Government Job: ಕೃಷಿ ಮಹಾವಿದ್ಯಾಲಯದಲ್ಲಿ ಕೆಲಸಕ್ಕೆ ಅರ್ಜಿ ಹಾಕಿ - ಇಲ್ಲಿದೆ ಮಾಹಿತಿ

Job Alert: ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಶೈಕ್ಷಣಿಕ ಪ್ರಮಾಣ ಪತ್ರಗಳ ಒರಿಜಿನಲ್ ಪ್ರತಿ ತರಬೇಕು, ಹಾಗೂ ದೃಢೀಕೃತ ತಲಾ ಎರಡು ಪ್ರತಿಯೊಂದಿಗೆ ನೇರ ಸಂದರ್ಶನದ ಸಮಯದಲ್ಲಿ ನೀಡಬೇಕು.  

ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿ

ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿ

  • Share this:
ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ(Agricultural VV)  ಖಾಲಿ ಇರುವ ಕೆಲ ದೈಹಿಕ ಶಿಕ್ಷಣ ಸಹಾಯಕ ಪ್ರಾಧ್ಯಾಪಕರ (Physical assistant professor) ಹುದ್ದೆ ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು,  ಈ ಹುದ್ದೆಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 18ರಂದು ನಡೆಯುವ ನೇರ ಸಂದರ್ಶನದಲ್ಲಿ ಹಾಜರಾಗಬಹುದು. ಯಾವುದೇ ಹುದ್ದೆಗೆ ಅರ್ಜಿ ಹಾಕುವಾಗ ಅಥವಾ ನೇರ ಸಂದರ್ಶನಕ್ಕೆ (Walk In Interview) ಹಾಜರಾಗುವಾಗ ವೇತನ ಶೈಕ್ಷಣಿಕ ಅರ್ಹತೆ, ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ ಪಡೆದಿರುವುದು ಸಹಾಯ ಮಾಡುತ್ತದೆ. ಹಾಗಾಗಿ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆವಿವಿ ಹೆಸರುಹನುಮನಪಟ್ಟಿ ಕೃಷಿ ಮಹಾವಿದ್ಯಾಲಯ
ಹುದ್ದೆ ಹೆಸರುದೈಹಿಕ ಶಿಕ್ಷಣ ಸಹಾಯಕ ಪ್ರಾಧ್ಯಾಪಕ
ನೇರ ಸಂದರ್ಶನ ದಿನಾಂಕಏಪ್ರಿಲ್ 18, 2022
ಹುದ್ದೆಗಳ ಸಂಖ್ಯೆನಿಗದಿಯಾಗಿಲ್ಲ
ಶೈಕ್ಷಣಿಕ ಅರ್ಹತೆದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್​ಡಿ
ನೇರ ಸಂದರ್ಶನ ನಡೆಯುವ ವಿಳಾಸ

ಡೀನ್(ಕೃಷಿ)ರವರ ಕಾರ್ಯಾಲಯ,

ಕೃಷಿ ಮಹಾವಿದ್ಯಾಲಯ,

ಹನುಮನಮಟ್ಟಿ

ಹನುಮನಪಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಕೆಲ ದೈಹಿಕ ಶಿಕ್ಷಣ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇರ ಸಂದರ್ಶನವಿದ್ದು, ಹುದ್ದೆಗೆ ತಕ್ಕಂತೆ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಹಾಜರಾಗಬಹುದು. ಏಪ್ರಿಲ್​ 18ರಂದು ಡೀನ್ (ಕೃಷಿ)ರವರ ಕಾರ್ಯಾಲಯ, ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿಯಲ್ಲಿ ನೇರ ಸಂದರ್ಶನವಿದ್ದು, ಅರ್ಹ ಅಭ್ಯರ್ಥಿಗಳು ಭಾಗವಹಿಸಬಹುದು.

ವಿವಿ ಹೆಸರು: ಹನುಮನಪಟ್ಟಿ ಕೃಷಿ ಮಹಾವಿದ್ಯಾಲಯ
ಹುದ್ದೆ ಹೆಸರು : ದೈಹಿಕ ಶಿಕ್ಷಣ ಸಹಾಯಕ ಪ್ರಾಧ್ಯಾಪಕ
ನೇರ ಸಂದರ್ಶನ ದಿನಾಂಕ : ಏಪ್ರಿಲ್ 18, 2022
ಹುದ್ದೆಗಳ ಸಂಖ್ಯೆ : ನಿಗದಿ ಮಾಡಿಲ್ಲ ವೇತನ: ನಿಯಮಾನುಸಾರ

ವಿದ್ಯಾರ್ಹತೆ ವಿವರ
ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಾಸ್ ಆಗಿ, ಜತೆಗೆ ನೆಟ್ ಪರೀಕ್ಷೆ ಪಾಸಾಗಿರಬೇಕು ಅಥವಾ ಎನ್.ಎಸ್ ಎಸ್ ಸಂಶೋಧನಾ ಲೇಖನ ಬರೆದಿರಬೇಕು. ಅಲ್ಲದೇ, ದೈಹಿಕ ಶಿಕ್ಷಣದ ಬಗ್ಗೆ ಡಾಕ್ಟರೇಟ್‌ ಪದವಿ, ಜೊತೆಗೆ ಎನ್.ಇ.ಟಿ. ಅಥವಾ ಎರಡು ಸಂಶೋಧನಾ ಲೇಖನ ಬರೆದ ಅಭ್ಯರ್ಥಿಗಳಿಗೆ ಅದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: 13 ಪ್ರಾಜೆಕ್ಟ್ ಸ್ಟಾಫ್ ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 49 ಸಾವಿರ ಸಂಬಳ

ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಶೈಕ್ಷಣಿಕ ಪ್ರಮಾಣ ಪತ್ರಗಳ ಒರಿಜಿನಲ್ ಪ್ರತಿ ತರಬೇಕು, ಹಾಗೂ ದೃಢೀಕೃತ ತಲಾ ಎರಡು ಪ್ರತಿಯೊಂದಿಗೆ ನೇರ ಸಂದರ್ಶನದ ಸಮಯದಲ್ಲಿ ನೀಡಬೇಕು.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 18 ರಂದು ಬೆಳಿಗ್ಗೆ 11 ಗಂಟೆಗೆ, ಡೀನ್(ಕೃಷಿ)ರವರ ಕಾರ್ಯಾಲಯ, ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.

ನೇರ ಸಂದರ್ಶನ ನಡೆಯುವ ವಿಳಾಸ

ಡೀನ್(ಕೃಷಿ)ರವರ ಕಾರ್ಯಾಲಯ,

ಕೃಷಿ ಮಹಾವಿದ್ಯಾಲಯ,

ಹನುಮನಮಟ್ಟಿ

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು 

ನೇರ ಸಂದರ್ಶನ ನಡೆಯುವ ದಿನಾಂಕ: ಏಪ್ರಿಲ್ 18,  ಬೆಳಗ್ಗೆ 11 ಗಂಟೆ
Published by:Sandhya M
First published: