• ಹೋಂ
  • »
  • ನ್ಯೂಸ್
  • »
  • Jobs
  • »
  • UPSC Recruitment 2021: ಅಸಿಸ್ಟೆಂಟ್ ಕಮಾಂಡೆಂಟ್ಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ UPSC, ಪದವೀಧರರಿಗೆ ಅವಕಾಶ

UPSC Recruitment 2021: ಅಸಿಸ್ಟೆಂಟ್ ಕಮಾಂಡೆಂಟ್ಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ UPSC, ಪದವೀಧರರಿಗೆ ಅವಕಾಶ

67 ಹುದ್ದೆಗೆ ಅರ್ಜಿ ಹಾಕಿ

67 ಹುದ್ದೆಗೆ ಅರ್ಜಿ ಹಾಕಿ

ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಯಾವುದೇ ವಿಷಯದಲ್ಲಿ ಕಡ್ಡಾಯವಾಗಿ ಪದವಿ ಪಡೆದಿರಬೇಕು.

  • Share this:

UPSC Recruitment 2021: ಕೇಂದ್ರ ಲೋಕಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 19 ಅಸಿಸ್ಟೆಂಟ್ ಕಮಾಂಡಂಟ್ಸ್(Assistant Commandants)​(ಎಕ್ಸಿಕ್ಯೂಟಿವ್) ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 1ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ UPSC ಅಧಿಕೃತ ವೆಬ್​ಸೈಟ್​ www.upsc.gov.inಗೆ ಭೇಟಿ ನೀಡಬಹುದು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೇಂದ್ರ ಲೋಕ ಸೇವಾ ಆಯೋಗ
ಹುದ್ದೆಯ ಹೆಸರುಅಸಿಸ್ಟೆಂಟ್ ಕಮಾಂಡಂಟ್ಸ್
ಒಟ್ಟು ಹುದ್ದೆಗಳು19
ವಿದ್ಯಾರ್ಹತೆಪದವಿ
ವೇತನನಿಯಮಾನುಸಾರ
ಉದ್ಯೋಗದ ಸ್ಥಳಭಾರತದಾದ್ಯಂತ
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ01/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ21/12/2021


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21/12/2021


ಇದನ್ನೂ ಓದಿ: ರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 1,12,400


ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಕಮಾಂಡಂಟ್ಸ್- 19 ಹುದ್ದೆಗಳು
ಜನರಲ್- 14
SC-3
ST-2


ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಯಾವುದೇ ವಿಷಯದಲ್ಲಿ ಕಡ್ಡಾಯವಾಗಿ ಪದವಿ ಪಡೆದಿರಬೇಕು.
ಎನ್​​ಸಿಸಿಯಲ್ಲಿ ಬಿ ಅಥವಾ ಸಿ ಸರ್ಟಿಫಿಕೇಟ್ ಪಡೆದಿರಬೇಕು. ಈ ಅರ್ಹತೆಯನ್ನು ವೈಯಕ್ತಿಕ ಸಂದರ್ಶನದ ವೇಳೆ ಪರಿಗಣಿಸಲಾಗುತ್ತದೆ.


ವಯೋಮಿತಿ:
ಅಸಿಸ್ಟೆಂಟ್ ಕಮಾಂಡಂಟ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಆಗಸ್ಟ್​ 01, 2022ಕ್ಕೆ 35 ವರ್ಷ ಮೀರಿರಬಾರದು. ಆಗಸ್ಟ್​ 02, 1987ಕ್ಕಿಂತ ಮುಂಚೆ ಜನಿಸಿರಬಾರದು. ಎಸ್​ಸಿ, ಎಸ್​ಟಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.


ಇದನ್ನೂ ಓದಿ: UPSC Recruitment 2021: ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಹಲವು ಹುದ್ದೆಗಳು ಖಾಲಿ, ಅರ್ಜಿ ಸಲ್ಲಿಸಲು ನಾಳೆಯೇ ಕಡೇ ದಿನ


ಉದ್ಯೋಗದ ಸ್ಥಳ:
ಅಸಿಸ್ಟೆಂಟ್ ಕಮಾಂಡಂಟ್ಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.


ವೇತನ:
ಅಸಿಸ್ಟೆಂಟ್ ಕಮಾಂಡಂಟ್ಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದೈಹಿಕ ಮತ್ತು ಮಾನಸಿಕ ಪರೀಕ್ಷೆ
ಸಂದರ್ಶನ/ ವೈಯಕ್ತಿಕ ಪರೀಕ್ಷೆ

top videos
    First published: