CSIR IIP Recruitment: 57 ಹುದ್ದೆಗೆ ನೇಮಕಾತಿ; ಅಸೋಸಿಯೇಟ್, ಲ್ಯಾಬ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ವಾಕ್​- ಇನ್​ -ಇಂಟರ್​ವ್ಯೂನಲ್ಲಿ ಭಾಗಿಯಾಗುವ ಮೂಲಕ ಹುದ್ದೆಗೆ ಸಂದರ್ಶನ ನೀಡಬಹುದಾಗಿದೆ.

 IIP Recruitment

IIP Recruitment

  • Share this:
    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (Indian Institute of Petroleum) ವಿವಿಧ ಪ್ರಾಜೆಕ್ಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಐಐಪಿ ಡೆಹ್ರಾಡೂನ್ ಅಧಿಸೂಚನೆಯ ಪ್ರಕಾರ 57 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಾಜೆಕ್ಟ್ ಅಸೋಸಿಯೇಟ್-I ಮತ್ತು II, ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ ಮತ್ತು ಲ್ಯಾಬೋರೇಟರಿ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ವಾಕ್​- ಇನ್​ -ಇಂಟರ್​ವ್ಯೂ(Walk-in-interview)ನಲ್ಲಿ ಭಾಗಿಯಾಗುವ ಮೂಲಕ ಹುದ್ದೆಗೆ ಸಂದರ್ಶನ ನೀಡಬಹುದಾಗಿದೆ.

    ಈ ಹುದ್ದೆಯನ್ನು 1 ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು. ಅಭ್ಯರ್ಥಿಗಳು ಇಚ್ಛೆ ವ್ಯಕ್ತಪಡಿಸಿದ್ದಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಈಗಾಗಲೇ ಹುದ್ದೆ, ನೇಮಕಾತಿ, ಆಯ್ಕೆ ಪ್ರಕ್ರಿಯೆ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಸಂಸ್ಥೆ ವೆಬ್​ಸೈಟ್​​ಗೆ ಭೇಟಿ ನೀಡಬಹುದಾಗಿದೆ.

    ಸಂಸ್ಥೆ: ಭಾರತೀಯ ಪೆಟ್ರೋಲಿಯಂ ಸಂಸ್ಥೆ
    ಹುದ್ದೆ ಹೆಸರು : ಪ್ರಾಜೆಕ್ಟ್ ಅಸೋಸಿಯೇಟ್, ಹಿರಿಯ ಪ್ರಾಜೆಕ್ಟ್ ಅಸೋಸಿಯೇಟ್ ಮತ್ತು ಪ್ರಯೋಗಾಲಯ ಸಹಾಯಕ
    ಹುದ್ದೆ ಸಂಖ್ಯೆ: 57
    ಹುದ್ದೆ ಸ್ಥಳ: ಡೆಹ್ರಾಡೂನ್​- ಉತ್ತರಾಖಂಡ




























    ಹುದ್ದೆಹುದ್ದೆ ಸಂಖ್ಯೆವೇತನ
    ಪ್ರಾಜೆಕ್ಟ್ ಅಸೋಸಿಯೇಟ್​  -14425,000- 31,000 ರೂ ಮಾಸಿಕ
    ಪ್ರಾಜೆಕ್ಟ್ ಅಸೋಸಿಯೇಟ್​​ -21128,000- 35,000 ರೂ ಮಾಸಿ
    ಹಿರಿಯ ಪ್ರಾಜೆಕ್ಟ್​ ಅಸೋಸಿಯೇಟ್​142, 000 ರೂ ಮಾಸಿಕ
    ಲ್ಯಾಬ್ ಅಸಿಸ್ಟೆಂಟ್​120, 000 ರೂ ಮಾಸಿಕ

    ವಿದ್ಯಾರ್ಹತೆ: ವಿದ್ಯಾರ್ಹತೆ: ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ ಸಂಬಂಧಪಟ್ಟ ವಿಷಯದಲ್ಲಿ ಪಿಎಚ್‌ಡಿ ಹೊಂದಿರಬೇಕು.ಅಭ್ಯರ್ಥಿಗಳು ಇತರೆ ಹುದ್ದೆಗಳಿಗೆ ಸಂಬಂಧಿತ ವಿಭಾಗದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂಎಸ್ಸಿ, ಬಿಇ, ಬಿಟೆಕ್​, ಬಿಎಸ್ಸಿ ಪದವಿಯನ್ನು ಹೊಂದಿರಬೇಕು.

    ದನ್ನು ಓದಿ: ಕರೂರು ವೈಶ್ಯ ಬ್ಯಾಂಕ್​ನಲ್ಲಿ ನೇಮಕಾತಿ; ಸಂದರ್ಶನ ಮೂಲಕ ಆಯ್ಕೆ

    ವಯೋಮಿತಿ :

    ಪ್ರಾಜೆಕ್ಟ್ ಅಸೋಸಿಯೇಟ್-35 ವರ್ಷಗಳು

    ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್-40 ವರ್ಷಗಳು

    ಪ್ರಯೋಗಾಲಯ ಸಹಾಯಕ - 50 ವರ್ಷಗಳು.

    ವಯೋಮಿತಿ ಸಡಿಲಿಕೆ:   ಭಾರತೀಯ ಪೆಟ್ರೋಲಿಯಂ ಸಂಸ್ಥೆ ನಿಯಮ ಅನುಸಾರ

    ಹುದ್ದೆ ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ ಮೂಲಕ

    ಪ್ರಮುಖ ಲಿಂಕ್​ಗಳು:

    ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಇಲ್ಲಿ ಕ್ಲಿಕ್ ಮಾಡಿ

    ಇದನ್ನು ಓದಿ: ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ; ಐಟಿಐ ಆದವರಿಗೆ ಅವಕಾಶ

    ನೇರ ಸಂದರ್ಶನದ ದಿನಾಂಕ: ಜೂನ್​ 13 ರಿಂದ ಜೂನ್​ 17ರವರೆಗೆ ಬೆಳಗ್ಗೆ 8.30ರಿಂದ ಸಂದರ್ಶನ ಪ್ರಕ್ರಿಯೆ ಆರಂಭ

    ಅರ್ಜಿ ಸಲ್ಲಿಕೆ ವಿಧಾನ

    ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    -ಬಳಿಕ ನೀಡಲಾದ ನಿಗದಿತ ಅರ್ಜಿಗಳನ್ನು ಭರ್ತಿ ಮಾಡಿ. ಸ್ವಯಂ ದೃಡೀಕರಣದೊಂದಿಗೆ ಸಲ್ಲಿಸಬೇಕು. ಈ ಅರ್ಜಿ ಜೊತೆಯಲ್ಲಿ ಎಸ್ಎಸ್​ಎಲ್​ಸಿ ಅಂಕ ಪ್ರಮಾಣ ಪತ್ರ, ವರ್ಗ, ಇತ್ತೀಚಿನ ಪಾಸ್​ಪೋರ್ಟ್​​​ ಸೈಜ್​ ಫೋಟೋ, ಅನುಭವ ಪ್ರಮಾಣ ಪತ್ರ, ಜೊತೆಗೆ ರೆಸ್ಯೂಮ್​​ ಅನ್ನು ಕೂಡ ಲಗತ್ತಿಸಬೇಕು.

    ಈ ಅರ್ಜಿಗಳ ಜೊತೆ ನಿಗದಿತ ದಿನಾಂಕ ಹಾಗೂ ವೇಳೆಯಲ್ಲಿ ಕೆಳಕಂಡ ವಿಳಾಸದಲ್ಲಿ ಅಭ್ಯರ್ಥಿಗಳು ವಾಕ್​ ಇನ್​ ಇಂಟರ್​ ವ್ಯೂಗೆ ಹಾಜರಾಗಬಹುದಾಗಿದೆ.

    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ, ಮೊಕಂಪೂರ್​, ಹರಿದ್ವಾರ ರಸ್ತೆ, ಡೆಹ್ರಾಡೂನ್-248005
    Published by:Seema R
    First published: