರಾ: ಪ್ರಧಾನಿ ಮೋದಿ

    ನಾವು ಹೊಸ ಮಾರ್ಗದಲ್ಲಿ ಕೆಲಸ ಮಾಡುವ ಮೂಲಕ ಗ್ರಾಹಕರನ್ನು ಸಂತೋಷ ಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ನಾವು ಅವರ ಆತ್ಮವಿಶ್ವಾಸವನ್ನು ಮೆಚ್ಚಿಕೊಂಡಿದ್ದೇವೆ. ಅಲ್ಲದೇ ಹೈಬ್ರಿಡ್ ಮಾದರಿಯು ಭವಿಷ್ಯದಲ್ಲಿ ನಾವು ಹೇಗೆ ಕೆಲಸ ಮಾಡುತ್ತೇವೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ ಎಂದು ಪ್ರೇಮ್​ಜಿ ತಿಳಿಸಿದ್ದಾರೆ.

    ಈಗಾಗಲೇ ಟಿಸಿಎಸ್​ ಕೂಡ ತಮ್ಮ ಕಂಪನಿಯ ಶೇ 70 ರಿಂದ 80 ರಷ್ಟು ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿಕೊಳ್ಳಲು ಮುಂದಾಗಿದೆ. ಈ ಸಂಬಂಧ ಮಾತನಾಡಿರುವ ಟಿಸಿಎಸ್​ನ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ರಾಜೇಶ್​​ ಗೋಪಿನಾಥನ್​​, ಈ ವರ್ಷದ ಅಂತ್ಯದೊಳಗೆ ಅಥವಾ ಮುಂದಿನ ವರ್ಷದ ಆರಂಭದ ವೇಳೆಗೆ ಕಚೇರಿಗೆ ಉದ್ಯೋಗಿಗಳನ್ನು ಕರೆಸುವ ನಿರೀಕ್ಷೆ ಮಾಡಿದ್ದೇವೆ. ಈ ನಡುವೆ ಮೂರನೇ ಅಲೆ ಹೇಗೆ ಇರಲಿದೆ ಎಂಬ ಅಂಶ ಕೂಡ ಮುಖ್ಯ. ಎಲ್ಲಾವೂ ಸರಿಯಾದಲ್ಲಿ ಶೇ 70 ರಿಂದ 80 ರಷ್ಟು ಉದ್ಯೋಗಿಗಳು ಕಚೇರಿಗೆ ಮರಳಲಿದ್ದಾರೆ ಎಂದಿದ್ದಾರೆ.

    ಹೆಚ್ಚಿನ ಕಾರ್ಪೊರೇಟ್​ ಕಂಪನಿಗಳು ಹೈಬ್ರಿಡ್​ ಮಾದರಿಯನ್ನು ಅಳವಡಿಸಿಕೊಳ್ಳುವ ನಿರೀಕ್ಷೆ ಇದೆ. ವಾರದಲ್ಲಿ ಕೆಲವು ದಿನಗಳ ಮಾತ್ರ ಕಂಪನಿಗೆ ಉದ್ಯೋಗಿಗಳು ಹಾಜರಾಗಲಿದ್ದಾರೆ. ಇದರರಿಂದ ಅನೇಕ ಅನುಕೂಲತೆ ಇದ್ದು, ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಜನರು ಕೂಡ ಹೆಚ್ಚಿನ ಭಾಗವಹಿಸುವ ನಿರೀಕ್ಷೆ ಇದೆ.
    Published by:Seema R
    First published: