ಸರ್ಕಾರಿ ಕಚೇರಿಗಳಲ್ಲಿ (Govt Office) ಕೆಲಸ ಗಿಟ್ಟಿಸಿಕೊಳ್ಳುವುದು ಬಹಳಷ್ಟು ಜನರ ಗುರಿ. ಖಾಸಗಿ ವಲಯಗಳಲ್ಲಿ (Private Sector) ಉದ್ಯೋಗ ಅಭದ್ರತೆ (Job Insecurity) ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದಿನ ಯುವಜನರು (Youth) ಕೂಡಾ ಸರ್ಕಾರಿ ಕೆಲಸಗಳ (Govt Jobs) ಕಡೆ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಇದೀಗ ಯುಪಿಎಸ್ಸಿ ನೇಮಕಾತಿ 2023ರಲ್ಲಿ (UPSC Recruitment 2023) ಹಲವಾರು ಪೋಸ್ಟ್ಗಳಿಗೆ ಅರ್ಜಿ (Application) ಆಹ್ವಾನಿಸಲಾಗಿದೆ. ಡಿಗ್ರಿ ಮುಗಿಸಿ ನೀವು ಜಾಬ್ (Jobs) ಹುಡುಕುತ್ತಿದ್ದರೆ ಈ ಪೋಸ್ಟ್ಗಳಿಗೆ ಅರ್ಜಿ ಸಲ್ಲಿಸಬಹುದು. ನೀವೂ ಕೂಡಾ ಯುಪಿಎಸ್ಸಿ ಆಫೀಸ್ನಲ್ಲಿ ಕೆಲಸ ಮಾಡಬಹುದು. ಉದ್ಯೋಗದ ಕುರಿತು ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
69 ಅಸಿಸ್ಟೆಂಟ್ ಎಂಜಿನಿಯರ್ ಹಾಗೂ ಯೂತ್ ಆಫೀಸರ್ ಪೋಸ್ಟ್
ಅಸಿಸ್ಟೆಂಟ್ ಎಂಜಿನಿಯರ್ ಹಾಗೂ ಯೂತ್ ಆಫೀಸರ್ ಹುದ್ದೆ ಸೇರಿ ಒಟ್ಟು 69 ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು. ಯುಪಿಎಸ್ಸಿ 69 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟೆಂಟ್ ಮೈನಿಂಗ್ ಎಂಜಿನಿಯರ್, ಯೂತ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಯುಪಿಎಸ್ಸಿ ಅರ್ಹ ಆಕಾಂಕ್ಷಿಗಳಿಂದ UPSC 2023 ನೋಟಿಫಿಕೇಶನ್ ಮೂಲಕ ಅರ್ಜಿ ಆಹ್ವಾನಿಸಿದೆ. ಭಾರತೀಯ ಸರ್ಕಾರದಡಿ ಉದ್ಯೋಗ ಹುಡುಕುತ್ತಿರುವುದರಿಗೆ ಇದು ಸದವಕಾಶ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 13, 2023ರ ಮೊದಲು ಅರ್ಜಿ ಸಲ್ಲಿಸಬೇಕು.
UPSC 2023 ನೋಟಿಫಿಕೇಶನ್
ಸಂಸ್ಥೆ | ಯುಪಿಎಸ್ಸಿ |
ಖಾಲಿ ಹುದ್ದೆಗಳು | 69 |
ಉದ್ಯೋಗ ಸ್ಥಳ | ಆಲ್ ಇಂಡಿಯಾ |
ಹುದ್ದೆಯ ಹೆಸರು | ಅಸಿಸ್ಟೆಂಟ್ ಎಂಜಿನಿಯರ್, ಯೂತ್ ಆಫೀಸರ್ |
ವೇತನ | ಯುಪಿಎಸ್ಸಿ ವೇತನ ನಿಯಮದಂತೆ |
ಹುದ್ದೆ ಹೆಸರು | ಹುದ್ದೆ ಸಂಖ್ಯೆ |
ಪ್ರಾದೇಶಿಕ ನಿರ್ದೇಶಕ | 1 |
ಸಹಾಯಕ ಆಯುಕ್ತ | 1 |
ಅಸಿಸ್ಟೆಂಟ್ ಓರ್ ಡ್ರೆಸ್ಸಿಂಗ್ ಆಫೀಸರ್ | 22 |
ಸಹಾಯಕ ಖನಿಜ ಅರ್ಥಶಾಸ್ತ್ರಜ್ಞ (ಗುಪ್ತಚರ) | 4 |
ಅಸಿಸ್ಟೆಂಟ್ ಮೈನಿಂಗ್ ಆಫೀಸರ್ | 34 |
ಯೂತ್ ಆಫೀಸರ್ | 7 |
ಹುದ್ದೆ ಹೆಸರು | ಅರ್ಹತೆ |
ಪ್ರಾದೇಶಿಕ ನಿರ್ದೇಶಕ | M.Sc, ಸ್ನಾತಕೋತ್ತರ ಪದವಿ |
ಸಹಾಯಕ ಆಯುಕ್ತ | ಪದವಿ, ಸ್ನಾತಕೋತ್ತರ ಪದವಿ |
ಅಸಿಸ್ಟೆಂಟ್ ಓರ್ ಡ್ರೆಸ್ಸಿಂಗ್ ಆಫೀಸರ್ | BE ಅಥವಾ B.Tech, ಸ್ನಾತಕೋತ್ತರ ಪದವಿ |
ಸಹಾಯಕ ಖನಿಜ ಅರ್ಥಶಾಸ್ತ್ರಜ್ಞ (ಗುಪ್ತಚರ) | ಮೈನಿಂಗ್ನಲ್ಲಿ ಪದವಿ, ಸ್ನಾತಕೋತ್ತರ ಪದವಿ |
ಅಸಿಸ್ಟೆಂಟ್ ಮೈನಿಂಗ್ ಆಫೀಸರ್ | ಮೈನಿಂಗ್ ಎಂಜಿನಿಯರಿಂಗ್ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ |
ಯೂತ್ ಆಫೀಸರ್ | ಪದವಿ ಅಥವಾ ಸ್ನಾತಕೋತ್ತರ ಪದವಿ |
ಹುದ್ದೆ | ವಯಸ್ಸಿನ ಮಿತಿ |
ಪ್ರಾದೇಶಿಕ ನಿರ್ದೇಶಕ | 55 |
ಸಹಾಯಕ ಆಯುಕ್ತ | 40 |
ಅಸಿಸ್ಟೆಂಟ್ ಓರ್ ಡ್ರೆಸ್ಸಿಂಗ್ ಆಫೀಸರ್ | 35 |
ಸಹಾಯಕ ಖನಿಜ ಅರ್ಥಶಾಸ್ತ್ರಜ್ಞ (ಗುಪ್ತಚರ) | 35 |
ಅಸಿಸ್ಟೆಂಟ್ ಮೈನಿಂಗ್ ಆಫೀಸರ್ | 30 |
ಯೂತ್ ಆಫೀಸರ್ | 30 |
ಎಪ್ಲಿಕೇಷನ್ ಫೀಸ್
ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲು ಯುಪಿಎಸ್ಸಿ ನೇಮಕಾತಿ 2023ರ ನೋಟಿಫಿಕೇಷನ್ ಸರಿಯಾಗಿ ಓದಿ ನೀವು ಈ ಹುದ್ದೆಗಳಿಗೆ ಅರ್ಹರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೋಟಿಫಿಕೇಷನ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ.
* ಆನ್ಲೈನ್ನಲ್ಲಿ ಅರ್ಜಿಯನ್ನು ತುಂಬಿಸಲು ಆರಂಭಿಸುವ ಮೊದಲೇ ನಿಮ್ಮ ಇಮೇಲ್ ಐಡಿ, ಐಡಿ ಪ್ರೂಫ್, ವಯಸ್ಸು, ಶಿಕ್ಷಣಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್, ರೆಸ್ಯೂಮ್, ಇತರ ಎಕ್ಸ್ಪಿರಿಯನ್ಸ್ ಸರ್ಟಿಫಿಕೇಟ್ ಇದ್ದರೆ ತೆಗೆದಿಟ್ಟುಕೊಳ್ಳಿ.
* ಯುಪಿಎಸ್ಸಿ ಅಸಿಸ್ಟೆಂಟ್ ಮೈನಿಂಗ್ ಎಂಜಿನಿಯರ್, ಯೂತ್ ಆಫೀಸರ್ ಹುದ್ದೆಗೆ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.
* ಯುಪಿಎಸ್ಸಿ ಆನ್ಲೈನ್ ಅಪ್ಲಿಕೇಷನ್ ಫಾರ್ಮ್ನಲ್ಲಿ ಅಗತ್ಯ ಮಾಹಿತಿಗಳನ್ನು ಫಿಲ್ ಮಾಡಿ. ಅಗತ್ಯ ಸರ್ಟಿಫಿಕೇಟ್ಗಳ ಸ್ಕ್ಯಾನ್ ಮಾಡಿರುವ ಕಾಪಿಗಳನ್ನು/ಡಾಕ್ಯುಮೆಂಟ್ಗಳನ್ನು/ನಿಮ್ಮ ಫೋಟೋ (ಅಗತ್ಯವಿದ್ದರೆ) ಅಪ್ಲೋಡ್ ಮಾಡಿ.
* ನಿಮ್ಮ ಕೆಟಗರಿಗೆ ಅನ್ವಯಿಸಿದಂತೆ ಫೀಸ್ ಶುಲ್ಕ ಪಾವತಿಸಿ.
ಕೊನೆಗೆ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
* ಪ್ರಮುಖವಾಗಿ ಗಮನಿಸಬೇಕಾದ ವಿಚಾರ - ಅಪ್ಲಿಕೇಷನ್ ಸಂಖ್ಯೆ ಅಥವಾ ರಿಕ್ವೆಸ್ಟ್ ನಂಬರ್ ಸೇವ್ ಮಾಡಿ ಅಥವಾ ಫೋಟೋ ತೆಗೆದಿಟ್ಟುಕೊಳ್ಳಿ.
ನೆನಪಿಡಬೇಕಾದ ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ - 25/03/2023
ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನ - 13/04/2023
ಆನ್ಲೈನ್ ಕಂಪ್ಲೀಟ್ ಅರ್ಜಿಯ ಪ್ರಿಂಟ್ಔಟ್ ತೆಗೆಯಲು ಕೊನೆಯ ದಿನ - 14/04/2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ