UPSC ESE Recruitment: ಯುಪಿಎಸ್​ಸಿ ಇಂಜಿನಿಯರಿಂಗ್​ ಸೇವಾ ಪರೀಕ್ಷೆ ಅಧಿಸೂಚನೆ ಬಿಡುಗಡೆ; 327 ಹುದ್ದೆಗೆ ಅರ್ಜಿ ಆಹ್ವಾನ

ಸಿವಿಲ್​, ಮೆಕಾನಿಕಲ್​, ಎಲೆಕ್ಟ್ರಿಕಲ್​ ಮತ್ತು ಎಲೆಕ್ಟ್ರಾನಿಕ್ಸ್​ ಅಂಡ್​ ಟೆಲಿಕಮ್ಯೂನಿಕೇಷನ್​ನಲ್ಲಿ ಇಂಜಿನಿಯರಿಂಗ್​ ಪದವಿ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಕೇಂದ್ರ ಲೋಕ ಸೇವಾ ಆಯೋಗದಿಂದ (Union Public Service Commission) ನಡೆಸಲಾಗುವ ಇಂಜಿನಿಯರಿಂಗ್​ ಸೇವೆಗಳ (Engineering Services Examination)  ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 327 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಈ ಹುದ್ದೆಗಳ ಭರ್ತಿ ನಡೆಯಲಿದೆ. ಇಂಜಿನಿಯರಿಂಗ್​ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 4 ಆಗಿದೆ.

    ಸಿವಿಲ್​, ಮೆಕಾನಿಕಲ್​, ಎಲೆಕ್ಟ್ರಿಕಲ್​ ಮತ್ತು ಎಲೆಕ್ಟ್ರಾನಿಕ್ಸ್​ ಅಂಡ್​ ಟೆಲಿಕಮ್ಯೂನಿಕೇಷನ್​ನಲ್ಲಿ ಇಂಜಿನಿಯರಿಂಗ್​ ಪದವಿ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಯ ಹೆಸರುಕೇಂದ್ರ ಲೋಕ ಸೇವಾ ಆಯೋಗ
    ಹುದ್ದೆಯ ಹೆಸರುಎಂಜಿನಿಯರಿಂಗ್ ಸೇವೆಗಳ ಪರೀಕ್ಷೆ
    ಹುದ್ದೆಗಳ ಸಂಖ್ಯೆ327
    ಉದ್ಯೋಗ ಸ್ಥಳಅಖಿಲ ಭಾರತ
    ಸಂಬಳಯುಪಿಎಸ್​ಸಿ ನಿಯಮಗಳ ಪ್ರಕಾರ

    ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ, ಬಿಇ ಇಂಜಿನಿಯರಿಂಗ್​ ಪದವಿ ಪಡೆದಿರಬೇಕು.

    ವಯಸ್ಸಿನ ಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-ಜನವರಿ-2023 ರಂತೆ ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು.

    ಇದನ್ನು ಓದಿ: ಲೈಬ್ರರಿ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲಿದೆ ಅವಕಾಶ

    ವಯೋಮಿತಿ ಸಡಿಲಿಕೆ:
    ಸರ್ಕಾರಿ ನೌಕರರು: 5 ವರ್ಷಗಳು

    ಅರ್ಜಿ ಶುಲ್ಕ:
    ಪ.ಜಾ, ಪ.ಪಂ, ಮಹಿಳಾ ಮತ್ತು ವಿಕಲಚೇತನ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
    ಎಲ್ಲಾ ಇತರ ಅಭ್ಯರ್ಥಿಗಳು: 200 ರೂ

    ಪಾವತಿ ವಿಧಾನ: ಆನ್‌ಲೈನ್/ ನಗದು

    ಆಯ್ಕೆ ಪ್ರಕ್ರಿಯೆ:
    ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14 ಸೆಪ್ಟೆಂಬರ್​​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 04 ಅಕ್ಟೋಬರ್​​ 2022
    ನಗದು ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 03 ಅಕ್ಟೋಬರ್​​  2022
    ಆನ್‌ಲೈನ್ ಅರ್ಜಿಗಳನ್ನು ಹಿಂತೆಗೆದುಕೊಳ್ಳುವ ದಿನಾಂಕ: 12 ರಿಂದ 18ನೇ ಅಕ್ಟೋಬರ್ 2022

    ಇದನ್ನು ಓದಿ: ಮೈಸೂರಿನ ನೋಟು ಮುದ್ರಣ ಘಟಕದಲ್ಲಿದೆ ಉದ್ಯೋಗಾವಕಾಶ; ಬಿಇ ಆಗಿದ್ರೆ ಅರ್ಜಿ ಸಲ್ಲಿಸಿ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: upsc.gov.in

    ಅರ್ಜಿ ಸಲ್ಲಿಕೆ ಪ್ರಕ್ರಿಯೆ:

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿ.

    -ನಿಮ್ಮ ವರ್ಗಕ್ಕೆ ಅನುಗುಣ ಆಗಿ ಶುಲ್ಕ ಪಾವತಿಸಿ, ಅದರ ಮಾಹಿತಿ ಅಪ್​ಲೋಡ್​ ಮಾಡಿ

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ
    Published by:Seema R
    First published: