Jobs in Dharwad: ಧಾರವಾಡ ಕೃಷಿ ವಿವಿಯಲ್ಲಿ ನೇಮಕಾತಿ: ಮರೆಯದಿರಿ ಆ.18ರಂದು ನೇರ ಸಂದರ್ಶನ

ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಗಸ್ಟ್​ 18 ರಂದು ನಡೆಯುವ ವಾಕ್​ ಇನ್​ ಇಂಟರ್​ವ್ಯೂ ನಲ್ಲಿ ಭಾಗಿಯಾಗಬಹುದಾಗಿದೆ.

ಕೃಷಿ ವಿಶ್ವವಿದ್ಯಾಲಯ-ಧಾರವಾಡ

ಕೃಷಿ ವಿಶ್ವವಿದ್ಯಾಲಯ-ಧಾರವಾಡ

  • Share this:
ಧಾರವಾಡದ ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯದಲ್ಲಿ(University of Agricultural Sciences Dharwad)  ಸೀನಿಯರ್​ ರಿಸರ್ಚ್​ ಫೆಲೋ (Senior Research Fellow) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಗಸ್ಟ್​ 18 ರಂದು ನಡೆಯುವ ವಾಕ್​ ಇನ್​ ಇಂಟರ್​ವ್ಯೂ ನಲ್ಲಿ ಭಾಗಿಯಾಗಬಹುದಾಗಿದೆ.

ಈ ಹುದ್ದೆಗಳನ್ನು ಸಂಪೂರ್ಣವಾಗಿ ತಾತ್ಕಾಲಿಕ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.ಹುದ್ದೆ ಮಾಹಿತಿಹುದ್ದೆ ವಿವರ
ವಿಶ್ವವಿದ್ಯಾಲಯದ ಹೆಸರುಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ
ಹುದ್ದೆಸೀನಿಯರ್ ರಿಸರ್ಚ್ ಫೆಲೋ
ಹುದ್ದೆಗಳ ಸಂಖ್ಯೆ1
ಕಾರ್ಯ ನಿರ್ವಹಣೆ ಸ್ಥಳಧಾರವಾಡ
ವೇತನ31000 ರೂ ಪ್ರತಿ ತಿಂಗಳು

ಶೈಕ್ಷಣಿಕ ಅರ್ಹತೆ: ಯುಎಎಸ್ ಧಾರವಾಡ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಅಗ್ರಿಕಲ್ಚರ್ ಇಂಜಿನಿಯರಿಂಗ್, ಬ್ಯಾಚುಲರ್ ಪದವಿಯಲ್ಲಿ ಎಂಟೆಕ್ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯುಎಎಸ್ ಧಾರವಾಡ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ಇದನ್ನು ಓದಿ: ಎನ್​ಐಟಿಕೆಯಲ್ಲಿ 14 ಬೋಧಕ ಹುದ್ದೆಗಳಿಗೆ ವಾಕ್​-ಇನ್​-ಇಂಟರ್ವ್ಯೂ

ಆಯ್ಕೆ ವಿಧಾನ: ನೇರ ಸಂದರ್ಶನ

ವಿಶೇಷ ಸೂಚನೆ : ಈ ಹುದ್ದೆಗೆ ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು 100 ರೂ ಛಾಪಾ ಕಾಗದ ಮೇಲೆ ತಾವು ತಾತ್ಕಾಲಿಕ ಹುದ್ದೆಗೆ ಆಯ್ಕೆಯಾಗುತ್ತಿರುವುದಾಗಿ ನಿಗದಿತ ಅರ್ಜಿಯಲ್ಲಿ ಮುಚ್ಚಳಿಕೆ ಬರೆದುಕೊಡಬೇಕು.

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 03-08-2022
ವಾಕ್-ಇನ್ ದಿನಾಂಕ: 18-ಆಗಸ್ಟ್-2022 ಮಧ್ಯಾಹ್ನ 12. 30 ರಿಂದ

ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: uasd.edu

ಇದನ್ನು ಓದಿ: ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಪದವಿ ಆದವರಿಗೆ ಉದ್ಯೋಗಾವಕಾಶ

ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ

ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ಅರ್ಜಿಯನ್ನು ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.
ಪದವಿ ಮತ್ತು 10ನೇ ತರಗತಿ ಮಾರ್ಕ್ಸ್​ ಕಾರ್ಡ್​​
ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.
ಜಾತಿ ಪ್ರಮಾಣ ಪತ್ರ
ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ
ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ.
Published by:Kavya V
First published: