Job in ESIC: ನೌಕರರರ ರಾಜ್ಯ ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ವಾಕ್​ ಇನ್​ ಇಂಟರ್​ವ್ಯೂ

ಬೆಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಗಸ್ಟ್​ 10 ರಂದು ನೇರ ಸಂದರ್ಶನ ನಡೆಯಲಿದೆ.

ESICಯಲ್ಲಿ ಹುದ್ದೆಗೆ ಅರ್ಜಿ ಆಹ್ವಾನ

ESICಯಲ್ಲಿ ಹುದ್ದೆಗೆ ಅರ್ಜಿ ಆಹ್ವಾನ

  • Share this:
    ನೌಕರರ ರಾಜ್ಯ ವಿಮಾ ನಿಗಮದಲ್ಲಿ (Employees State Insurance Corporation) ವಿವಿಧ ಹುದ್ದೆಗಳಿಗೆ ವಾಕ್​ ಇನ್​ ಇಂಟರ್​ವ್ಯೂಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್​ ರೆಸಿಡೆಂಟ್​, ಪಾರ್ಟ್​ ಟೈಮ್​ ಸ್ಪೆಷಲಿಸ್ಟ್ (Senior Resident, Part Time Specialist)​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 12 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಗಸ್ಟ್​ 10 ರಂದು ನೇರ ಸಂದರ್ಶನ ನಡೆಯಲಿದೆ.

    ಈ ಹುದ್ದೆಗಳನ್ನು 1 ವರ್ಷದ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಗುತ್ತಿದೆ. ಅಭ್ಯರ್ಥಿಗಳ ಕಾರ್ಯ ಕ್ಷಮತೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ಮಾಡಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC ಕರ್ನಾಟಕ)
    ಹುದ್ದೆ: ಸೀನಿಯರ್​ ರೆಸಿಡೆಂಟ್, ಅರೆಕಾಲಿಕ ತಜ್ಞರು
    ಹುದ್ದೆಗಳ ಸಂಖ್ಯೆ: 12
    ಉದ್ಯೋಗ ಸ್ಥಳ: ಬೆಂಗಳೂರು
    ವೇತನ: 60000 ರೂ. ಪ್ರತಿ ತಿಂಗಳು
























    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿವೇತನ
    ಸೀನಿಯರ್​ ರೆಸಿಡೆಂಟ್​​8ಎಂಬಿಬಿಎಸ್​, ಸ್ನಾತಕೋತ್ತರ ಪದವಿಗರಿಷ್ಠ 45 ವರ್ಷ95000 ರೂ ಮಾಸಿಕ
    ಅರೆಕಾಲಿಕ ತಜ್ಞರು4ಸ್ನಾತಕೋತ್ತರ ಪದವಿಗರಿಷ್ಠ 67 ವರ್ಷ60000 ರೂ ಮಾಸಿಕ

    ವಯೋಮಿತಿ ಸಡಿಲಿಕೆ:
    ಕಾರ್ಮಿಕರ ರಾಜ್ಯ ವಿಮಾ ನಿಗಮದ ಕರ್ನಾಟಕ ನಿಯಮಗಳ ಪ್ರಕಾರ

    ಇದನ್ನು ಓದಿ: ಕ್ಲರ್ಕ್​ ಮತ್ತು ಸ್ಟೆನೋಗ್ರಾಫರ್​ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ಉದ್ಯೋಗದ ವಿವರ

    ಆಯ್ಕೆ ಪ್ರಕ್ರಿಯೆ
    ವೈದ್ಯಕೀಯ ಫಿಟ್ನೆಸ್, ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 28 ಜುಲೈ 2022
    ವಾಕ್-ಇನ್ ದಿನಾಂಕ: 10 ಆಗಸ್ಟ್ 2022 ಬೆಳಗ್ಗೆ 11 ಗಂಟೆಗೆ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: esic.nic.in

    ಇದನ್ನು ಓದಿ: ಏರ್​ ಇಂಡಿಯಾದಲ್ಲಿದೆ ಉದ್ಯೋಗ; ಪದವಿ ಆದವರಿಗೆ ಅವಕಾಶ

    ಸಂದರ್ಶನ ನಡೆಯುವ ಸ್ಥಳ
    ವೈದ್ಯಕೀಯ ಅಧೀಕ್ಷಕರ ಕಚೇರಿ. ಇಎಸ್​ಐಸಿ ಆಸ್ಪತ್ರೆ, ಪೀಣ್ಯ, ಬೆಂಗಳೂರು.

    ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ

    -ಎರಡು ಪಾಸಪೋರ್ಸ್​ ಸೈಜ್​ ಫೋಟೋ
    -ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
    -ಇತರೆ ಪ್ರಮಾಣ ಪತ್ರಗಳೊಂದಿಗೆ ನೇರ ಸಂದರ್ಶನಕ್ಕೂ 30 ನಿಮಿಷ ಮೊದಲೇ ಹಾಜರಿರಬೇಕು.

    ನೇರ ಸಂದರ್ಶನಕ್ಕೆ ನಿಗದಿತ ಅರ್ಜಿ ನಮೂನೆ ನೀಡಲಾಗುವುದು. ಈ ಅರ್ಜಿಯನ್ನು ನೇರ ಸಂದರ್ಶನದ ವೇಳೆ ನೀಡಲಾಗುವುದು. ಇದನ್ನು ಭರ್ತಿ ಮಾಡುವುದು ಕಡ್ಡಾಯ.
    -12 ಗಂಟೆ ಬಳಿಕ ಬಂದ ಅಭ್ಯರ್ಥಿಗಳಿಗೆ ನೇರ ಸಂದರ್ಶನದಲ್ಲಿ ಭಾಗಿಯಾಗಲು ಅವಕಾಶ ಇರುವುದಿಲ್ಲ.
    Published by:Seema R
    First published: