UPSC Mains Result 2022: ಇಂದು UPSC ಮುಖ್ಯ(ಮೇನ್) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿ ತಮ್ಮ ರಿಸಲ್ಟ್ ನೋಡಬಹುದು. ಯುಪಿಎಸ್ಸಿ ಮೇನ್ ಪರೀಕ್ಷೆಯನ್ನು ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 25ರವರೆಗೆ ಸಬ್ಜೆಕ್ಟಿವ್ ಮೋಡ್ನಲ್ಲಿ ನಡೆಸಲಾಗಿತ್ತು. ಆಯೋಗವು ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ರೋಲ್ ನಂಬರ್ನ್ನು ಬಿಡುಗಡೆ ಮಾಡಿದೆ.
UPSC CSE Mains 2022: ಫಲಿತಾಂಶ ನೋಡುವುದು ಹೇಗೆ?
ಹಂತ 1: ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿ.
ಹಂತ 2: ಓಪನ್ ಆದ ಹೋಮ್ ಪೇಜ್ನಲ್ಲಿ ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ PDF ಫಾರ್ಮ್ಯಾಟ್ನಲ್ಲಿ ಒಂದು ಹೊಸ ಪೇಜ್ ಓಪನ್ ಆಗುತ್ತದೆ.
ಹಂತ 4: PDF ನಲ್ಲಿ ನಿಮ್ಮ ರೋಲ್ ನಂಬರ್ ಹಾಕಿ ಸರ್ಚ್ ಮಾಡಿ.
ಹಂತ 5: PDF ನ್ನು ಡೌನ್ಲೌಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.
ಇದನ್ನೂ ಓದಿ: Karnataka Excise Department Recruitment 2023: ಕರ್ನಾಟಕ ಅಬಕಾರಿ ಇಲಾಖೆಯಲ್ಲಿ SSLC, PUC ಪಾಸಾದವ್ರಿಗೆ ಬಂಪರ್ ಉದ್ಯೋಗ- ಈಗಲೇ Apply ಮಾಡಿ
ಮೇನ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸಂದರ್ಶನ/ ಪರ್ಸನಾಲಿಟಿ ಟೆಸ್ಟ್ಗೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಸಂದರ್ಶನವು 275 ಅಂಕಗಳನ್ನು ಹೊಂದಿರುತ್ತದೆ. ಆದರೆ ಇಲ್ಲಿ ಕನಿಷ್ಠ ಅರ್ಹತಾ ಅಂಕಗಳು ಇರುವುದಿಲ್ಲ. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು IAS, IPS, IFS, IRS ಮತ್ತು IRTS ಸೇರಿದಂತೆ ವಿವಿಧ ಅಖಿಲ ಭಾರತದ ಸೇವೆಗಳು ಮತ್ತು ಕೇಂದ್ರ ಲೋಕ ಸೇವೆಗಳಲ್ಲಿ ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಗೊಳ್ಳುತ್ತಾರೆ.
ಸಂದರ್ಶನ ಎಲ್ಲಿ?
ಮೇನ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪರ್ಸನಾಟಲಿಟಿ ಟೆಸ್ಟ್ ನಡೆಯುವ ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲೇ ತಿಳಿಸಲಾಗುತ್ತದೆ. ನವದೆಹಲಿಯ ಶಹಜಹಾನ್ ರಸ್ತೆಯಲ್ಲಿರುವ ಧೋಲ್ಪುರ್ ಹೌಸ್ನಲ್ಲಿರುವ ಕೇಂದ್ರ ಲೋಕಸೇವಾ ಆಯೋಗದ ಕಚೇರಿಯಲ್ಲಿ ಸಂದರ್ಶನ ನಡೆಸಲಾಗುತ್ತದೆ.
ಇದನ್ನೂ ಓದಿ: KSP Recruitment 2022: 70 ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ- ಡಿ.18ಕ್ಕೆ ಲಿಖಿತ ಪರೀಕ್ಷೆ ನಿಗದಿ
ಅಭ್ಯರ್ಥಿಗಳು ಸಂದರ್ಶನಕ್ಕೆ ಭಾಗಿಯಾಗುವಾಗ ತಮ್ಮ ಅರ್ಹತೆ/ಮೀಸಲಾತಿ ಹಕ್ಕುಗಳಾದ ವಯಸ್ಸು, ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರೆ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕು. ಜೊತೆಗೆ ಮೂಲ ಪ್ರಮಾಣ ಪತ್ರಗಳನ್ನು ನೀಡಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ