ಕೇಂದ್ರ ಲೋಕಸೇವಾ ಆಯೋಗವು (Union Public Service Commission) ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Academy) ಮತ್ತು ನೇವಲ್ ಅಕಾಡೆಮಿ (Navel Academy) ಪರೀಕ್ಷೆ ಹಾಗೂ ನೇಮಕಾತಿಗೆ ಮುಂದಾಗಿದೆ. ಈ ಸಂಬಂಧ ಅರ್ಜಿ ಆಹ್ವಾನಿಸಿದ್ದು, ಅಧಿಸೂಚನೆ ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
ಎನ್ಡಿಎ ಹುದ್ದೆಗಳು |
ಹುದ್ದೆಗಳ ಸಂಖ್ಯೆ |
ಸೇನೆ |
208 (10 ಮಹಿಳಾ ಅಭ್ಯರ್ಥಿಗಳು) |
ನೌಕ ಸೇನೆ |
42 (3 ಮಹಿಳಾ ಅಭ್ಯರ್ಥಿಗಳು) |
ವಾಯುಸೇನೆ |
92 ಹಾರಾಟ 92 (2 ಮಹಿಳಾ ಅಭ್ಯರ್ಥಿಗಳು) |
|
18 ತಾಂತ್ರಿಕ ( 2 ಮಹಿಳಾ ಅಭ್ಯರ್ಥಿಗಳು) |
|
10 ತಾಂತ್ರಿಕೇತರ )2 ಮಹಿಳಾ ಅಭ್ಯರ್ಥಿಗಳು) |
ನೌಕಾ ಅಕಾಡೆಮಿ (10+2 ಕೆಡರ್ ಎಂಟ್ರಿ ಸ್ಕಿಮ್ |
30 (ಪುರುಷ ಅಭ್ಯರ್ಥಿಗಳಿಗೆ ಮಾತ್ರ) |
ಒಟ್ಟು |
400 |
ಅರ್ಜಿ ಸಲ್ಲಿಕೆ ವಿಧಾನ
ಆನ್ಲೈನ್
ವಿದ್ಯಾರ್ಹತೆ
ಶಾಲಾ ಶಿಕ್ಷಣದ 10+2 ಮಾದರಿಯ ಉತ್ತೀರ್ಣ ಅಥವಾ ತತ್ಸಮಾನ
ರಾಜ್ಯ ಶಿಕ್ಷಣ ಮಂಡಳಿ ನಡೆಸುವ ಪದವಿ ಪೂರ್ವ ಪರೀಕ್ಷೆ ಅಥವಾ ಎ
ವಿಶ್ವವಿದ್ಯಾಲಯದಿಂದ 12ನೇ ತರಗತಿ ಪೂರ್ಣಗೊಂಡಿರಬೇಕು
ಇದನ್ನು ಓದಿ: ಸರ್ಕಾರದ ರೆಪ್ಕೊ ಬ್ಯಾಂಕ್ನಲ್ಲಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 7, 2022 ಆಗಿದೆ.
ಆನ್ಲೈನ್ ಅರ್ಜಿಗಳನ್ನು 14.06.2022 ರಿಂದ 20.06.2022 ರವರೆಗೆ ಹಿಂಪಡೆಯಬಹುದು
ಪ್ರಮುಖ ಸೂಚನೆ
ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವರು ಎನ್ಡಿಎ ಎಲ್ಲಾ ಅರ್ಹತೆಯನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
ಪರೀಕ್ಷೆಗೆ ಪ್ರವೇಶಕ್ಕಾಗಿ ಅರ್ಹತಾ ಷರತ್ತುಗಳು. ಎಲ್ಲ ಪ್ರವೇಶ ಪರೀಕ್ಷೆಯ ಹಂತಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿ ತೃಪ್ತಿಪಡಿಸುವ ವಿಷಯವಾಗಿರುತ್ತವೆ.
ಅರ್ಜಿ ಸಲ್ಲಿಕೆ ಹೇಗೆ
-ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ
upsconline.nic.in ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಸಂಕ್ಷಿಪ್ತ ಸೂಚನೆಗಳಿವೆ
-ಅರ್ಜಿ ಸಲ್ಲಿಸಿದ ಬಳಿಕ ಒಂದು ವೇಳೆ ಅಭ್ಯರ್ಥಿ ಅರ್ಜಿ ಹಿಂಪಡೆಯಬೇಕು ಎಂದರೆ ಅದರ ಸೌಲಭ್ಯವನ್ನು ಆಯೋಗ ಪರಿಚಯಿಸಿದೆ.
ಇದನ್ನು ಓದಿ: ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ; ಯಾವುದೇ ಲಿಖಿತ ಪರೀಕ್ಷೆ ಇಲ್ಲ
-ಆಯೋಗವು ಅರ್ಜಿಯನ್ನು ಹಿಂಪಡೆಯುವ ಸೌಲಭ್ಯವನ್ನು ಪರಿಚಯಿಸಿದೆ
ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡುವಾಗ ಅಭ್ಯರ್ಥಿಯು ರಾಜ್ಯ/ಕೇಂದ್ರ ಸರ್ಕಾರವು ನೀಡಿದ ಆಧಾರ್, ಲೈಸೆನ್ಸ್ ಐಡಿ, ಮತದಾರರ ಗುರುತಿನ ಚೀಟಿಯನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ.
-ಈ ಫೋಟೋ ಐಡಿಯನ್ನು ಎಲ್ಲಾ ಭವಿಷ್ಯದ ಉಲ್ಲೇಖಗಳಿಗಾಗಿ ಬಳಸಲಾಗುತ್ತದೆ ಮತ್ತು
ಪರೀಕ್ಷೆ/ಎಸ್ಎಸ್ಬಿಗೆ ಹಾಜರಾಗುವಾಗ ಅಭ್ಯರ್ಥಿಯು ಈ ಐಡಿಯನ್ನು ಒಯ್ಯುವಂತೆ ಸೂಚಿಸಲಾಗಿದೆ.
-2001 ಜನವರಿ 2 ಕ್ಕಿಂತ ಮತ್ತು 2007 ಜನವರಿ 1ಒಳಗೆ ಜನಿಸಿದ ಅವಿವಾಹಿತ ಪುರಷರು ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ