UPSC Recruitment: ವಿವಿಧ ಹುದ್ದೆಗಳಿಗೆ ಯುಪಿಎಸ್​ಸಿ ನೇಮಕಾತಿ; ಎಂಎಸ್ಸಿ, ಬಿಇ ಆದವರಿಗೆ ಅವಕಾಶ

ಸಹಾಯಕ ಮೈನಿಂಗ್ ಜಿಯಾಲಜಿಸ್ಟ್, ಸೈಂಟಿಫಿಕ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಯುಪಿಎಸ್​ಸಿ ಮುಂದಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಕೇಂದ್ರ ಲೋಕ ಸೇವಾ ಆಯೋಗ (Union Public Service Commission) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಹಾಯಕ ಮೈನಿಂಗ್ ಜಿಯಾಲಜಿಸ್ಟ್, ಸೈಂಟಿಫಿಕ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಯುಪಿಎಸ್​ಸಿ ಮುಂದಾಗಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್​ ಆನ್​ಲೈನ್​ (Online) ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 30 ಆಗಿದೆ.

    ಸಂಸ್ಥೆಯ ಹೆಸರು: ಕೇಂದ್ರ ಲೋಕ ಸೇವಾ ಆಯೋಗ (UPSC)
    ಹುದ್ದೆಯ ಹೆಸರು: ಸಹಾಯಕ ಮೈನಿಂಗ್ ಜಿಯಾಲಜಿಸ್ಟ್, ಸೈಂಟಿಫಿಕ್ ಆಫೀಸರ್
    ಹುದ್ದೆಗಳ ಸಂಖ್ಯೆ: 24
    ಉದ್ಯೋಗ ಸ್ಥಳ: ಕೋಲ್ಕತ್ತಾ, ನಾಗ್ಪುರ, ನೋಯ್ಡಾ ಹಾಗೂ ಭಾರತದಾದ್ಯಂತ
    ವೇತನ: ಯುಪಿಎಸ್​ಸಿ ನಿಯಮಗಳ ಪ್ರಕಾರ























    ಹುದ್ದೆಹುದ್ದೆ ಸಂಖ್ಯೆವಯೋಮಿತಿ
    ವೈಜ್ಞಾನಿಕ ಅಧಿಕಾರಿ130
    ಸಹಾಯಕ ಗಣಿಗಾರಿಕೆ ಭೂವಿಜ್ಞಾನಿ2130
    ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಸಿವಿಲ್)235

    ವಿದ್ಯಾರ್ಹತೆ:
    ವೈಜ್ಞಾನಿಕ ಅಧಿಕಾರಿ: ಪ್ಲಾಸ್ಟಿಕ್ ತಂತ್ರಜ್ಞಾನ, ಪಾಲಿಮರ್ ಮತ್ತು ರಬ್ಬರ್ ತಂತ್ರಜ್ಞಾನದಲ್ಲಿ ಪದವಿ, ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
    ಸಹಾಯಕ ಗಣಿಗಾರಿಕೆ ಭೂವಿಜ್ಞಾನಿ: ಭೂವಿಜ್ಞಾನ ಅಥವಾ ಅನ್ವಯಿಕ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
    ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಸಿವಿಲ್): ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ

    ಅನುಭವದ ವಿವರಗಳು
    ಸೈಂಟಿಫಿಕ್ ಆಫೀಸರ್: ಅಭ್ಯರ್ಥಿಗಳು ಜವಳಿ/ರಬ್ಬರ್/ಪ್ಲಾಸ್ಟಿಕ್/ಪೇಪರ್/ಲೆದರ್ ಮತ್ತು ಅವುಗಳ ಉತ್ಪನ್ನಗಳ ಪರೀಕ್ಷೆಯಲ್ಲಿ ತೊಡಗಿರುವ ಪ್ರಯೋಗಾಲಯದಲ್ಲಿ ಒಂದು ವರ್ಷ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.

    ಸಹಾಯಕ ಗಣಿಗಾರಿಕೆ ಭೂವಿಜ್ಞಾನಿ: ಅಭ್ಯರ್ಥಿಗಳು ಖನಿಜಗಳು ಅಥವಾ ಅದಿರು ನಿಕ್ಷೇಪಗಳಿಗಾಗಿ ಭೂವೈಜ್ಞಾನಿಕ ಮೌಲ್ಯಮಾಪನಗಳನ್ನು ಕೈಗೊಳ್ಳುವಲ್ಲಿ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು ಅಥವಾ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಭೂವಿಜ್ಞಾನ ಅಥವಾ ಅನ್ವಯಿಕ ಭೂವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಅಥವಾ ಬೋಧನಾ ಅನುಭವವನ್ನು ಹೊಂದಿರಬೇಕು.

    ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಸಿವಿಲ್): ಅಭ್ಯರ್ಥಿಗಳು ರಚನಾತ್ಮಕ ಮತ್ತು ಬಲವರ್ಧಿತ ಕಾಂಕ್ರೀಟ್ ಕಾಮಗಾರಿಗಳ ವಿನ್ಯಾಸ, ನಿರ್ವಹಣೆ ಮತ್ತು ನಿರ್ಮಾಣದಲ್ಲಿ ಮೇಲ್ವಿಚಾರಣಾ ಸಾಮರ್ಥ್ಯದಲ್ಲಿ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು.

    ವಯೋಮಿತಿ ಸಡಿಲಿಕೆ
    ಹಿಂದುಳಿದ ವರ್ಗ ಅಭ್ಯರ್ಥಿಗಳು: 03 ವರ್ಷಗಳು
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳು: 05 ವರ್ಷಗಳು
    ವಿಕಲಚೇತನ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
    ವಿಕಲಚೇತನ (ಹಿಂದುಳಿದ ವರ್ಗ) ಅಭ್ಯರ್ಥಿಗಳು: 13 ವರ್ಷಗಳು
    ವಿಕಲಚೇತನ (ಪ.ಜಾ, ಪ.ಪಂ) ಅಭ್ಯರ್ಥಿಗಳು: 15 ವರ್ಷಗಳು

    ಅರ್ಜಿ ಶುಲ್ಕ:
    ಪ.ಜಾ, ಪ.ಪಂ, ವಿಕಲಚೇತನ ಮತ್ತು ಮಹಿಳಾ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
    ಸಾಮಾನ್ಯ, ಒಬಿಸಿ ಪುರುಷ ಅಭ್ಯರ್ಥಿಗಳು: 25 ರೂ

    ಪಾವತಿ ವಿಧಾನ: ಆನ್‌ಲೈನ್

    ಆಯ್ಕೆ ಪ್ರಕ್ರಿಯೆ:
    ನೇಮಕಾತಿ ಪರೀಕ್ಷೆ ಮತ್ತು ಸಂದರ್ಶನ

    ಇದನ್ನು ಓದಿ: 184 ಟ್ರೇಡ್​ ಅಪ್ರೆಂಟಿಸ್​ಗೆ ಅರ್ಜಿ ಆಹ್ವಾನಿಸಿದ ಬಿಎಚ್​ಇಎಲ್​; ಐಟಿಐ ಆದವರಿಗೆ ಅವಕಾಶ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್​ 14, 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್​ 30, 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: upsc.gov.in

    ಇದನ್ನು ಓದಿ: ಗಡಿ ಭದ್ರತಾ ಪಡೆಯಲ್ಲಿ ಭರ್ಜರಿ ನೇಮಕಾತಿ; 10ನೇ ತರಗತಿ ಪಾಸ್​ ಆಗಿದ್ರೆ ಸಾಕು

    ಅರ್ಜಿ ಸಲ್ಲಿಕೆ ವಿಧಾನ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    -ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

    -ಮೇಲಿನ ಲಿಂಕ್‌ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ. ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    -ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: