Western Railway Recruitment 2021: ಪಶ್ಚಿಮ ರೈಲ್ವೆ ನೇಮಕಾತಿ: 80 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಕ್ಟೋಬರ್ 22 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 21ರವರೆಗೆ ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ

  • Share this:
Western Railway Recruitment 2021: ವೆಸ್ಟರ್ನ್ ರೈಲ್ವೆ(Western Railway)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 80 ಜೂನಿಯರ್ ಎಂಜಿನಿಯರ್(Junior Engineer), ಟೆಕ್ನಿಷಿಯನ್(Technician), ಜೂನಿಯರ್ ಸ್ಟೆನೊಗ್ರಾಫರ್(Junior Stenographer), ಜೂನಿಯರ್ ಟ್ರಾನ್ಸ್​ಲೇಟರ್(Junior Translator)​ ಹುದ್ದೆಗಳು ಖಾಲಿ ಇವೆ. 10ನೇ ತರಗತಿ/ 12ನೇ ತರಗತಿ ಪಾಸಾಗಿರುವವರು/ ಡಿಪ್ಲೋಮಾ/ ಸ್ನಾತಕೋತ್ತರ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಅಕ್ಟೋಬರ್ 22 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 21ರವರೆಗೆ ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಪಶ್ಚಿಮ ರೈಲ್ವೆ
ಜಾಹೀರಾತು ಸಂಖ್ಯೆ01/2021 & 02/2021
ಹುದ್ದೆಯ ಹೆಸರುಜೂನಿಯರ್ ಎಂಜಿನಿಯರ್, ಟೆಕ್ನಿಷಿಯನ್, ಜೂನಿಯರ್ ಸ್ಟೆನೊಗ್ರಾಫರ್, ಜೂನಿಯರ್ ಟ್ರಾನ್ಸ್​ಲೇಟರ್
ಒಟ್ಟು ಹುದ್ದೆಗಳು80
ವಿದ್ಯಾರ್ಹತೆ10ನೇ ತರಗತಿ/ 12ನೇ ತರಗತಿ ಪಾಸಾಗಿರುವವರು/ ಡಿಪ್ಲೋಮಾ/ ಸ್ನಾತಕೋತ್ತರ ಪದವಿ
ಕೆಲಸದ ಸ್ಥಳಮುಂಬೈ
ಸಂಬಳನಿಯಮಾನುಸಾರ
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ22/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ21/11/2021

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21/11/2021

ಇದನ್ನೂ ಓದಿ:Karnataka Jobs: ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ KSOU: ನವೆಂಬರ್ 11 ಕೊನೆಯ ದಿನಾಂಕ

ಹುದ್ದೆಯ ವಿವರ:

ಜೂನಿಯರ್ ಎಂಜಿನಿಯರ್- 39
ಟೆಕ್ನಿಷಿಯನ್- 24
ಜೂನಿಯರ್ ಸ್ಟೆನೊಗ್ರಾಫರ್-09
ಜೂನಿಯರ್ ಟ್ರಾನ್ಸ್​ಲೇಟರ್-08

ವಿದ್ಯಾರ್ಹತೆ:

ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ ಸಂಸ್ಥೆಯಿಂದ 10ನೇ ತರಗತಿ/ 12ನೇ ತರಗತಿ, ಡಿಪ್ಲೋಮಾ/ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ
ಇದನ್ನೂ ಓದಿ:India Post Recruitment 2021: ತಿಂಗಳಿಗೆ ₹81,100 ಸಂಬಳ, 10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಪಶ್ಚಿಮ ರೈಲ್ವೆಯ ಅಧಿಕೃತ ವೆಬ್​ಸೈಟ್ https://wr.indianrailways.gov.in/ ಗೆ ಭೇಟಿ ನೀಡಿ.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: