• Home
  • »
  • News
  • »
  • jobs
  • »
  • VSSC Recruitment 2022: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿದೆ ಹುದ್ದೆ; ವಾಕ್​-ಇನ್​ನಲ್ಲಿ ಭಾಗಿಯಾಗಿ

VSSC Recruitment 2022: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿದೆ ಹುದ್ದೆ; ವಾಕ್​-ಇನ್​ನಲ್ಲಿ ಭಾಗಿಯಾಗಿ

ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಿ

ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಹುದ್ದೆಗಳು ಖಾಲಿ ಇವೆ.

  • Share this:

    ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (Vikram Sarabhai Space Centre)ವಿವಿಧ ಗ್ರಾಜುಯೇಟ್​ ಅಪ್ರೆಂಟಿಸ್​ (Graduate Apprentice)  ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 273 ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಬಿಇ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಹುದ್ದೆಗಳು ಖಾಲಿ ಇವೆ. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಇದೇ ಅಕ್ಟೋಬರ್​ 15ರಂದು ನಡೆಯುವ ವಾಕ್​ ಇನ್​ ಇಂಟರ್​ವ್ಯೂನಲ್ಲಿ ಭಾಗಿಯಾಗಿ ಹುದ್ದೆಗೆ ಆಯ್ಕೆಗೊಳ್ಳಬಹುದಾಗಿದೆ.


    ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.


    ಸಂಸ್ಥೆಯ ಹೆಸರು: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC)
    ಹುದ್ದೆಯ ಹೆಸರು: ಗ್ರಾಜುಯೇಟ್ ಅಪ್ರೆಂಟಿಸ್
    ಹುದ್ದೆಗಳ ಸಂಖ್ಯೆ: 273
    ಉದ್ಯೋಗ ಸ್ಥಳ: ಕೇರಳ - ತಮಿಳುನಾಡು - ಕರ್ನಾಟಕ - ಆಂಧ್ರ ಪ್ರದೇಶ
    ಸ್ಟೈಪೆಂಡ್: 9000ರೂ. ಪ್ರತಿ ತಿಂಗಳು

    ಹುದ್ದೆಹುದ್ದೆ ಸಂಖ್ಯೆ
    ಏರೋನಾಟಿಕಲ್/ಏರೋಸ್ಪೇಸ್ ಇಂಜಿನಿಯರಿಂಗ್15
    ಕೆಮಿಕಲ್ ಇಂಜಿನಿಯರಿಂಗ್10
    ಸಿವಿಲ್ ಇಂಜಿನಿಯರಿಂಗ್12
    ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್20
    ಎಲೆಕ್ಟ್ರಿಕಲ್ ಇಂಜಿನಿಯರಿಂಗ್12
    ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್43
    ಮೆಕ್ಯಾನಿಕಲ್ ಇಂಜಿನಿಯರಿಂಗ್45
    ಲೋಹಶಾಸ್ತ್ರ6
    ಪ್ರೊಡಕ್ಷನ್ ಇಂಜಿನಿಯರಿಂಗ್4
    ಅಗ್ನಿಶಾಮಕ ಮತ್ತು ಸುರಕ್ಷತೆ ಇಂಜಿನಿಯರಿಂಗ್2
    ಹೋಟೆಲ್ ನಿರ್ವಹಣೆ/ಕೇಟರಿಂಗ್ ತಂತ್ರಜ್ಞಾನ4
    ಹಣಕಾಸು ಮತ್ತು ತೆರಿಗೆ25
    ಕಂಪ್ಯೂಟರ್ ಅಪ್ಲಿಕೇಶನ್75

    ಶೈಕ್ಷಣಿಕ ಅರ್ಹತೆ: ಅಧಿಕೃತ ನೇಮಕಾತಿ ಅನುಸಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿಇ, ಬಿಟೆಕ್​, ಹೋಟೆಲ್​ ಮ್ಯಾನೇಜ್​ಮೆಂಟ್​, ವಾಣಿಜ್ಯ ಪದವಿಯನ್ನು ಹೊಂದಿರಬೇಕು.


    ಇದನ್ನು ಓದಿ: 1591 ಪೊಲೀಸ್​ ಕಾನ್ಸ್​ಟೇಬಲ್​ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ


    ವಯಸ್ಸಿನ ಮಿತಿ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 30 ವರ್ಷಗಳು ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
    ಪ.ಜಾ, ಪ.ಪಂ ಅಭ್ಯರ್ಥಿಗಳು: 5 ವರ್ಷಗಳು
    ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು


    ಅರ್ಜಿ ಶುಲ್ಕ:
    ಅರ್ಜಿ ಶುಲ್ಕ ವಿನಾಯಿತಿ


    ಆಯ್ಕೆ ಪ್ರಕ್ರಿಯೆ:
    ಮೆರಿಟ್ ಪಟ್ಟಿ


    ನೇರ ಸಂದರ್ಶನ ನಡೆಯುವ ವಿಳಾಸ
    ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕಲಮಸ್ಸೆರಿ, ಎರ್ನಾಕುಲಂ ಜಿಲ್ಲೆ, ಕೇರಳ


    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 07 ಅಕ್ಟೋಬರ್​​ 2022
    ವಾಕ್-ಇನ್ ದಿನಾಂಕ: 15 ಅಕ್ಟೋಬರ್ 2022


    ಇದನ್ನು ಓದಿ: 864 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ


    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: vssc.gov.in


    ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ


    -ಎರಡು ಪಾಸಪೋರ್ಸ್​ ಸೈಜ್​ ಫೋಟೋ
    -ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
    -ಇತರೆ ಪ್ರಮಾಣ ಪತ್ರಗಳೊಂದಿಗೆ ನೇರ ಸಂದರ್ಶನಕ್ಕೂ 30 ನಿಮಿಷ ಮೊದಲೇ ಹಾಜರಿರಬೇಕು.

    Published by:Seema R
    First published: