ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ (Uttara Kannada District Court) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ಯೂನ್ ಮತ್ತು ಟೈಪಿಸ್ಟ್ (stenographer and peon) ಸೇರಿದಂತೆ ಒಟ್ಟು 19 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಸೂಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 1, 2022 ಆಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
ಸಂಸ್ಥೆ: ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ
ಹುದ್ದೆಗಳು ಪ್ಯೂನ್ ಮತ್ತು ಸ್ಟೆನೋಗ್ರಾಫರ್
ಒಟ್ಟು ಹುದ್ದೆ: 19
ಕಾರ್ಯ ನಿರ್ವಹಿಸುವ ಸ್ಥಳ: ಕಾರವಾರ
ಹುದ್ದೆ |
ಹುದ್ದೆ ಸಂಖ್ಯೆ |
ವೇತನ |
ಸ್ಟೆನೋಗ್ರಾಫರ್ |
6 |
27650-52650 ರೂ ಮಾಸಿಕ |
ಪ್ಯೂನ್ |
13 |
17000-28950 ರೂ ಮಾಸಿಕ |
ವಯೋಮಿತಿ
ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ವಯಸ್ಸಿನ ಸಡಿಲಿಕೆ:
ಪ.ಜಾ, ಪ.ಪಂ, ಪ್ರವರ್ಗ-1 ಅಭ್ಯರ್ಥಿಗಳು: 05 ವರ್ಷಗಳು
ಪ್ರವರ್ಗ 2 ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು: 03 ವರ್ಷಗಳು
ಅರ್ಜಿ ಶುಲ್ಕ:
ಪ.ಜಾ, ಪ.ಪಂ, ಪ್ರವರ್ಗ-1 ಮತ್ತು ವಿಕಲಚೇತನರು ಅಭ್ಯರ್ಥಿಗಳು: ರೂ.100 ರೂ
ಪ್ರವರ್ಗ 2 ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು: ರೂ.200 ರೂ
ಸಾಮಾನ್ಯ ಅಭ್ಯರ್ಥಿಗಳು: ರೂ.300ರೂ
ಆಯ್ಕೆ ವಿಧಾನ
ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ: ಮೇ 2, 2022
ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ: ಜೂನ್ 1, 2022
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಜೂನ್ 2, 2022
ಇದನ್ನು ಓದಿ: ಡಿಪ್ಲೋಮಾ, ಬಿಎಸ್ಸಿ ಪದವೀಧರರಿಗೆ ಸುವರ್ಣಾವಕಾಶ; ಬೆಂಗಳೂರಿನ ಐಐಐಟಿಯಲ್ಲಿ ಅರ್ಜಿ ಆಹ್ವಾನ
ಪ್ರಮುಖ ಲಿಂಕ್ಗಳು
ಸ್ಟನೋಗ್ರಾಫರ್ ಹುದ್ದೆ ಅಧಿಕೃತ ಅಧಿಸೂಚನೆಗೆ:
ಇಲ್ಲಿ ಕ್ಲಿಕ್ ಮಾಡಿ
ಪ್ಯೂನ್ ಹುದ್ದೆ ಅಧಿಕೃತ ಅಧಿಸೂಚನೆಗೆ:
ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗೆ ಅರ್ಜಿ ಸಲ್ಲಿಸಲು
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್:
https://districts.ecourts.gov.in/uttarakannada-onlinerecruitment
ಅರ್ಜಿ ಸಲ್ಲಿಸುವ ವಿಧಾನ
ಎಲ್ಲಾ ಅರ್ಹ ಅಭ್ಯರ್ಥಿಗಳು ಕೆಳಗೆ ನಮೂದಿಸಿದ ವೆಬ್ಗೆ ಭೇಟಿ ನೀಡಬೇಕು
- ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ
https://districts.ecourts.gov.in/uttarakannada-onlinerecruitment
- ಸಂಬಂಧಿತ ಪೋಸ್ಟ್ನ ಕೆಳಗಿನ 'ಅನ್ವಯಿಸಲು ಇಲ್ಲಿ ಕ್ಲಿಕ್ ಮಾಡಿ' ಬಟನ್ ಕ್ಲಿಕ್ ಮಾಡಿ
ಬಲಭಾಗದಲ್ಲಿರುವ 'ಆನ್ಲೈನ್ ಅಪ್ಲಿಕೇಶನ್' ಬಟನ್ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿಯನ್ನು ಸಲ್ಲಿಸುವ ಮೊದಲು ಎಚ್ಚರಿಕೆಯಿಂದ ಅಭ್ಯರ್ಥಿಗಳು 'ಸಾಮಾನ್ಯ ಸೂಚನೆಗಳನ್ನು' ಓದಬೇಕು. ಈ ಮೂಲಕ ತಪ್ಪು ಅರ್ಜಿಯ ತಿರಸ್ಕಾರವನ್ನು ತಪ್ಪಿಸಬಹುದು.
ಇದನ್ನು ಓದಿ: ವಾಯುಸೇನೆಯಲ್ಲಿ ಕ್ಲರ್ಕ್ ಹುದ್ದೆಗೆ ನೇಮಕಾತಿ; ಪಿಯುಸಿ ಆದವರಿಗೆ ಅವಕಾಶ
-ಅಭ್ಯರ್ಥಿಗಳು 'ಸಾಮಾನ್ಯ ಸೂಚನೆಗಳು' ಎಂಬುದನ್ನು ದೃಢೀಕರಿಸಬೇಕು.
-ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡುವ ಮೂಲಕ ಓದಲಾಗಿದೆ 'ನಾನು ಹೋಗಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ ಎಂಬ ಎಲ್ಲಾ ಸೂಚನೆಗಳ ಮೂಲಕ' ಮತ್ತು 'ಅನ್ವಯಿಸು' ಬಟನ್ ಅನ್ನು ಕ್ಲಿಕ್ ಮಾಡಿ
-ಆನ್ಲೈನ್ ಅಪ್ಲಿಕೇಶನ್ಗೆ ಮುಂದುವರಿಯಿರಿ.
-ಅಭ್ಯರ್ಥಿಗಳು ಆನ್ಲೈನ್ನಲ್ಲಿ ಸಲ್ಲಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು
-ಸರಿಯಾದ ಹುದ್ದೆಗೆ ಅಭ್ಯರ್ಥಿಗಳು ಸರಿಯಾದ 'ವೈಯಕ್ತಿಕ ಮಾಹಿತಿಯನ್ನು' ಸಲ್ಲಿಸಬೇಕು.
ಕಡ್ಡಾಯ ಎಂದು ಎಂದು ಗುರುತಿಸಲಾದ ಕ್ಷೇತ್ರಗಳನ್ನು ಮರೆಯದೇ ತುಂಬಿಸಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ