Job Alert: ಬಳ್ಳಾರಿ ವಿಮ್ಸ್​ನಲ್ಲಿ 113 ಸ್ಟಾಫ್​​ ನರ್ಸ್​ಗಳ ನೇಮಕಾತಿ; ವಾಕ್-ಇನ್- ಇಂಟರ್​ವ್ಯೂನಲ್ಲಿ ಭಾಗಿಯಾಗಿ

ಈ ಹುದ್ದೆಗಳನ್ನು ವಿಮ್ಸ್​ ಸಂಸ್ಥೆಯ ಸುವಿಶೇಷ ಆಸ್ಪತ್ರೆ ಮತ್ತು ಟ್ರಾಮಾಕೇರ್​ ಆಸ್ಪತ್ರೆಯ ನಿರ್ವಹಣೆಗೆ ಭರ್ತಿ ಮಾಡಲಾಗುತ್ತಿದೆ. ಈ ನೇಮಕಾತಿಯು ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಇರಲಿದೆ.

3 ಹುದ್ದೆಗೆ ಅರ್ಜಿ ಹಾಕಿ

3 ಹುದ್ದೆಗೆ ಅರ್ಜಿ ಹಾಕಿ

  • Share this:
    ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (Vijayanagar Institute of Medical Sciences Bellary) 113 ಸ್ಟಾಫ್​ ನರ್ಸ್​ಗಳ ( Staff Nurse) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, ನರ್ಸಿಂಗ್​ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ನೇರ ಸಂದರ್ಶನವೂ ಜುಲೈ 25ರಂದು ನಡೆಯಲಿದೆ.

    ಈ ಹುದ್ದೆಗಳನ್ನು ವಿಮ್ಸ್​ ಸಂಸ್ಥೆಯ ಸುವಿಶೇಷ ಆಸ್ಪತ್ರೆ ಮತ್ತು ಟ್ರಾಮಾಕೇರ್​ ಆಸ್ಪತ್ರೆಯ ನಿರ್ವಹಣೆಗೆ ಭರ್ತಿ ಮಾಡಲಾಗುತ್ತಿದೆ. ಈ ನೇಮಕಾತಿಯು ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಇರಲಿದೆ. ಈ ಹುದ್ದೆ ಅವಧಿ ಆರು ತಿಂಗಳು ಮಾತ್ರ ಆಗಿರಲಿದೆ. ಕೋವಿಡ್​-19 ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ಅಭ್ಯರ್ಥಿಗಳನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬಳ್ಳಾರಿ (VIMS)
    ಹುದ್ದೆಸ್ಟಾಫ್ ನರ್ಸ್
    ಹುದ್ದೆಗಳ ಸಂಖ್ಯೆ113
    ಕಾರ್ಯ ನಿರ್ವಹಣೆ ಸ್ಥಳಬಳ್ಳಾರಿ
    ವೇತನವಿಮ್ಸ್​ ನಿಯಮದ ಪ್ರಕಾರ

    ಶೈಕ್ಷಣಿಕ ಅರ್ಹತೆ: ‘ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಬಿಎಸ್ಸಿ ನರ್ಸಿಂಗ್, ಜಿಎನ್​ಎಂ ಶುಶ್ರೂಷ ತರಬೇತಿ ಅನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.

    ವಯೋಮಿತಿ:  ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷಗಳು ಮೀರಿರಬಾರದು.

    ವಯೋಮಿತಿ ಸಡಿಲಿಕೆ:
    ಎಸ್​ಸಿ, ಎಸ್​ಟಿ ಮತ್ತು ಪ್ರವರ್ಗ 1 ಅಭ್ಯರ್ಥಿಗಳು: 05 ವರ್ಷಗಳು
    ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 03 ವರ್ಷಗಳು

    ಇದನ್ನು ಓದಿ: ನಿಮ್ಹಾನ್ಸ್​ನಲ್ಲಿದೆ ಒಪ್ಪಂದ ಆಧಾರಿತ ಉದ್ಯೋಗ; ಬೇಗ ಅರ್ಜಿ ಸಲ್ಲಿಸಿ

    ಅರ್ಜಿ ಶುಲ್ಕ
    ಎಲ್ಲಾ ಅಭ್ಯರ್ಥಿಗಳು: 500 ರೂ
    ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 14 ಜುಲೈ 2022
    ವಾಕ್-ಇನ್ ದಿನಾಂಕ: 25-ಜುಲೈ-2022  ಬೆಳಗ್ಗೆ 10,00ಕ್ಕೆ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: vimsbellary.org.in

    ಇದನ್ನು ಓದಿ: ಮೆಕ್ಯಾನಿಕ್​ ಕೆಲಸ ಗೊತ್ತಿದ್ರೆ CredR ಸಂಸ್ಥೆಯಲ್ಲಿದೆ ಉದ್ಯೋಗ; ಬೇಗ ಅರ್ಜಿ ಸಲ್ಲಿಸಿ

    ನೇರ ಸಂದರ್ಶನಕ್ಕೆ ಈ ದಾಖಲೆ ಅವಶ್ಯ
    -ನೇರ ಸಂದರ್ಶನಕ್ಕೆ ಭಾಗಿಯಾಗುವ ಅಭ್ಯರ್ಥಿಯು www.vims.karnataka.gov.in ವೆಬ್​ಸೈಟ್​ನಲ್ಲಿರುವ ನಿಗದಿತ ಅರ್ಜಿಯನ್ನು ಡೌನ್​ಲೋಡ್​ ಮಾಡಿ ಭರ್ತಿ ಮಾಡಬೇಕು.

    -ನೇರ ಸಂದರ್ಶನಕ್ಕೆ ಹಾಜರಾಗುವ ಸಮಯದಲ್ಲಿ ಅರ್ಜಿಯೊಂದಿಗೆ 500 ರೂ ಶುಲ್ಕವನ್ನು ನಿರ್ದೇಶಕರು ವಿಮ್ಸ್​, ಬಳ್ಳಾರಿ ಇವರ ಹೆಸರಿನಲ್ಲಿ ಡಿಡಿ ಮೂಲಕ ಪಡೆದು ಸಲ್ಲಿಸತಕ್ಕದ್ದು.

    -ನೇರ ಸಂದರ್ಶನದ ವೇಳೆ ಸ್ವಯಂ ದೃಡೀಕೃತ ಶೈಕ್ಷಣಿಕ ದಾಖಲಾತಿ ಸೇರಿದಂತೆ ಸೇವಾನುಭವ ಮತ್ತು ಇತರೆ ದಾಖಲಾತಿಯ ಒರಿಜಿನಲ್​ ಮತ್ತು ಜೆರಾಕ್ಸ್​ ಕಾಪಿಯನ್ನು ತರಬೇಕು. ಜೊತೆಗೆ ವಿಳಾಸ ದೃಢೀಕರಣಕ್ಕೆ ಗುರುತಿನ ಚೀಟಿ, ಮೀಸಲಾತಿ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಯ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.
    Published by:Seema R
    First published: