• Home
  • »
  • News
  • »
  • jobs
  • »
  • ESIC Recruitment: ಇಎಸ್​ಐಸಿಯಲ್ಲಿ ಸೀನಿಯರ್​ ರೆಸಿಡೆಂಟ್​ ಹುದ್ದೆಗೆ ನೇರ ಸಂದರ್ಶನ

ESIC Recruitment: ಇಎಸ್​ಐಸಿಯಲ್ಲಿ ಸೀನಿಯರ್​ ರೆಸಿಡೆಂಟ್​ ಹುದ್ದೆಗೆ ನೇರ ಸಂದರ್ಶನ

 ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

ಈ ಹುದ್ದೆಗಳನ್ನು ಮೂರು ವರ್ಷಗಳ ಒಪ್ಪಂದದ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಲಾಗುತ್ತಿದೆ.

  • Share this:

    ನೌಕರರ ರಾಜ್ಯ ವಿಮಾ ನಿಗಮದಲ್ಲಿ (Employees State Insurance Corporation Karnataka) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. 9 ಸೀನಿಯರ್​ ರೆಸಿಡೆಂಟ್​ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಇದೇ ಅಕ್ಟೋಬರ್​ 11 ರಂದು ಈ ಹುದ್ದೆಗೆ ವಾಕ್​ ಇನ್​ ಇಂಟರ್​ ವ್ಯೂ ನಡೆಯಲಿದೆ.


    ಈ ಹುದ್ದೆಗಳನ್ನು ಮೂರು ವರ್ಷಗಳ ಒಪ್ಪಂದದ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಲಾಗುತ್ತಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಯ ಹೆಸರುನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ
    ಹುದ್ದೆಯ ಹೆಸರುಸೀನಿಯರ್​ ರೆಸಿಡೆಂಟ್​
    ಹುದ್ದೆಗಳ ಸಂಖ್ಯೆ9
    ಉದ್ಯೋಗ ಸ್ಥಳಬೆಂಗಳೂರು
    ವೇತನ67700 ರೂ ಮಾಸಿಕ

    ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಎಮರ್ಜೆನ್ಸಿ ಮೆಡಿಸಿನ್/ಅನೆಸ್ತೇಶಿಯಾ/ರೆಸ್ಪಿರೇಟರಿ ಮೆಡಿಸಿನ್, ಆರ್ಥೋಪೆಡಿಕ್ಸ್, ಜನರಲ್ ಸರ್ಜರಿಯಲ್ಲಿ ಎಂಎಸ್​, ಡಿಎನ್​ಬಿ ನಲ್ಲಿ ಎಂಡಿ ಪೂರ್ಣಗೊಳಿಸಿರಬೇಕು.


    ಇದನ್ನು ಓದಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿದೆ ಹುದ್ದೆ; ಸಿವಿಲ್​ ಇಂಜಿನಿಯರ್​ ಆದವರಿಗೆ ಅವಕಾಶ


    ವಯಸ್ಸಿನ ಮಿತಿ:  ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳು ಮೀರಿರಬಾರದು.


    ಇದನ್ನು ಓದಿ:


    ಅರ್ಜಿ ಶುಲ್ಕ: ವಿನಾಯಿತಿ


    ಆಯ್ಕೆ ವಿಧಾನ
    ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ
    ಆಯ್ಕೆ ಮಂಡಳಿಯ ಮುಂದೆ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು


    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 23 ಸೆಪ್ಟೆಂಬರ್​​​ 2022
    ವಾಕ್-ಇನ್ ದಿನಾಂಕ: 11 ಅಕ್ಟೋಬರ್​​ 2022


    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: esic.nic.in


    ಸಂದರ್ಶನ ನಡೆಯುವ ಸ್ಥಳ:


    ಶೈಕ್ಷಣಿಕ ಬ್ಲಾಕ್, ESIC MC ಮತ್ತು PGIMSR, ರಾಜಾಜಿ ನಗರ, ಬೆಂಗಳೂರು.


    ಇದನ್ನು ಓದಿ: ಡಿಆರ್​ಡಿಒದಲ್ಲಿದೆ ಸಮಾಲೋಚಕರ ಹುದ್ದೆ; ಮಾಸಿಕ 60ಸಾವಿರ ರೂ ವೇತನ


    ವಿಶೇಷ ಸೂಚನೆ


    ಅರ್ಜಿಯನ್ನು ESIC ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು ಅಂದರೆ. www.esic.nic.in.  ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು.


    ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ


    -ಎರಡು ಪಾಸಪೋರ್ಸ್​ ಸೈಜ್​ ಫೋಟೋ
    -ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
    -ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರಗಳು ಅವಶ್ಯವಾಗಿದೆ.

    Published by:Seema R
    First published: