• ಹೋಂ
  • »
  • ನ್ಯೂಸ್
  • »
  • Jobs
  • »
  • Job Satisfaction: ನೀವು ನಿಮ್ಮ ಕೆಲಸವನ್ನು ನಿಜವಾಗಿಯೂ ಆನಂದಿಸುತ್ತಿದ್ದೀರಾ, ಇಲ್ಲವಾ ಎಂದು ತಿಳಿದುಕೊಳ್ಳುವುದು ಹೇಗೆ?

Job Satisfaction: ನೀವು ನಿಮ್ಮ ಕೆಲಸವನ್ನು ನಿಜವಾಗಿಯೂ ಆನಂದಿಸುತ್ತಿದ್ದೀರಾ, ಇಲ್ಲವಾ ಎಂದು ತಿಳಿದುಕೊಳ್ಳುವುದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲಸದಲ್ಲಿ ನೆಮ್ಮದಿ ಇಲ್ಲದಿದ್ದಾಗ ಅಥವಾ ಅತೃಪ್ತಿ ಅನುಭವಿಸಿದಾಗ ಮಾನಸಿಕವಾಗಿ ಕಿರಿಕಿರಿ ಉಂಟಾಗುತ್ತದೆ. ಇದು ವೃತ್ತಿಯ ಜೊತೆಗೆ ವೈಯಕ್ತಿಕ ಬದುಕಿನಲ್ಲೂ ಪರಿಣಾಮ ಬೀರುತ್ತದೆ.

  • Trending Desk
  • 3-MIN READ
  • Last Updated :
  • Share this:

ಜನಸಾಮಾನ್ಯರಿಗೆಲ್ಲರಿಗೂ ಜೀವನ (Life) ನಡೆಸಬೇಕೆಂದರೆ ಕೆಲಸ ಮಾಡಲೇ ಬೇಕು. ಆದರೆ ಕೆಲಸದಲ್ಲಿ ನೆಮ್ಮದಿ ಇಲ್ಲದಿದ್ದಾಗ ಅಥವಾ ಅತೃಪ್ತಿ ಅನುಭವಿಸಿದಾಗ ಮಾನಸಿಕವಾಗಿ ಕಿರಿಕಿರಿ ಉಂಟಾಗುತ್ತದೆ. ಇದು ವೃತ್ತಿಯ ಜೊತೆಗೆ ವೈಯಕ್ತಿಕ ಬದುಕಿನಲ್ಲೂ ಪರಿಣಾಮ ಬೀರುತ್ತದೆ. ನೆಮ್ಮದಿ ಇಲ್ಲದಂತಾಗಿ ಕುಟುಂಬ ಹಾಗೂ ಸಂಬಂಧಗಳಲ್ಲಿ ನಕಾರಾತ್ಮಕ ಪರಿಣಾಮ ಬೀರಬಹುದು. ಹೌದು, ಕೆಲಸದಲ್ಲಿ ಅತೃಪ್ತಿ ಅನುಭವಿಸುವುದು ನಿಮ್ಮ ಮಾನಸಿಕ ಆರೋಗ್ಯ (Mental Health), ಸಂಬಂಧಗಳು ಮತ್ತು ಒಟ್ಟಾರೆ ಜೀವನದ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ (Effects) ಬೀರಬಹುದು. ಆದರೆ ನೀವೊಬ್ಬರೇ ಇಂಥ ಭಾವನೆಗಳನ್ನು ಅನುಭವಿಸುತ್ತಿಲ್ಲ ಬದಲಾಗಿ ಸಾಕಷ್ಟು ಜನರು (People) ಇಂಥ ತೊಂದರೆಯಿಂದ ಬಳುತ್ತಿದ್ದಾರೆ. ಆದರೆ ಕೆಲವೊಮ್ಮೆ ನಿಮಗೆ ಕಿರಿಕಿರಿಯಾದರೂ ನಿಜವಾಗಿಯೂ ನೀವು ಆ ಕೆಲಸವನ್ನು ಆನಂದಿಸುತ್ತಿಲ್ಲ ಅಂತ ಹೇಳಲು ಸಾಧ್ಯವಿಲ್ಲ. ನಿಮಗೇ ಗೊತ್ತಿಲ್ಲದೇ ನೀವು ನಿಮ್ಮ ಕೆಲಸವನ್ನು ಇಷ್ಟ ಪಡುತ್ತಿರುತ್ತೀರಿ.


ಸಾಕಷ್ಟು ಜನರಿಗೆ "ನಾನು ನಿಜವಾಗಿಯೂ ನನ್ನ ಕೆಲಸವನ್ನು ಆನಂದಿಸುತ್ತಿದ್ದೇನೆಯೇ?" "ಕೆಲಸದ ಮರುದಿನ ಬರಿದಾದಂತೆ ಏಕೆ ಅನಿಸುತ್ತಿದೆ”? "ನಾನು ಏನು ಇಷ್ಟಪಡುತ್ತೇನೆ?" ಎಂಬಂಥ ಪ್ರಶ್ನೆಗಳು ಉದ್ಭವಿಸಬಹುದು. ಹಾಗಿದ್ದರೆ ಮನಶ್ಶಾಸ್ತ್ರಜ್ಞರ ಪ್ರಕಾರ, ನೀವು ನಿಮ್ಮ ಕೆಲಸವನ್ನು ನಿಜವಾಗಿಯೂ ಆನಂದಿಸುತ್ತೀರಾ ಅಥವಾ ಇಲ್ಲವಾ ಎಂದು ತಿಳಿದುಕೊಳ್ಳಲು ಈ ಮೂರು ಅಂಶಗಳು ಸಹಾಯಕವಾಗಿವೆ. ಹಾಗಿದ್ರೆ ಅವುಗಳು ಯಾವವು ಅನ್ನೋದನ್ನು ತಿಳಿಯೋಣ.


1. ನಿಮ್ಮ ಕೆಲಸವನ್ನು ಹೊರತುಪಡಿಸಿ ಬೇರೆ ವಿಷಯಗಳಲ್ಲಿ ನೀವು ಆಸಕ್ತಿಯನ್ನು ಕಾಣುತ್ತೀರಿ ಎಂದಾದರೆ ನೀವು ಕೆಲಸವನ್ನು ಎಂಜಾಯ್‌ ಮಾಡುತ್ತಿದ್ದೀರಿ ಎಂದೇ ಅರ್ಥ. ನಿಮ್ಮ ಕೆಲಸವನ್ನು ನೀವು ಆನಂದಿಸಿದಾಗ, ನೀವು ಕೆಲಸ ಮತ್ತು ನಿಮ್ಮ ಜೀವನದ ಬೇರೆ ಅಂಶಗಳ ಮಧ್ಯೆ ಆರೋಗ್ಯಕರ ಸಮತೋಲನವನ್ನು ಹೊಂದಿರುತ್ತೀರಿ.


ನೀವು ಕೆಲಸದ ಆಚೆಗೆ ನಿಮ್ಮ ನೆಚ್ಚಿನ ಹವ್ಯಾಸಗಳು ಮತ್ತು ಚಟುವಟಿಕೆಗಳಿಗೆ ಹೆಚ್ಚಿನ ಸಮಯವನ್ನು ನೀಡಬಹುದು. ಇಂಥ ಚಟುವಟಿಕೆಗಳು ನಿಮ್ಮ ಜೀವನಕ್ಕೆ ಹೆಚ್ಚಿನ ಸಂತೋಷ, ಉತ್ಸಾಹ ತರುತ್ತವೆ. ಜೊತೆಗೆ ಆರೋಗ್ಯಕರ ಕೆಲಸ-ವೈಯಕ್ತಿಕ ಜೀವನದ ಸಮತೋಲನವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡಬಹುದು.


ಇದನ್ನೂ ಓದಿ: ಚಿತ್ರದುರ್ಗದಲ್ಲಿ ಸ್ಟಾಫ್​ ನರ್ಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ; ಈಗಲೇ ಅಪ್ಲೈ ಮಾಡಿ


2. ಕೆಲವೊಮ್ಮೆ ನೀವು ನಿಮ್ಮ ಕೆಲಸದಲ್ಲಿ ಮುಳುಗಿಹೋಗಿರುತ್ತೀರಾ ಎಂದಾದರೆ ನೀವು ನಿಮ್ಮ ಕೆಲಸವನ್ನು ನಿಜವಾಗಿಯೂ ಆನಂದಿಸುತ್ತೀದ್ದೀರಾ ಎಂದರ್ಥ. ನಿಮ್ಮ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೀರಿ ಎಂದರ್ಥ. ಇದರಿಂದಾಗಿಯೇ ನೀವು ಸಮಯದ ಪರಿವೆಯೇ ಇಲ್ಲದೇ ಕೆಲಸ ಮಾಡುತ್ತೀರಾ ಎನ್ನಬಹುದು.


ಸಂಶೋಧನೆಯ ಪ್ರಕಾರ, ಈ ಸ್ಥಿತಿಯು ನಿಜವಾದ ಉದ್ಯೋಗ ತೃಪ್ತಿಯ ಸಂಕೇತವಾಗಿರಬಹುದು. ನಿಮ್ಮ ಕೆಲಸದಲ್ಲಿನ ಸವಾಲುಗಳನ್ನು ನೀವು ಎಂಜಾಯ್‌ ಮಾಡುತ್ತೀದ್ದೀರಿ ಎಂದು ಹೇಳಬಹುದು. ಕೆಲಸದಲ್ಲಿ ನೀವು ಇಂಥ ಮನಸ್ಥಿತಿ ಹೊಂದುವುದು ಹೆಚ್ಚಿನ ಕೆಲಸ ಮಾಡಲು ಹಾಗೂ ಆ ಕೆಲಸಗಳನ್ನು ಕ್ರಿಯೇಟಿವ್‌ ಆಗಿ ಮಾಡಲು ಪ್ರೇರಣೆ ನೀಡುತ್ತದೆ.


3. ಕೆಲಸ ಮಾಡುವಾಗ ನೀವು ಎಕ್ಸೈಟ್‌ ಆಗಿದ್ದರೆ ಅದನ್ನು ನೀವು ಎಂಜಾಯ್‌ ಮಾಡುತ್ತೀರಾ ಎಂದರ್ಥ. ನಿಮ್ಮ ಕೌಶಲ್ಯ ಹಾಗೂ ಆಸಕ್ತಿಗೆ ಅನುಗುಣವಾಗಿ ನೀವು ಕೆಲಸವನ್ನು ಆಯ್ಕೆ ಮಾಡಿಕೊಂಡಿರುವಾಗ ನೀವು ಉತ್ಸಾಹದಿಂದ ಕೆಲಸ ಮಾಡುತ್ತೀರಾ.


ನಿಮ್ಮ ಕೆಲಸದ ಬಗ್ಗೆ ನೀವು ನಿಜವಾಗಿಯೂ ಭಾವೋದ್ರಿಕ್ತರಾಗಿರುವಾಗ ಮತ್ತು ಪ್ರತಿ ದಿನವು ತರುವ ಸವಾಲುಗಳು ಮತ್ತು ಅವಕಾಶಗಳನ್ನು ಎದುರು ನೋಡುತ್ತಿರುವಾಗ ಕೆಲಸವು ಹೆಚ್ಚು ಖುಷಿ ನೀಡುತ್ತದೆ.
ಆದ್ದರಿಂದ ಕೆಲಸವನ್ನು ಪ್ರಾರಂಭಿಸಲು, ಕೈಯಲ್ಲಿರುವ ಕೆಲಸಗಳನ್ನು ನಿಭಾಯಿಸಲು ಮತ್ತು ನಿಮ್ಮ ಸಹೋದ್ಯೋಗಿಗಳೊಂದಿಗೆ ಹೆಚ್ಚಿದ ಉತ್ಸಾಹವನ್ನು ನೀವು ತೋರಬಹುದು.


ಒಟ್ಟಾರೆ, ಯಾವುದೇ ಕೆಲಸವು ಪರಿಪೂರ್ಣವಲ್ಲ. ವೃತ್ತಿಯಲ್ಲಿ ಕೆಲವೊಮ್ಮೆ ಒಳ್ಳೆಯ ದಿನಗಳು ಹಾಗೂ ಕೆಟ್ಟ ದಿನಗಳು ಬರುತ್ತವೆ... ಹೋಗುತ್ತವೆ. ಆದ್ದರಿಂದ ಮೇಲಿನ ಎಲ್ಲಾ ಅಂಶಗಳನ್ನು ನೀವು ಅನುಭವಿಸಿದ್ದರೆ ನೀವು ನಿಮ್ಮ ಕೆಲಸವನ್ನು ಖುಷಿಯಾಗಿಯೇ ಮಾಡುತ್ತಿದ್ದೀರಿ ಎನ್ನಬಹುದು. ಆದರೆ ಸರಿಯಾದ ಸಮಯ ಅಂತ ಬಂದಾಗ ಕೆಲಸವನ್ನು ಬದಲಾಯಿಸಲು ಹಿಂಜರಿಯಬೇಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು