ನವದೆಹಲಿ(ಸೆ.12): ಕೇಂದ್ರ ನಾಗರಿಕ ಸೇವಾ ಆಯೋಗ(UPSC) ಖಾಲಿ ಇರುವ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. DCIO ಹಾಗೂ ಇತರೆ ಹುದ್ದೆಗಳಿಗೆ ಯುಪಿಎಸ್ಸಿ ನೇಮಕಾತಿ ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಯುಪಿಎಸ್ಸಿಯ ಅಧಿಕೃತ ವೆಬ್ಸೈಟ್ upsc.gov.in.ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 1.
UPSC Recruitment 2021: Important dates
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30, 2021 ರವರೆಗೆ ಇರುತ್ತದೆ.
ಸಂಪೂರ್ಣವಾಗಿ ಸಲ್ಲಿಸಿದ ಆನ್ಲೈನ್ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ ಅಕ್ಟೋಬರ್ 1, 2021 ರವರೆಗೆ ಇರುತ್ತದೆ.
ಇದನ್ನೂ ಓದಿ:TCS Recruitment 2021: ಕೆಲಸ ಹುಡುಕ್ತಿದ್ದೀರಾ? ಟಿಸಿಎಸ್ ಕಂಪನಿಯಲ್ಲಿದೆ ಉದ್ಯೋಗ; ಅರ್ಜಿ ಸಲ್ಲಿಸಲು ಹೀಗೆ ಮಾಡಿ
UPSC Recruitment 2021: ಖಾಲಿ ಇರುವ ಹುದ್ದೆಗಳ ವಿವರ
ಹುದ್ದೆಯ ಹೆಸರು |
ಹುದ್ದೆಯ ಸಂಖ್ಯೆ
|
ಪ್ರಾದೇಶಿಕ ನಿರ್ದೇಶಕ |
1 |
ಡೆಪ್ಯುಟಿ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ |
10 |
ಸಹಾಯಕ ಪ್ರಾಧ್ಯಾಪಕ(ಕೆಮಿಸ್ಟ್ರಿ) |
1 |
ಸಹಾಯಕ ಪ್ರಾಧ್ಯಾಪಕ(ಎಲೆಕ್ಟ್ರಿಕಲ್ ಎಂಜಿನಿಯರಿಂಗ್) |
1 |
ಸಹಾಯಕ ಪ್ರಾಧ್ಯಾಪಕ(ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಎಂಜಿನಿಯರಿಂಗ್) |
2 |
ಸಹಾಯಕ ಪ್ರಾಧ್ಯಾಪಕ(ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್) |
1 |
ಸಹಾಯಕ ಪ್ರಾಧ್ಯಾಪಕ(ಮ್ಯಾಥಮೆಟಿಕ್ಸ್) |
1 |
ಸಹಾಯಕ ಪ್ರಾಧ್ಯಾಪಕ(ಪ್ರೊಡಕ್ಷನ್ ಎಂಜಿನಿಯರಿಂಗ್) |
1 |
ಸಹಾಯಕ ಪ್ರಾಧ್ಯಾಪಕ(ಮೆಕ್ಯಾನಿಕಲ್ ಎಂಜಿನಿಯರಿಂಗ್) |
1 |
ಸೀನಿಯರ್ ಸೈಂಟಿಫಿಕ್ ಆಫೀಸರ್ ಗ್ರೇಡ್-2(ಎಲೆಕ್ಟ್ರಾನಿಕ್ಸ್) |
3 |
ಜೂನಿಯರ್ ರಿಸರ್ಚ್ ಆಫೀಸರ್ |
3 |
ಸಹಾಯಕ ಎಂಜಿನಿಯರ್/ ಅಸಿಸ್ಟೆಂಟ್ ಸರ್ವೇಯರ್ |
3 |
ಅರ್ಹತಾ ಮಾನದಂಡ
ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿವರವಾದ ಅಧಿಸೂಚನೆಯಲ್ಲಿ ಅರ್ಹತಾ ಮಾನದಂಡ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬೇಕು.
https://www.upsc.gov.in/sites/default/files/AdvtNo-12-2021-engl-100921.pdf
ಅರ್ಜಿ ಶುಲ್ಕ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೇವಲ 25 ರೂಪಾಯಿ ಶುಲ್ಕ ಪಾವತಿಸಬೇಕು. ಎಸ್ಎಸಿ, ಎಸ್ಟಿ, ಪಿಡಬ್ಲೂಡಿ, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ಇದನ್ನೂ ಓದಿ:NEET 2021: ದೇಶಾದ್ಯಂತ ಇಂದು ನೀಟ್ ಪರೀಕ್ಷೆ; ಅಭ್ಯರ್ಥಿಗಳ ಡ್ರೆಸ್ ಕೋಡ್ ಹೇಗಿರಬೇಕು? ಯಾವ ವಸ್ತುಗಳಿಗೆ ನಿಷೇಧ?
ಜನರಲ್/ಒಬಿಸಿ/ಇಡಬ್ಲ್ಯೂಎಸ್ ಪುರುಷ ಅಭ್ಯರ್ಥಿಗಳಿಗೆ "ಶುಲ್ಕ ವಿನಾಯಿತಿ" ನೀಡಿಲ್ಲ. ಅವರು ಸಂಪೂರ್ಣ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ನಿಗದಿತ ಶುಲ್ಕ ಕಟ್ಟದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಒಮ್ಮೆ ಪಾವತಿಸಿದ ಶುಲ್ಕವನ್ನು ಮತ್ತೆ ಯಾವುದೇ ಸಂದರ್ಭದಲ್ಲಿ ಮರುಪಾವತಿಸಲಾಗುವುದಿಲ್ಲ. ಅಥವಾ ಯಾವುದೇ ಇತರ ಪರೀಕ್ಷೆ ಅಥವಾ ಆಯ್ಕೆಗಾಗಿ ಆ ಶುಲ್ಕವನ್ನು ಕಾಯ್ದಿರಿಸಲಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ