ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ (Rani Channamma University Belagavi) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಲೈಬ್ರರಿ ಟ್ರೈನಿ (Library Trainee) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದ್ದು, ವಾಕ್-ಇನ್- ಇಂಟರ್ವ್ಯೂನಲ್ಲಿ (Walk-in-Interview) ಆಯ್ಕೆ ನಡೆಯಲಿದೆ.
ಈ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದ್ದು, ಅಭ್ಯರ್ಥಿಗಳು ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು. ಈ ಹುದ್ದೆ ಆಯ್ಕೆ ಪ್ರಕ್ರಿಯೆ, ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇತರೆ ಮಾಹಿತಿ ಕೆಳಕಂಡಂತೆ ಇದೆ.
ಹುದ್ದೆ ಮಾಹಿತಿ | ಹುದ್ದೆ ವಿವರ |
ವಿಶ್ವವಿದ್ಯಾಲಯದ ಹೆಸರು | ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ (RCUB) |
ಹುದ್ದೆಯ ಹೆಸರು | ಲೈಬ್ರರಿ ಟ್ರೈನಿ |
ಹುದ್ದೆಗಳ ಸಂಖ್ಯೆ | 5 |
ಉದ್ಯೋಗ ಸ್ಥಳ | ಬೆಳಗಾವಿ |
ಸಂಬಳ | ರಾಣಿ ವಿಶ್ವವಿದ್ಯಾಲಯ ನಿಯಮಗಳ ಪ್ರಕಾರ |
ನೀಟ್ ಅಥವಾ ಸೀಟ್ ಪಾಸಾದ ಅಭ್ಯರ್ಥಿಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ.
ವಯಸ್ಸಿನ ಮಿತಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ನೇಮಕಾತಿ ಅಧಿಸೂಚನೆಯ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.
ಇದನ್ನು ಓದಿ: ಬೆಳಗಾವಿಯ ಎಚ್ಎಲ್ಎಲ್ ಲೈಫ್ಕೇರ್ನಲ್ಲಿ ಟ್ರೈನಿಗಳ ನೇಮಕಾತಿ; SSLC, ITI ಆಗಿದ್ರೆ ನೋಡಿ
ವಯಸ್ಸಿನ ಸಡಿಲಿಕೆ:
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ
ವಾಕ್ ಇನ್ ಇಂಟರ್ವ್ಯೂ
ಪ್ರಮುಖ ದಿನಾಂಕ
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 17-06-2022
ವಾಕ್-ಇನ್ ಇಂಟರ್ವ್ಯೂ ನಡೆಯುವ ದಿನಾಂಕ: 24-ಜೂನ್-2022 ಬೆಳಗ್ಗೆ 11. 30ಕ್ಕೆ
ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ವೆಬ್‌ಸೈಟ್: rcub.ac.in
ಇದನ್ನು ಓದಿ: ಕಾರ್ಮಿಕರ ವಿಮಾ ನಿಗಮದಲ್ಲಿ ಭರ್ಜರಿ ನೇಮಕಾತಿ; ವಾಕ್ ಇನ್ ಇಂಟರ್ವ್ಯೂ ಮೂಲಕ ಆಯ್ಕೆ
ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ
-ಎರಡು ಪಾಸಪೋರ್ಸ್ ಸೈಜ್ ಫೋಟೋ
-ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್ಎಸ್ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
-ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರಗಳೊಂದಿಗೆ ನೇರ ಸಂದರ್ಶನಕ್ಕೂ 30 ನಿಮಿಷ ಮೊದಲೇ ಹಾಜರಿರಬೇಕು.
ಅಭ್ಯರ್ಥಿಗಳು ನೇರ ಸಂದರ್ಶನದ ದಿನಾಂಕ ವಿಶ್ವವಿದ್ಯಾಲಯದ ಆಡಳಿತ ಕಚೇರಿಗೆ ಭೇಟಿ ನೀಡಿ. ಮಾಹಿತಿ, ದಾಖಲೆಗಳನ್ನು ನೀಡಬೇಕು. ಬಳಿಕ ನೇರ ಸಂದರ್ಶನ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ