ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯಲ್ಲಿ (Institute of Wood Science and Technology) ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರು, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡದಲ್ಲಿ ಹುದ್ದೆ ನಿರ್ವಹಣೆಗೆ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಬಹುದಾಗಿದೆ. ಜೂನಿಯರ್ ಪ್ರಾಜೆಕ್ಟ್ ಫೆಲೋ (JRF), ಪ್ರಾಜೆಕ್ಟ್ ಅಸಿಸ್ಟೆಂಟ್ (JPF) ಸೇರಿದಂತೆ ಒಟ್ಟು 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಜುಲೈ 5ರ ಬೆಳಗ್ಗೆ ಬೆಂಗಳೂರು ಕಚೇರಿಯಲ್ಲಿ ವಾಕ್ ಇನ್ ಇಂಟರ್ವ್ಯೂ ನಡೆಯಲಿದೆ.
ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲು ಸಂಸ್ಥೆ ಮುಂದಾಗಿದೆ. ಈ ಹುದ್ದೆ ಆಯ್ಕೆ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.
ಸಂಸ್ಥೆಯ ಹೆಸರು: ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ
ಹುದ್ದೆಗಳ ಸಂಖ್ಯೆ: 13
ಉದ್ಯೋಗ ಸ್ಥಳ: ಚಿಕ್ಕಮಗಳೂರು - ಉತ್ತರ ಕನ್ನಡ - ಬೆಂಗಳೂರು
ಹುದ್ದೆಯ ಹೆಸರು: ಜೂನಿಯರ್ ಪ್ರಾಜೆಕ್ಟ್ ಫೆಲೋ, ಪ್ರಾಜೆಕ್ಟ್ ಅಸಿಸ್ಟೆಂಟ್
ವೇತನ: 19000-31000 ರೂ ಪ್ರತಿ ತಿಂಗಳು
ಹುದ್ದೆ | ಹುದ್ದೆ ಸಂಖ್ಯೆ | ವಯೋಮಿತಿ | ವೇತನ |
ಜೂನಿಯರ್ ರಿಸರ್ಚ್ ಫೆಲೋ/ಜೂನಿಯರ್ ಪ್ರಾಜೆಕ್ಟ್ ಫೆಲೋ | 3 | 28 ವರ್ಷ | 20000-31000 ರೂ ಮಾಸಿಕ |
ಹಿರಿಯ ಪ್ರಾಜೆಕ್ಟ್ ಫೆಲೋ/ಜೂನಿಯರ್ ಪ್ರಾಜೆಕ್ಟ್ ಫೆಲೋ | 1 | 28-32 ವರ್ಷ | 23000 ರೂ ಮಾಸಿಕ |
ಜೂನಿಯರ್ ಪ್ರಾಜೆಕ್ಟ್ ಫೆಲೋ | 5 | 28 ವರ್ಷ | 20000 ರೂ ಮಾಸಿಕ |
ಪ್ರಾಜೆಕ್ಟ್ ಅಸಿಸ್ಟೆಂಟ್ | 4 | ಸಂಸ್ಥೆಯ ನಿಯಮ ಅನುಸಾರ | 19000 ರೂ ಮಾಸಿಕ |
ಜೂನಿಯರ್ ರಿಸರ್ಚ್ ಫೆಲೋ/ಜೂನಿಯರ್ ಪ್ರಾಜೆಕ್ಟ್ ಫೆಲೋ : ಸಸ್ಯಶಾಸ್ತ್ರದಲ್ಲಿ ಎಂಎಸ್ಸಿ
ಸೀನಿಯರ್ ಪ್ರಾಜೆಕ್ಟ್ ಫೆಲೋ/ಜೂನಿಯರ್ ಪ್ರಾಜೆಕ್ಟ್ ಫೆಲೋ : ಭೌತಶಾಸ್ತ್ರ/ವುಡ್ ಸೈನ್ಸ್/ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎಂಇ, ಎಂಎಸ್ ಅಥವಾ ಎಂಟೆಕ್ ಪದವಿ
ಜೂನಿಯರ್ ಪ್ರಾಜೆಕ್ಟ್ ಫೆಲೋ : ಬಿಟೆಕ್, ಜೀವಶಾಸ್ತ್ರ, ಮರ ವಿಜ್ಞಾನ, ಪರಿಸರ, ಕೃಷಿ, ಅರಣ್ಯ ವಿಷಯದಲ್ಲಿ ಎಂಎಸ್ಸಿ ಪದವಿ
ಪ್ರಾಜೆಕ್ಟ್ ಅಸಿಸ್ಟೆಂಟ್: ಪದವಿ, ಜೈವಿಕ ವಿಜ್ಞಾನದಲ್ಲಿ ಬಿಎಸ್ಸಿ, ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ಇದನ್ನು ಓದಿ: ಬೆಂಗಳೂರು ಐಕಿಯ ಕಂಪನಿಯಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಸ್ಥಳೀಯರಿಗೆ ಮೊದಲ ಆದ್ಯತೆ
ವಯಸ್ಸಿನ ಸಡಿಲಿಕೆ:
ಪ. ಜಾ, ಪ.ಪಂಮಹಿಳೆ, ವಿಕಲಚೇತನ, ಮಹಿಆಅಭ್ಯರ್ಥಿಗಳು: 05 ವರ್ಷಗಳು
ಆಯ್ಕೆ ಪ್ರಕ್ರಿಯೆ
ನೇರ ಸಂದರ್ಶನ
ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 22 ಜೂನ್ 2022
ವಾಕ್-ಇನ್ ದಿನಾಂಕ: 05 ಜುಲೈ 2022 ಬೆಳಗ್ಗೆ 10:30
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: iwst.icfre.gov.in
ವಾಕ್ ಇನ್ ಇಂಟರ್ವ್ಯೂ ನಡೆಯುವ ಸ್ಥಳ
ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು - 560003
ಇದನ್ನು ಓದಿ: ಕೇಂದ್ರ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ಅಧಿಸೂಚನೆ; ಇಲ್ಲಿದೆ ಸಂಪೂರ್ಣ ಮಾಹಿತಿ
ವಾಕ್-ಇನ್-ಇಂಟರ್ವ್ಯೂಗೆ ಈ ದಾಖಲೆ ಅವಶ್ಯ
ಎರಡು ಪಾಸಪೋರ್ಸ್ ಸೈಜ್ ಫೋಟೋ
-ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್ಎಸ್ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
-ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ ಇವುಗಳ ಒರಿಜಿನರಲ್ ಹಾಗೂ ಎರಡು ಸೆಟ್ ಪೋಟೋ ಕಾಪಿಗಳೊಂದಿಗೆ ನೇರ ಸಂದರ್ಶನದಲ್ಲಿ ಅಭ್ಯರ್ಥಿ ಹಾಜರಾಗಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ