ನಮ್ಮಲ್ಲಿ ಶಿಕ್ಷಕರೆಂದರೆ ವಿಶೇಷ ಗೌರವವಿದೆ. ಮಕ್ಕಳಿಗೆ ವಿದ್ಯೆಯನ್ನು ಕಲಿಸುವ ಗುರುಗಳನ್ನು ಪೂಜನೀಯ ಭಾವದಿಂದ ನೋಡಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಸಲಹೆ, ಮಾರ್ಗದರ್ಶನ ಹಾಗೂ ವಿದ್ಯೆಯನ್ನು (Eduction) ಕಲಿಸುವ ಜವಾಬ್ದಾರಿಯುತ ವೃತ್ತಿಯಾಗಿದೆ. ಮುಖ್ಯವಾಗಿ ಬೋಧನೆ ಅನ್ನೋದು ಹವ್ಯಾಸವಲ್ಲ. ಜೀವನಪೂರ್ತಿ ಉತ್ಸಾಹ ಎಂಬುದಾಗಿ ಶಿಕ್ಷಣ ತಜ್ಞರು ಹೇಳುತ್ತಾರೆ. ಆದರೆ ಆರ್ಥಿಕ ವರ್ಷ 2021 ರಿಂದ 2022 ರಲ್ಲಿ ಭಾರತದಲ್ಲಿ ಒಟ್ಟು ಶಿಕ್ಷಕರ (Teaching Career) ಸಂಖ್ಯೆ ಸುಮಾರು 2 ಪ್ರತಿಶತದಷ್ಟು ಕಡಿಮೆಯಾಗಿದೆ ಎಂಬುದು ಗಮನಾರ್ಹ. ಶಿಕ್ಷಣ ಸಚಿವಾಲಯದ ಪ್ರಕಾರ ಸದ್ಯ 9.5 ಮಿಲಿಯನ್ ಶಿಕ್ಷಕರಿದ್ದಾರೆ.
ಆದಿತ್ಯ ಬಿರ್ಲಾ ಎಜುಕೇಶನ್ ಅಕಾಡೆಮಿಯ ಪಠ್ಯಕ್ರಮ ಅಭಿವೃದ್ಧಿ ಮತ್ತು ತರಬೇತಿಯ ಮುಖ್ಯಸ್ಥೆ ಅನುರಾಧ ಶ್ರೀಧರ್ ಅವರು ಹೇಳುವ ಪ್ರಕಾರ, “ಸಾಂಸ್ಕೃತಿಕವಾಗಿ, ಭಾರತದಲ್ಲಿ ಶಿಕ್ಷಕರನ್ನು ಹೆಚ್ಚಿನ ಗೌರವದಿಂದ ಪರಿಗಣಿಸಲಾಗುತ್ತದೆ. ಆದಾಗ್ಯೂ, ಶಿಕ್ಷಕರು ಪಡೆಯುವ ಸಂಬಳಕ್ಕೆ ಸಂಬಂಧಿಸಿ ಸಾಮಾನ್ಯ ಅಭಿಪ್ರಾಯದಲ್ಲಿ ಶಿಕ್ಷಕರ ಸ್ಥಾನಮಾನ ಕಡಿಮೆಯಾಗಿದೆ. ದೀರ್ಘಾವಧಿಯ ಕೆಲಸ, ಜವಾಬ್ದಾರಿಯ ಹೊರೆ ಮತ್ತು ವೃತ್ತಿಗೆ ಸಂಬಂಧಿಸಿದ ಸಂಬಳಗಳಿಂದಾಗಿ ಬೋಧನೆಯು ಹೆಚ್ಚು ಆದ್ಯತೆಯ ವೃತ್ತಿ ಆಯ್ಕೆಯಾಗಿಲ್ಲ ಎಂಬ ವ್ಯಾಪಕ ಗ್ರಹಿಕೆ ಯುವಜನರಲ್ಲಿದೆ ಎಂದು ಅವರು ಹೇಳುತ್ತಾರೆ.
ಶಿಕ್ಷಕರ ವೇತನ:
ಸಾಮಾನ್ಯವಾಗಿ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಮಾಸಿಕ ವೇತನವು ರೂ 25,000 ರಿಂದ ರೂ 30,000 ವರೆಗೆ ಇರುತ್ತದೆ. ಸ್ನಾತಕೋತ್ತರ ಪದವೀಧರರ ವೇತನ 35,000 ರೂ.ಗಳಿಂದ ಪ್ರಾರಂಭವಾಗುತ್ತದೆ. ಶಿಕ್ಷಕರ ಅರ್ಹತಾ ಪರೀಕ್ಷೆ ಅಥವಾ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅಂಥವರು ರಾಜ್ಯ ಸರ್ಕಾರ ಅಥವಾ ಕೇಂದ್ರೀಯ ವಿದ್ಯಾಲಯಗಳಲ್ಲಿ ಲಾಭದಾಯಕ ಉದ್ಯೋಗ ಪಡೆಯುತ್ತಾರೆ. ಶಿಕ್ಷಕರಿಗೆ ಸರ್ಕಾರಿ ವೇತನ ಶ್ರೇಣಿ ಮತ್ತು ನಿವೃತ್ತಿ ಸೌಲಭ್ಯ ದೊರೆಯುತ್ತದೆ ಎಂದು ಅನುರಾಧ ಹೇಳುತ್ತಾರೆ.
ಅಂದಹಾಗೆ ಕಳೆದ ಐದು ವರ್ಷಗಳಲ್ಲಿ, ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಶಾಲೆಗಳ ಗ್ರೇಡಿಂಗ್‌ನಲ್ಲಿ ನಿಜವಾದ ಬದಲಾವಣೆಯಾಗಿದೆ. ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಿಗುವಂಥ ಸೌಲಭ್ಯಗಳಿಂದಾಗಿ ಶಿಕ್ಷಕರು ಇಲ್ಲಿ ಕೆಲಸ ಮಾಡಲು ಹಿಂಜರಿಯುವುದಿಲ್ಲ ಎಂಬುದಾಗಿ ಮುಂಬೈನ ಚೆಂಬೂರಿನಲ್ಲಿರುವ ಕನಕಿಯಾ ಇಂಟರ್ನ್ಯಾಷನಲ್ ಸ್ಕೂಲ್ (ಐಬಿ) ನ ಉಪ ಪ್ರಾಂಶುಪಾಲರಾದ ಮೀರಾ ರಂಗರಾಜನ್ ಹೇಳುತ್ತಾರೆ.
ಇದನ್ನೂ ಓದಿ: Classroom Tips: ಮಕ್ಕಳ ಗಮನ ಪಾಠದ ಮೇಲಿರಬೇಕು ಅಂದ್ರೆ ಈ ರೀತಿ ಕ್ಲಾಸ್ ರೂಮ್ ಇರಬೇಕು
ಇನ್ನು ಖಾಸಗಿ ಶಾಲೆಗಳು ನವೀಕರಿಸಬಹುದಾದ ಒಪ್ಪಂದಗಳನ್ನು ಹೊಂದಿವೆ. ಆದ್ದರಿಂದ, ಸರ್ಕಾರಿ ಶಾಲೆಗಳಿಗಿಂತ ಭಿನ್ನವಾಗಿ ಷರತ್ತುಗಳನ್ನು ಮರು ಮಾತುಕತೆ ನಡೆಸಲು ಇಲ್ಲಿ ಅವಕಾಶಗಳಿವೆ. ಇದಲ್ಲದೆ, ವಿದೇಶಿ ಭಾಷೆಗಳಂತಹ ವಿಷಯಗಳ ಬೋಧನೆಯು ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ ಎಂದು ಮೀರಾ ಹೇಳುತ್ತಾರೆ.
ಬೋಧನೆ ಎಂದರೆ ಬರಿಯ ಹವ್ಯಾಸವಲ್ಲ:
ಬೋಧನೆ ಎಂದರೆ ಅದು ಹವ್ಯಾಸವಲ್ಲ. ಆದರೆ ಜೀವನಪೂರ್ತಿ ಇರಬೇಕಾದ ಉತ್ಸಾಹ. ಇದನ್ನು ಕಾಲಕಳೆಯಲು ಅಥವಾ ಎರಡನೇ ಅರೆಕಾಲಿಕ ಕೆಲಸವಾಗಿ ಮಾಡಲಾಗುವುದಿಲ್ಲ. ಇದು ದೊಡ್ಡ ಜವಾಬ್ದಾರಿ. ಮಹತ್ವಾಕಾಂಕ್ಷಿ ಅಭ್ಯರ್ಥಿಗಳು ಒಂದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿದ್ದರೆ, ಅವರು ಬೋಧನೆಯನ್ನು ವೃತ್ತಿ ಆಯ್ಕೆಯಾಗಿ ತೆಗೆದುಕೊಳ್ಳಬಹುದು ಎಂದು ಪುಣೆಯ ಅಕಾಡೆಮಿ ಶಾಲೆಯ ಸಿಇಒ ಮೈಥಿಲಿ ತಾಂಬೆ ಹೇಳಿದರು.
ಅವರ ಪ್ರಕಾರ, ಬೋಧನೆಯು ಕಡಿಮೆ ಮೆಚ್ಚುಗೆ ಪಡೆದ, 24x7 ಕೆಲಸವಾಗಿದೆ. ಆಲೋಚನೆ ಮತ್ತು ಪರಿಕಲ್ಪನೆಗಳ ಸ್ಪಷ್ಟತೆ, ವಿದ್ಯಾರ್ಥಿಗಳೊಂದಿಗೆ ಭಾವನಾತ್ಮಕ ಸಂಪರ್ಕ ಮತ್ತು ತಂಡದ ಕೆಲಸವು ಬೋಧನೆಯಲ್ಲಿ ಕೌಶಲ್ಯಗಳು ಮುಖ್ಯವಾಗುತ್ತವೆ ಎಂಬುದಾಗಿ ಮೈಥಿಲಿ ಹೇಳುತ್ತಾರೆ.
ನಿರಂತರವಾಗಿ ಕಲಿಯುವ ಉತ್ಸಾಹ:
ತಂತ್ರಜ್ಞಾನದ ಈ ದಿನಗಳಲ್ಲಿ ಶಿಕ್ಷಕರು ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಅಪ್‌ಗ್ರೇಡ್ ಮಾಡಬೇಕು ಅನ್ನೋದು ಕೂಡ ಗಮನಾರ್ಹ. ನಮ್ಮ ಶಾಲೆಗಳಲ್ಲಿನ ಶಿಕ್ಷಕರು ಶಾಲಾ ಶಿಕ್ಷಣದ ಬದಲಾಗುತ್ತಿರುವ ಪರಿಸರ ವ್ಯವಸ್ಥೆಗೆ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು. ಶಿಕ್ಷಕರ ಪಾತ್ರದಲ್ಲಿ ನಾವೀನ್ಯತೆ ಕೇಂದ್ರವಾಗಿದೆ" ಎಂದು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ, ಸ್ಕೂಲ್ ಆಫ್ ವೊಕೇಶನಲ್ ಎಜುಕೇಶನ್‌ನ ಡೀನ್ ಮಧುಶ್ರೀ ಶೇಖರ್ ಅಭಿಪ್ರಾಯ ಪಡುತ್ತಾರೆ.
ಹದಿಹರೆಯದ ಮಕ್ಕಳೊಂದಿಗೆ ವ್ಯವಹರಿಸುವುದು ಬೋಧಕ ವೃತ್ತಿಗಿರುವ ಮತ್ತೊಂದು ಪ್ರಮುಖ ಸವಾಲು. ಹಾಗಾಗಿ ತರಗತಿಗಳನ್ನು ಹೆಚ್ಚು ಆಸಕ್ತಿಕರಗೊಳಿಸಬೇಕಾಗುತ್ತದೆ. ಅದಕ್ಕಾಗಿಯೇ ಶಿಕ್ಷಕರು ಬೋಧನೆಯ ಶಿಕ್ಷಣದ ಬಗ್ಗೆ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಅರ್ಥಮಾಡಿಕೊಂಡು ಹೊಂದಿಕೊಳ್ಳಬೇಕು ಎಂದು ಮಧುಶ್ರೀ ಶೇಖರ್ ಹೇಳುತ್ತಾರೆ.
ಗುರಿಗಳ ಬಗ್ಗೆ ಗಮನ:
ಒಬ್ಬ ಶಿಕ್ಷಕ ಸಾಮಾನ್ಯವಾಗಿ ವಿಭಾಗದ ಮುಖ್ಯಸ್ಥನಾಗುತ್ತಾನೆ. ಹೆಚ್ಚು ಮಹತ್ವಾಕಾಂಕ್ಷೆಯುಳ್ಳವರು ಉಪ ಪ್ರಾಂಶುಪಾಲರಾಗಲು ಮತ್ತು ಪ್ರಾಂಶುಪಾಲರಾಗಲು ಪ್ರಯತ್ನಿಸುತ್ತಾರೆ. ಈ ಬೆಳವಣಿಗೆಯ ಹಾದಿಯ 10-15 ವರ್ಷಗಳ ಅನುಭವವಾಗಿದೆ ಎಂದು ಆದಿತ್ಯ ಬಿರ್ಲಾ ಅವರ ಶ್ರೀಧರ್ ಹೇಳಿದರು.
ಬೆಳವಣಿಗೆಯ ದೃಷ್ಟಿಕೋನದಿಂದ, ಶಿಕ್ಷಕರಾಗುವ ಗುರಿಯನ್ನು ಹೊಂದಿರುವ ವ್ಯಕ್ತಿಯು ತಮ್ಮ ಗುರಿಗಳನ್ನು ಸಂಸ್ಥೆಯ ಗುರಿಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮಾನವ್ ರಚನಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಜುಕೇಶನ್ ಮತ್ತು ಹ್ಯುಮಾನಿಟೀಸ್‌ನ ಸಹಾಯಕ ಪ್ರಾಧ್ಯಾಪಕ ರಶೀ ಸಿಂಗ್ ಅಭಿಪ್ರಾಯ ಪಡುತ್ತಾರೆ. ಒಟ್ಟಾರೆ, ಬೋಧನೆಯು ಶಿಕ್ಷಕ, ಸ್ನೇಹಿತ, ಸಲಹೆಗಾರ ಮತ್ತು ಮಾರ್ಗದರ್ಶಕ ಸೇರಿದಂತೆ ಅನೇಕ ಪಾತ್ರಗಳನ್ನು ನಿರ್ವಹಿಸುವ ವೃತ್ತಿಯಾಗಿದೆ ಎಂದು ಸಿಂಗ್ ಅಭಿಪ್ರಾಯ ಪಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ