UPSC Prelims 2021 Admit Card: ಯುಪಿಎಸ್​ಸಿ ಪ್ರಿಲಿಮ್ಸ್​​ಗೆ ಅಡ್ಮಿಟ್ ಕಾರ್ಡ್​ ಡೌನ್​ಲೋಡ್ ಮಾಡಿಕೊಳ್ಳಲು ಈ ಸರಳ ವಿಧಾನಗಳನ್ನು ಅನುಸರಿಸಿ

UPSC Civil Services Prelims 2021: ಯುಪಿಎಸ್​ಸಿ ಸಿವಿಲ್ ಸರ್ವೀಸ್ ಪ್ರಿಲಿಮ್ಸ್​ ಪರೀಕ್ಷೆ 2021 ಇದೇ ಅಕ್ಟೋಬರ್ 10ರಂದು ಭಾರತದಾದ್ಯಂತ ನಡೆಯಲಿದೆ. ಯುಪಿಎಸ್​ಸಿ ಪ್ರಿಲಿಮ್ಸ್​ನ ವಿಸ್ತೃತವಾದ ಪರೀಕ್ಷಾ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ(ಸೆ.15): ಕೇಂದ್ರ ನಾಗರಿಕ ಸೇವಾ ಆಯೋಗ(Union Public Service Commission-UPSC) ಸ್ಪರ್ಧಾತ್ಮಕ ಪರೀಕ್ಷೆಗೆ ಯುಪಿಎಸ್​ಸಿ ಶೀಘ್ರದಲ್ಲೇ ಅಡ್ಮಿಟ್​ ಕಾರ್ಡ್​ ಬಿಡುಗಡೆ ಮಾಡಲಿದೆ. ಎಲ್ಲಾ ಅಭ್ಯರ್ಥಿಗಳು ತಮ್ಮ ಯುಪಿಎಸ್​ಸಿ ನಾಗರಿಕ ಸೇವೆಯ ಪ್ರಿಲಿಮ್ಸ್​ ಪರೀಕ್ಷೆಗಾಗಿ ​ ಪ್ರವೇಶ ಪತ್ರವನ್ನು ಅಧಿಕೃತ ವೆಬ್​ಸೈಟ್​ upsc.gov.in.ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದು. ಯುಪಿಎಸ್​ಸಿ ಸಿವಿಲ್ ಸರ್ವೀಸ್ ಪ್ರಿಲಿಮ್ಸ್(UPSC Civil Service Prelims)​ ಪರೀಕ್ಷೆ 2021 ಇದೇ ಅಕ್ಟೋಬರ್ 10ರಂದು ಭಾರತದಾದ್ಯಂತ ನಡೆಯಲಿದೆ. ಯುಪಿಎಸ್​ಸಿ ಪ್ರಿಲಿಮ್ಸ್​ನ ವಿಸ್ತೃತವಾದ ಪರೀಕ್ಷಾ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

    ಯುಪಿಎಸ್​ಸಿ ಸಿವಿಲ್ ಸರ್ವೀಸ್​ ಪ್ರಿಲಿಮ್ಸ್​​ ಅಡ್ಮಿಟ್​ ಕಾರ್ಡ್​ನ್ನು ಡೌನ್​ಲೋಡ್ ಮಾಡುವುದು ಹೇಗೆ?

    ಹಂತ 1: ಮೊದಲು ಯುಪಿಎಸ್​ಸಿ ಅಧಿಕೃತ ವೆಬ್​ಸೈಟ್​ upsc.gov.in.ಗೆ ಭೇಟಿ ನೀಡಿ.



    ಹಂತ 2: ಅಲ್ಲಿ ಕಾಣುವ ‘ಇ-ಅಡ್ಮಿಟ್​​ ಕಾರ್ಡ್​​: ಸಿವಿಲ್​ ಸರ್ವೀಸಸ್ (ಪ್ರಿಲಿಮ್ಸ್​​) ಪರೀಕ್ಷೆ-2021‘ ಲಿಂಕ್ ಮೇಲೆ ಕ್ಲಿಕ್ ಮಾಡಿ.



    ಹಂತ 3: ಬಳಿಕ ಅಲ್ಲಿ ಕೇಳಿರುವ ನಿಮ್ಮ ಯುಪಿಎಸ್​ಸಿ ಸಿವಿಲ್ ಸರ್ವೀಸಸ್​ 2021ರ ರೋಲ್​ ನಂಬರ್/ ರಿಜಿಸ್ಟ್ರೇಶನ್ ಐಡಿ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿ.



    ಹಂತ 4: ಇದಾದ ನಂತರ ಸಬ್​ಮಿಟ್​ ಬಟನ್ ಕ್ಲಿಕ್ ಮಾಡಿ, ಆಗ ಯುಪಿಎಸ್​​ಸಿ ಸಿವಿಲ್ ಸರ್ವೀಸ್ ಪ್ರಿಲಿಮ್ಸ್​​ನ ಅಡ್ಮಿಟ್ ಕಾರ್ಡ್​​ ಕಾಣಸಿಗುತ್ತದೆ.

    ಹಂತ 5: ಲಭ್ಯವಿರುವ ನಿಮ್ಮ ಅಡ್ಮಿಟ್ ಕಾರ್ಡ್​​ನ್ನು ಡೌನ್​ಲೋಡ್ ಮಾಡಿಕೊಂಡು, ಪ್ರಿಂಟ್ ತೆಗದುಕೊಳ್ಳಿ. ಮುಂದಿನ ದಿನಗಳಲ್ಲಿ ಅದರ ಅವಶ್ಯಕತೆ ಹೆಚ್ಚಿರುತ್ತದೆ.

    ಇದನ್ನೂ ಓದಿ:Amazon is Hiring: ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳಲ್ಲಿ 8,000 ಜನರಿಗೆ ಕೆಲಸ ಕೊಡ್ತಿದೆ ಅಮೆಜಾನ್



    ಯುಪಿಎಸ್​ಸಿ ಸಿವಿಲ್ ಸರ್ವೀಸ್ ಪರೀಕ್ಷೆ 2021: ಪಾಲಿಸಬೇಕಾದ ಕೋವಿಡ್ ನಿಯಮಗಳೇನು?

    • ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್​ ಧರಿಸಿರಬೇಕು/ ಫೇಸ್​ ಶೀಲ್ಡ್​​ ಹಾಕಿರಬೇಕು.

    • ಮಾಸ್ಕ್​ ಧರಿಸದ/ ಫೇಸ್​ ಶೀಲ್ಡ್​ ಹಾಕದ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ.

    • ಪರಿಶೀಲನೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಮಾಸ್ಕ್​ ಅಥವಾ ಫೇಸ್​ಶೀಲ್ಡ್​​ನ್ನು ತೆಗೆಯಬೇಕಾಗುತ್ತದೆ.

    • ಅಭ್ಯರ್ಥಿಯು ಪಾರದರ್ಶಕ ಬಾಟಲಿಯಲ್ಲಿ ಸಣ್ಣ ಸ್ಯಾನಿಟೈಜರ್ ಬಾಟಲಿಯನ್ನು ಪರೀಕ್ಷಾ ಕೊಠಡಿಗೆ ಕೊಂಡೊಯ್ಯಬಹುದು.

    • ಎಲ್ಲಾ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಬಳಿ ಹಾಗೂ ಪರೀಕ್ಷಾ ಕೊಠಡಿಯೊಳಗೆ ಕಡ್ಡಾಯವಾಗಿ ದೈಹಿಕ ಅಂತರ ಪಾಲನೆ ಮಾಡಬೇಕು. ಜೊತೆಗೆ ವೈಯಕ್ತಿಕ ನೈರ್ಮಲ್ಯವನ್ನೂ ಸಹ ಕಾಪಾಡಿಕೊಳ್ಳಬೇಕು.


    ಇದನ್ನೂ ಓದಿ:UPSC is Hiring: ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ UPSC; ಅರ್ಜಿ ಸಲ್ಲಿಸಲು ಅ.1 ಕೊನೆಯ ದಿನಾಂಕ

    ಕೇಂದ್ರ ನಾಗರಿಕ ಸೇವಾ ಆಯೋಗ(UPSC) ಖಾಲಿ ಇರುವ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. DCIO ಹಾಗೂ ಇತರೆ ಹುದ್ದೆಗಳಿಗೆ ಯುಪಿಎಸ್​ಸಿ ನೇಮಕಾತಿ ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಯುಪಿಎಸ್​​ಸಿಯ ಅಧಿಕೃತ ವೆಬ್​ಸೈಟ್​ upsc.gov.in.ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 1.
    Published by:Latha CG
    First published: