UPSC Recruitment 2021: ಪ್ರಾದೇಶಿಕ ನಿರ್ದೇಶಕರು, ಸಹಾಯಕ ಪ್ರಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

ಏಳನೇ ವೇತನ ಆಯೋಗದ ಅನುಸಾರ ಸಂಬಳ ಸೌಲಭ್ಯವನ್ನು ಹೊಂದಿರಲಿದ್ದು, ಯುಪಿಎಸ್​ಸಿ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

upsc

upsc

  • Share this:
    ಕೇಂದ್ರ ಲೋಕ ಸೇವಾ ಆಯೋಗವು 28 ಪ್ರಾದೇಶಿಕ ನಿರ್ದೇಶಕರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಇದೇ ಸೆಪ್ಟೆಂಬರ್​ 30 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವವರಿಗೆ ಇದು ಉತ್ತಮ ಅಕಾಶವಾಗಿದ್ದು, ಅರ್ಜಿ ಸಲ್ಲಿಸಬಹುದಾಗಿದೆ. ಏಳನೇ ವೇತನ ಆಯೋಗದ ವೇತನ ಸೌಲಭ್ಯವನ್ನು ಹೊಂದಿರಲಿದ್ದು, ಯುಪಿಎಸ್​ಸಿ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

    ಹುದ್ದೆಗಳ ವಿವರ
    ಪ್ರಾದೇಶಿಕ ನಿರ್ದೇಶಕರು -1
    ಡೆಪ್ಯೂಟಿ ಸೆಂಟ್ರಲ್​ ಇಂಟಿಜೆನ್ಸ್​​ ಆಫೀಸರ್​ - 10
    ಸಹಾಯಕ ಪ್ರಧ್ಯಾಪಕರು - 8
    ಸೀನಿಯರ್​ ಸೈಟಿಂಫಿಕ್​ ಆಫೀಸರ್​ - 3
    ಜ್ಯೂನಿಯರ್​ ರಿಸರ್ಚ್​ ಆಫೀಸರ್​ - 3
    ಅಸ್ಟಿಸ್ಟಂಟ್​ ಇಂಜಿನಿಯರ್​/ ಅಸಿಸ್ಟಂಟ್​ ಸರ್ವೆಯರ್​​- 3

    ಅರ್ಹತೆ
    ಪ್ರಾದೇಶಿಕ ನಿರ್ದೇಶಕರು - M.Sc, Ph.D
    ಡೆಪ್ಯೂಟಿ ಸೆಂಟ್ರಲ್​ ಇಂಟಿಜೆನ್ಸ್​​ ಆಫೀಸರ್ - B.E or B.Tech, B.Sc, M.Sc, MCA
    ಸಹಾಯಕ ಪ್ರಾಧ್ಯಪಕರು - ಸ್ನಾತಕೋತ್ತರ ಪದವಿ , ಪಿಎಚ್​ಡಿ
    ಸೀನಿಯರ್​ ಸೈಟಿಂಫಿಕ್​ ಆಫೀಸರ್ - M.Sc, B.E or B.Tech
    ಜ್ಯೂನಿಯರ್​ ರಿಸರ್ಚ್​ ಆಫೀಸರ್ - ಸ್ನಾತಕೋತ್ತರ ಪದವಿ
    ಅಸ್ಟಿಸ್ಟಂಟ್​ ಇಂಜಿನಿಯರ್​/ ಅಸಿಸ್ಟಂಟ್​ ಸರ್ವೆಯರ್ - ಸಿವಿಲ್​ ಎಂಜಿನಿಯರ್​ನಲ್ಲಿ ಪದವಿ

    ವಯಸ್ಸಿನ ಮಿತಿ

    ಪ್ರಾದೇಶಿಕ ನಿರ್ದೇಶಕರು - 50
    ಡೆಪ್ಯೂಟಿ ಸೆಂಟ್ರಲ್​ ಇಂಟಿಜೆನ್ಸ್​​ ಆಫೀಸರ್ - 35
    ಸಹಾಯಕ ಪ್ರಾಧ್ಯಪಕರು - 35-40
    ಸೀನಿಯರ್​ ಸೈಟಿಂಫಿಕ್​ ಆಫೀಸರ್ - 35
    ಜ್ಯೂನಿಯರ್​ ರಿಸರ್ಚ್​ ಆಫೀಸರ್ - 30

    ಇದನ್ನು ಓದಿ: ಆಧಾರ್​ನಂತೆ ಇನ್ಮುಂದೆ ದೇಶದ ಪ್ರತಿಯೊಬ್ಬರಿಗೂ ಸಿಗಲಿದೆ ಹೆಲ್ತ್​ ಕಾರ್ಡ್​; ಏನಿದರ ವಿಶೇಷತೆ?

    ಈ ಹುದ್ದೆಗಳಿಗೆ ಪರಿಶಿಷ್ಟಿ ಜಾತಿ/ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಿನಾಯಿತಿ ಒದೆ. ಅರ್ಜಿ ಶುಲ್ಕ ಉಚಿತವಾಗಿದೆ. ಅಭ್ಯರ್ಥಿಗಳನ್ನು ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವ ವಿಧಾನ
    ಯುಪಿಎಸ್​ಸಿಯ ನೇಮಕಾತಿ 2021ಕ್ಕೆ ಭೇಟಿ ನೀಡಬೇಕು. ಇಲ್ಲ ಇಲ್ಲಿ ಕ್ಲಿಕ್​ ಮಾಡಿ
    ಅಲ್ಲಿ ಇರುವ ಅರ್ಜಿಯನನು ಸಲ್ಲಿಸಬೇಕು. ಈ ವೇಳೆ ವಿದ್ಯಾಭ್ಯಾಸದ ವಿವರ ಸೇರಿದಂತೆ ಅಗತ್ಯ ಮಾಹಿತಿ ತುಂಬಬೇಕು.

    ಇದನ್ನು ಓದಿ: ಪದವಿ ಆದ್ರೂ ಪರವಾಗಿಲ್ಲ, IT Sectorನಲ್ಲಿ ಕೆಲಸ ಪಡೆಯಬೇಕು ಅಂದ್ರೆ ಈ ಐದು Skill ಕಲಿಯಿರಿ ಸಾಕು

    ಎಲ್ಲಾ ಅರ್ಜಿಗಳನ್ನು ತುಂಬುವ ಮೊದಲು ಅಭ್ಯರ್ಥಿಗಳು ನೀಡಿದ ಟಿಪ್ಪಣಿ, ವಿವರಣೆಗಳನ್ನು ಅಗತ್ಯವಾಗಿ ಓದಿಕೊಳ್ಳುವುದು ಅವಶ್ಯ.

    ಎಲ್ಲಾ ವಿವರಗಳ ಬಳಿಕ ಅರ್ಜಿ ಸಲ್ಲಿಕೆ ಬಟನ್​ ಕ್ಲಿಕ್​​ ಮಾಡಿ ಈ ವೇಳೆ ಸಿಗುವ ಅಪ್ಲಿಕೇಷನ್​​ ನಂಬರ್​ ಅಥವಾ ರಿಕ್ವೆಸ್ಟ್​ ನಂಬರ್​ ಅನ್ನು ತಪ್ಪದೇ ಪಡೆಯಿರಿ, ಮುಂದಿನ ಎಲ್ಲಾ ವ್ಯವಹಾರಕ್ಕೆ ಈ ನಂಬರ್​ ಅತ್ಯಗತ್ಯ
    Published by:Seema R
    First published: