• ಹೋಂ
  • »
  • ನ್ಯೂಸ್
  • »
  • Jobs
  • »
  • ಪಿಯುಸಿ ನಂತರ ಮುಂದೇನು ಎಂದು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಅತ್ಯುತ್ತಮ ಆಯ್ಕೆಗಳು

ಪಿಯುಸಿ ನಂತರ ಮುಂದೇನು ಎಂದು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಅತ್ಯುತ್ತಮ ಆಯ್ಕೆಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾನ್ಯವಾಗಿ ಪ್ರತಿಯೊಬ್ಬರು ಎಂಜಿನಿಯರ್ , ಡಾಕ್ಟರ್, ಬಿಕಾಂ, ಬಿಎಸ್ಇ ಪದವಿಗಳ  ಬಗ್ಗೆಯೇ ಆಲೋಚನೆ ಮಾಡುತ್ತಾರೆ. ಆದರೆ ಅವುಗಳನ್ನು ಹೊರತುಪಡಿಸಿ ಬೇರೆ ಪದವಿಗಳನ್ನು ಮಾಡಿದರೆ ಇನ್ನು ಹೆಚ್ಚಿನ ಅವಕಾಶ ಸಿಗುತ್ತದೆ.

  • Share this:

ಪಿಯುಸಿ  ಮತ್ತು ಎಸ್ಎಸ್ಎಲ್​​ಸಿ ಫಲಿತಾಂಶ ಪ್ರಕಟವಾಗಿದೆ. ಕೊರೊನಾ ಅಲೆಯಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಭವಿಷ್ಯದ್ದೆ ಚಿಂತೆ. ಪಿಯುಸಿ  ನಂತರ ಮುಂದೇನು ಮಾಡಬೇಕು. ಯಾವ ಕೋರ್ಸ್ ತೆಗೆದುಕೊಂಡರೆ ಬೇಗ ಕೆಲಸ ಸಿಗತ್ತೆ? ಯಾವ ಕೋರ್ಸಿಗೆ ಸದ್ಯ ಸ್ಕೋಪ್ ಜಾಸ್ತಿ ಇದೆ?  ಎಂಬೆಲ್ಲ ಚಿಂತೆಯಾದರೆ, ಒಂದು ಕಡೆ sslc ವಿದ್ಯಾರ್ಥಿಗಳಿಗೆ ಯಾವ ಸಬ್ಜೆಕ್ಟ್ ತೆಗೆದುಕೊಳ್ಳುವುದು ಅನ್ನೋ ಚಿಂತೆ. ಸೈನ್ಸ್ ತಗೊಂಡು ಮುಂದೆ ಏನು ಮಾಡೋದು. ಅದು ಕಷ್ಟ ಇರುತ್ತೆ ಹೇಗೆ ಓದೋದು. ಕಾಮರ್ಸ್ ತಗೋಬೋದಾ, ಆರ್ಟ್ಸ್ ತಗೋಳೊದು ಒಳ್ಳೆ ಆಪ್ಷನ್  ಆಗತ್ತಾ ಹೀಗೆ  ಸಾವಿರ ಆಲೋಚನೆಗಳು ವಿದ್ಯಾರ್ಥಿಗಳ ತಲೆಯಲ್ಲಿ ಓಡಾಡುತ್ತವೆ. ಆ ಚಿಂತೆ ಮನಸ್ಸಿನಲ್ಲಿ ಬಹಳ ಗೊಂದಲಗಳನ್ನು ಸೃಷ್ಟಿ ಮಾಡುತ್ತದೆ.  ಕೆಲವೊಮ್ಮೆ ನಿಮ್ಮ ಆಸಕ್ತಿಯೇ ಬೇರೆಯಾಗಿರುತ್ತದೆ, ಆದರೆ ಪೋಷಕರು ಅದಕ್ಕೆ ಒಪ್ಪುತ್ತಾರಾ ಎಂಬ ಅನುಮಾನ ಕಾಡುತ್ತದೆ. ನಿಮ್ಮ ಗೊಂದಲಗಳನ್ನು ಪರಿಹಾರ ಮಾಡುವ ಸಣ್ಣ ಪ್ರಯತ್ನ  ನಮ್ಮದು.


ಸಾಮಾನ್ಯವಾಗಿ ಪ್ರತಿಯೊಬ್ಬರು ಎಂಜಿನಿಯರ್ , ಡಾಕ್ಟರ್, ಬಿಕಾಂ, ಬಿಎಸ್ಇ ಪದವಿಗಳ  ಬಗ್ಗೆಯೇ ಆಲೋಚನೆ ಮಾಡುತ್ತಾರೆ. ಆದರೆ ಅವುಗಳನ್ನು ಹೊರತುಪಡಿಸಿ ಬೇರೆ ಪದವಿಗಳನ್ನು ಮಾಡಿದರೆ ಇನ್ನು ಹೆಚ್ಚಿನ ಅವಕಾಶ ಸಿಗುತ್ತದೆ.


ಫ್ಯಾಷನ್ ಡಿಸೈನಿಂಗ್ : ತಾಂತ್ರಿಕ ಕೆಲಸಗಳ ಬದಲು ಕಲಾತ್ಮಕ ಕೆಲಸಗಳನ್ನು ಮಾಡುವ ಬಯಕೆ ಇದ್ದರೆ ನೀವು ಈ ಕೋರ್ಸ್ ಮಾಡಬಹುದು. ಫ್ಯಾಷನ್ ಡಿಸೈನಿಂಗ್ನಲ್ಲಿ ಡಿಪ್ಲೊಮೊ ಮಾಡಬಹುದು. ಇದರ ಜೊತೆ ಆಭರಣಗಳ ಡಿಸೈನಿಂಗ್ ಸಹ ಕಲಿಯಲು ಅವಕಾಶವಿದೆ. ಇತ್ತೀಚಿನ ದಿನಗಳಲ್ಲಿ ಜನರು ಡಿಸೈನರ್ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಿರುವುದರಿಂದ ಒಳ್ಳೆಯ ಕೆಲಸದ ಜೊತೆ ಸಂಬಳವೂ ಸಿಗುತ್ತದೆ.


ಬಿಎಸ್ಸಿ ವಿಷುಯಲ್ ಮೀಡಿಯಾ/ಕಮ್ಯೂನಿಕೇಷನ್:  ಇನ್ನು ಚಿತ್ರರಂಗದಲ್ಲಿ ಮತ್ತು ಮಾಧ್ಯಮಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಉತ್ತಮವಾಗಿದೆ. ಈ ಕೋರ್ಸ್ನಲ್ಲಿ ವಿಡಿಯೋ ಎಡಿಟಿಂಗ್, ಕ್ಯಾಮೆರಾದಿಂದ ಹಿಡಿದು ಮಾಧ್ಯಕ್ಕೆ ಬೇಕಾಗುವ ವಿಷಯಗಳನ್ನು ಸಹ ಕಲಿಸಲಾಗುತ್ತದೆ.


ಮರೈನ್ ಇಂಜಿನಿಯರಿಂಗ್ : ಸಾಮಾನ್ಯವಾಗಿ ಎಲ್ಲ  ಮಾಡುವ ಕೋರ್ಸ್ಗಳನ್ನು ಮಾಡುವ ಬದಲು ಸ್ವಲ್ಪ ವಿಭಿನ್ನವಾಗಿ  ಮಾಡುವ ಬಯಕೆ ಇದ್ದರೆ ಇದು ನಿಮಗೆ ಸೂಕ್ತವಾಗಬಹುದು.  ಈ ವೃತ್ತಿ ಮಾಡೋಕೆ ಇಷ್ಟಪಡುವವರು ಬಿ.ಎಸ್ಸಿ ಇನ್ ಮೆಕ್ಯಾನಿಕಲ್ ಅಥವಾ ಮರೈನ್ ಇಂಜಿನಿಯರಿಂಗ್ ಕೋರ್ಸ್  ಮಾಡಬೇಕು. ಇನ್ನು ಈ ಕೆಲಸದಲ್ಲಿ ತಿಂಗಳಿಗೆ 7 ರಿಂದ 8 ಲಕ್ಷ ಸಂಪಾದನೆ ಮಾಡಬಹುದು.


ಇದನ್ನೂ ಓದಿ: Cognizant : 1 ಲಕ್ಷ ಉದ್ಯೋಗಿಗಳ ನೇಮಕಾತಿಗೆ ಮುಂದಾದ ಐಟಿ ದಿಗ್ಗಜ ಕಾಗ್ನಿಜೆಂಟ್‌


ಚಾರ್ಟೆಡ್ ಅಕೌಂಟೆನ್ಸಿ (CA): ಪಿಯುಸಿಯಲ್ಲಿ ಕಾಮರ್ಸ್  ತೆಗೆದುಕೊಂಡ ವಿದ್ಯಾರ್ಥಿಗಳು ಚಾರ್ಟೆಡ್ ಅಕೌಂಟೆಂಟ್ ಆಗುವತ್ತ ಗಮನಹರಿಸಬಹುದು . ಈ ಹುದ್ದೆಯಲ್ಲಿ ಹೆಚ್ಚಿನ ಸಂಬಳ ಪಡೆಯುವ ಅವಕಾಶವಿರುತ್ತದೆ. ಆದರೆ ಪರಿಶ್ರಮ ಕೂಡ ಇದಕ್ಕೆ ಅಗತ್ಯವಿದೆ. ಈ ಕೋರ್ಸ್ ಮಾಡಲು ಮೂರು ಹಂತದ ಕಠಿಣ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.


ಬ್ಯಾಚುಲರ್ ಆಫ್ ಲಾ( ವಕೀಲ ವೃತ್ತಿ): ವಕೀಲ ವೃತ್ತಿ ತುಂಬಾನೆ ಕಷ್ಟದ ಕೆಲಸ. ಒಂದು ಕೇಸ್ ಗೆದ್ದರೆ ಒಳ್ಳೆಯ ಸಂಬಳ ಸಿಗುತ್ತದೆ. ಆದರೆ ಆ ಕೇಸ್ ಗೆಲ್ಲುವುದು ಅಷ್ಟು ಸುಲಭವಲ್ಲ. ನೀವು  ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವವರಿದ್ದರೆ ಎಲ್ಎಲ್ಬಿ ಪದವಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಡಿಯಲ್ಲಿ ಬರುವ ಸಂಸ್ಥೆಯಲ್ಲಿ ಮಾಡಬೇಕು ಮತ್ತು ಅಭ್ಯರ್ಥಿಗಳು ಆಲ್ ಇಂಡಿಯಾ ಬಾರ್ ಎಕ್ಸಾಮಿನೇಷನ್ (ಎಐಬಿಇ) ಪರೀಕ್ಷೆಯಲ್ಲಿ ಪಾಸ್ ಆಗಬೇಕು.


ಲೈಬ್ರರಿ ಸೈನ್ಸ್( B.Lib) : ಲೈಬ್ರರಿ ಸೈನ್ಸ್ ಪದವಿ ಒಂದು ವಿಭಿನ್ನವಾದದ್ದು. ಈ ಪದವಿಯನ್ನು ಇಂಥವರೇ ಮಾಡಬೇಕು ಎಂಬುವುದಿಲ್ಲ. ಇದನ್ನು ಮಾಡುವುದರಿಂದ ಸರ್ಕಾರಿ ಕಾಲೇಜುಗಳಲ್ಲಿ ಲೈಬ್ರರಿಯನ್ ಆಗಿ ಒಳ್ಳೆಯ ಕೆಲಸ ಸಿಗುವುದರ ಜೊತೆಗೆ ಒಳ್ಳೆಯ ಸಂಬಳ ಸಹ ಸಿಗುತ್ತದೆ. ಹಾಗೆಯೇ ಈ ಕೋರ್ಸ್​​ಗೆ ಹೆಚ್ಚು ಸ್ಕೋಪ್ ಸಹ ಇದೆ.

top videos


    ವರದಿ : ಸಂಧ್ಯಾ

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು