• Home
  • »
  • News
  • »
  • jobs
  • »
  • Going Digital: ಡಿಜಿಟಲ್ ರುಜುವಾತುಗಳು ಎಂದರೇನು? ಗುಣಮಟ್ಟದ ಶಿಕ್ಷಣಕ್ಕೆ ಇವು ಹೇಗೆ ಸಹಕಾರಿ?

Going Digital: ಡಿಜಿಟಲ್ ರುಜುವಾತುಗಳು ಎಂದರೇನು? ಗುಣಮಟ್ಟದ ಶಿಕ್ಷಣಕ್ಕೆ ಇವು ಹೇಗೆ ಸಹಕಾರಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Going Digital: ಈ ದೈನಂದಿನ ಪ್ರಮಾಣೀಕರಣಗಳಿಗೆ ಡಿಜಿಟಲ್ ತಂತ್ರಜ್ಞಾನವು ಹೊಸ ಅವಕಾಶಗಳು ಮತ್ತು ದೃಷ್ಟಿಕೋನಗಳನ್ನು ಸೃಷ್ಟಿಸುತ್ತಿದೆ. ಡಿಜಿಟಲ್ ರುಜುವಾತುಗಳು ಎಂಬುದು ಡಿಜಿಟಲ್ ಪ್ರಮಾಣೀಕರಣಗಳು ಅಥವಾ ನಿರ್ದಿಷ್ಟ ಸಂಸ್ಥೆಯಿಂದ ನೀಡಲಾದ ಪ್ರಮಾಣಪತ್ರಗಳಾಗಿವೆ.

  • Trending Desk
  • 2-MIN READ
  • Last Updated :
  • Share this:

ಆಧುನಿಕ ಯುಗದಲ್ಲಿ ಶಿಕ್ಷಣ (Education) ಮತ್ತು ವೃತ್ತಿ  ಅವಕಾಶಗಳನ್ನು ಪಡೆದುಕೊಳ್ಳುವ ವಿಧಾನಗಳನ್ನು ಡಿಜಿಟಲೀಕರಣ, ಕಲಿಕೆ ಹಾಗೂ ಉದ್ಯೋಗ (Job) ದಾಖಲೆಗಳು ರೂಪಿಸುತ್ತಿವೆ.  ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಜಾರಿಯಾಗುತ್ತಿರುವ ಹೊಸ ಹೊಸ ತಂತ್ರಜ್ಞಾನಗಳು (Technology) ವಿದ್ಯಾರ್ಥಿಗಳಿಗೆ (Students) ಮತ್ತು ಉದ್ಯೋಗಿಗಳಿಗೆ ಅವಕಾಶಗಳನ್ನು ವಿಸ್ತರಿಸಬಹುದು. ಸ್ಥಿರವಾದ ಅಭಿವೃದ್ಧಿ ಉದ್ದೇಶವನ್ನು ಸಾಧಿಸಲು ಶಿಕ್ಷಣ ತಂತ್ರಜ್ಞಾನಗಳು ಹೊಸ ಅವಕಾಶಗಳು ಮತ್ತು ಸವಾಲುಗಳನ್ನು ಇಂದು ಸೃಷ್ಟಿಸುತ್ತಿವೆ. ಡಿಜಿಟಲೀಕರಣ, ಆನ್‌ಲೈನ್ ಕಲಿಕೆಯ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದಾಗಿದೆ. ಅನೇಕ ದೇಶಗಳು ಹಾಗೂ ಉನ್ನತ ಶಿಕ್ಷಣ ಪದ್ಧತಿಗಳು ಶಿಕ್ಷಣ ಹಾಗೂ ವೃತ್ತಿಕ್ಷೇತ್ರಗಳಲ್ಲಿ ಡಿಜಿಟಲೀಕರಣವನ್ನು ಅನುಷ್ಠಾನಗೊಳಿಸುತ್ತಿವೆ.


ಡಿಜಿಟಲ್ ರುಜುವಾತುಗಳು ಎಂದರೇನು?:


ಈ ದೈನಂದಿನ ಪ್ರಮಾಣೀಕರಣಗಳಿಗೆ ಡಿಜಿಟಲ್ ತಂತ್ರಜ್ಞಾನವು ಹೊಸ ಅವಕಾಶಗಳು ಮತ್ತು ದೃಷ್ಟಿಕೋನಗಳನ್ನು ಸೃಷ್ಟಿಸುತ್ತಿದೆ. ಡಿಜಿಟಲ್ ರುಜುವಾತುಗಳು ಎಂಬುದು ಡಿಜಿಟಲ್ ಪ್ರಮಾಣೀಕರಣಗಳು ಅಥವಾ ನಿರ್ದಿಷ್ಟ ಸಂಸ್ಥೆಯಿಂದ ನೀಡಲಾದ ಪ್ರಮಾಣಪತ್ರಗಳಾಗಿವೆ.


ಹೆಚ್ಚಿನ ಸಂಸ್ಥೆಗಳು ಅಳವಡಿಸಿಕೊಂಡಿವೆ:


ಇವು ಡಿಜಿಟಲ್ ಆವೃತ್ತಿಯಲ್ಲಿರುವ ದಾಖಲೆಗಳಾಗಿರುತ್ತವೆ. ಕಾಗದದ ರುಜುವಾತುಗಳಂತೆಯೇ ಡಿಜಿಟಲ್ ರುಜುವಾತುಗಳು ನಿಜವಾದ ಪುರಾವೆ ಮೌಲ್ಯವನ್ನು ಹೊಂದಿವೆ. ಡಿಜಿಟಲ್ ರುಜುವಾತುಗಳ ವ್ಯಾಪಕವಾದ ಅಳವಡಿಕೆಯು ಇನ್ನೂ ಆರಂಭಿಕ ಹಂತಗಳಲ್ಲಿದೆ. ಇಂದು ಹೆಚ್ಚಿನ ಸಂಸ್ಥೆಗಳು ತಂತ್ರಜ್ಞಾನಗಳು ಡಿಜಿಟಲ್ ರುಜುವಾತುಗಳನ್ನು ಹೆಚ್ಚಾಗಿ ಬಳಸಿಕೊಂಡಿದ್ದು ಈ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗವಕಾಶಗಳನ್ನು ಒದಗಿಸಲು ನೆರವು ನೀಡುತ್ತಿವೆ.


ಡಿಜಿಟಲ್ ರುಜುವಾತುಗಳ ಪ್ರಯೋಜನಗಳೇನು?


ಸಮಯದ ಉಳಿತಾಯ


ಡಿಜಿಟಲ್ ರುಜುವಾತುಗಳಿಗೆ ಬದಲಾಯಿಸುವ ಮೂಲಕ ವ್ಯವಹಾರಗಳು, ಸಮಯ ಮತ್ತು ಹಣವನ್ನು ಉಳಿಸಬಹುದು. ಕಾರ್ಯಪಡೆಯ ಅಭಿವೃದ್ಧಿಗೆ ಬೆಂಬಲ ನೀಡಬಹುದು ಹಾಗೆಯೇ ಕಂಪನಿಯನ್ನು ಬೆಳೆಸಲು ಸಹಾಯ ಮಾಡಬಹುದು ಇದರೊಂದಿಗೆ ಗ್ರಾಹಕರ ಅನುಭವವನ್ನು ಸುಧಾರಿಸಬಹುದಾಗಿದೆ.


ಡಾಕ್ಯುಮೆಂಟ್‌ಗಳ ಸುಲಭ ಪರಿಶೀಲನೆ


ಅರ್ಹ ಪ್ರಮಾಣಪತ್ರಗಳನ್ನು ಪರಿಶೀಲಿಸುವುದು ಶ್ರಮದಾಯಕ ಕೆಲಸವಾಗಿದೆ. ಆದರೆ ಡಿಜಿಟಲ್ ಡಾಕ್ಯುಮೆಂಟ್‌ಗಳಲ್ಲಿ ದಾಖಲೆಗಳ ಪರಿಶೀಲನೆ ಸುಲಭವಾಗಿದೆ.


ಸ್ವಯಂಚಾಲಿತ ವ್ಯವಸ್ಥೆ


ಡಿಜಿಟಲ್ ಪ್ರಮಾಣಪತ್ರಗಳು ಮತ್ತು ಬ್ಯಾಡ್ಜ್‌ಗಳನ್ನು ನೀಡುವುದು ಸರಳ ಮತ್ತು ಪರಿಣಾಮಕಾರಿಯಾಗಿದೆ ಇದಕ್ಕೆ ಕಾರಣ ಆಡಳಿತಾತ್ಮಕ ಪ್ರಕ್ರಿಯೆಯು ಬಹುಮಟ್ಟಿಗೆ ಸ್ವಯಂಚಾಲಿತವಾಗಿರುವುದಾಗಿದೆ. ಅಸ್ತಿತ್ವದಲ್ಲಿರುವ ಕೆಲಸದ ಸಮಯಗಳಲ್ಲಿ ಡಿಜಿಟಲ್ ರುಜುವಾತು ಸಾಫ್ಟ್‌ವೇರ್ ಅನ್ನು ಅಳವಡಿಸುವುದರಿಂದ ಪ್ರತಿ ದಿನ ಗಂಟೆಗಳಷ್ಟು ನಿರ್ವಾಹಕ ಸಮಯವನ್ನು ಉಳಿಸಬಹುದು.


ಇದನ್ನೂ ಓದಿ: Interview Tips-7: ಆನ್​​ಲೈನ್​ ಇಂಟರ್​ವ್ಯೂಗೂ ಮುನ್ನ ಈ 4 ತಯಾರಿಗಳನ್ನು ಮಾಡಿಕೊಳ್ಳಲೇಬೇಕು


ಭೌತಿಕ ಶೈಕ್ಷಣಿಕ ಪದವಿ ರುಜುವಾತುಗಳನ್ನು ನೀಡುವಾಗ ವಿನ್ಯಾಸ ಮತ್ತು ಕಾಗುಣಿತ ತಪ್ಪುಗಳು ಯಾವಾಗಲೂ ಹೆಚ್ಚುವರಿ ವೆಚ್ಚಗಳನ್ನು ಸೃಷ್ಟಿಸುತ್ತವೆ ಆದರೆ ಡಿಜಿಟಲ್ ರುಜುವಾತುಗಳ ಮೂಲಕ ಈ ತಪ್ಪುಗಳನ್ನು ನಿವಾರಿಸಬಹುದಾಗಿದೆ.


ಭವಿಷ್ಯಕ್ಕೆ ಕೊಡುಗೆ ನೀಡಲಿರುವ ಡಿಜಿಟಲ್ ರುಜುವಾತುಗಳು:


ಡಿಜಿಟಲ್ ರುಜುವಾತುಗಳು ಪ್ರಸ್ತುತಿಗೆ ಸ್ಥಿರತೆ, ಡೇಟಾ ಮತ್ತು ಸುರಕ್ಷತೆಯನ್ನು ತರುತ್ತವೆ. ಕಲಿಯುವವರಿಗೆ ತಮ್ಮ ಕೌಶಲ್ಯ ಪ್ರಮಾಣಪತ್ರಗಳನ್ನು ಮತ್ತು ಶೈಕ್ಷಣಿಕ ದಾಖಲೆಯನ್ನು ಪೋರ್ಟಬಲ್ ಮತ್ತು ಪರಿಶೀಲಿಸಿದ ರೀತಿಯಲ್ಲಿ ನಿರ್ವಹಿಸುವ ಸಾಮರ್ಥ್ಯವನ್ನು ನೀಡುತ್ತವೆ. ಮತ್ತೊಂದೆಡೆ, ಡಿಜಿಟಲ್ ರುಜುವಾತುಗಳಿಗೆ ಪ್ರವೇಶವನ್ನು ಹೊಂದಿರುವ ಉದ್ಯೋಗಿಗಳು ಹೆಚ್ಚು ಪರಿಣಾಮಕಾರಿ ನೇಮಕಾತಿ ಅಭ್ಯಾಸಗಳನ್ನು ನಡೆಸಲು ಉತ್ತಮ ಸ್ಥಾನದಲ್ಲಿದ್ದಾರೆ.


ಅಂತಿಮವಾಗಿ, ಕಲಿಕೆಗಾಗಿ ಡಿಜಿಟಲ್ ರುಜುವಾತುಗಳನ್ನು ನೀಡುವ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳನ್ನು ವಿಸ್ತರಿಸಲು ಮಾತ್ರವಲ್ಲದೆ ವ್ಯಾಪಾರದ ಭವಿಷ್ಯಕ್ಕೂ ಕೊಡುಗೆ ನೀಡುವ ಸ್ಥಿತಿಯಲ್ಲಿವೆ.


ಅಪಾಯ ಇದ್ದೇ ಇದೆ:


ಡಿಜಿಟಲ್ ಸ್ವರೂಪಗಳನ್ನು ನಕಲಿಸಲು ಸುಲಭವಾಗಿದೆ. ಡಿಜಿಟಲ್ ದಾಖಲೆಗಳನ್ನು ಬೇರೊಬ್ಬರು ಕದಿಯುವ ಅಪಾಯ ಕೂಡ ಇರುತ್ತದೆ. ಹಾಗಾಗಿ ಹೆಚ್ಚು ಜಾಗರೂಕತೆಯಿಂದ ಡಿಜಿಟಲ್ ಸ್ವರೂಪಗಳನ್ನು ಸಂಗ್ರಹಿಸಡಬೇಕಾಗಿದೆ. ಪ್ರಪಂಚದಾದ್ಯಂತ ಹಲವಾರು ಸಂಸ್ಥೆಗಳು ಡಿಜಿಟಲ್ ಪರಿಸರ ವ್ಯವಸ್ಥೆಯೊಂದಿಗೆ ಹೆಚ್ಚು ಸಮಾನ ಕಲಿಕೆ ಹಾಗೂ ಉದ್ಯೋಗ ಅವಕಾಶಗಳನ್ನು ಒದಗಿಸಲು ಸಹಾಯ ಮಾಡುತ್ತಿವೆ.


ಡಿಜಿಟಲ್ ಸ್ವರೂಪಗಳ ಬಗ್ಗೆ ತಿಳಿಯಲು ಉತ್ಸುಕರಾದವರಿಗೆ ಹಾಗೂ ಇದರ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಲು ಹೆಚ್ಚಿನ ಬೆಂಬಲ, ಸಂಘಟಿತ ಪ್ರಯತ್ನಗಳು ಹಾಗೂ ಸಂಘಟನೆಯ ಅಗತ್ಯವಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು