UPSC Civil Services Result 2020: ಸಿವಿಲ್​ ಸರ್ವಿಸ್​ ಫಲಿತಾಂಶ ಪ್ರಕಟ; ಐಐಟಿ ಬಾಂಬೆ ವಿದ್ಯಾರ್ಥಿ ಶುಭಂ ಟಾಪರ್​​; ರಾಜ್ಯದ ಅಕ್ಷಯ್​ ಗೆ 77ನೇ ಸ್ಥಾನ

ಪರೀಕ್ಷೆ ಯಲ್ಲಿ ತೇರ್ಗಡೆ ಆಗಿದ್ದು, 180 IAS, 36 IFS, 200 IPS ಅಭ್ಯರ್ಥಿಗಳು ಪಾಸ್ ಆಗಿದ್ದಾರೆ. 

ಅಕ್ಷಯ್​​

ಅಕ್ಷಯ್​​

  • Share this:
    ಕೇಂದ್ರ ಲೋಕಸೇವಾ ಆಯೋಗ (UPSC) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2020ನೇ ಸಾಲಿನ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಆಯೋಗವು ಐಎಎಸ್ (IAS), ಐಪಿಎಸ್ (IPS) ಮತ್ತು ಐಎಫ್ಎಸ್ (IFS) ಜೊತೆಗೆ ಈಗ ವಿವಿಧ ಕೇಂದ್ರ ಸೇವೆಗಳಿಗೆ ಸೇರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಐಟಿ ಬಾಂಬೆ ಸಿವಿಲ್ ಎಂಜಿನಿಯರಿಂಗ್‌ ಪದವಿಧರ ಶುಭಂ ಕುಮಾರ್ (Shubham Kumar) ಮೊದಲ ಸ್ಥಾನ ಪಡೆದಿದ್ದಾರೆ. ಮನಿತ್​ನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್​ ಪದವಿಧರೆ ಜಾಗೃತಿ ಅವಸ್ಥಿ (Jagarati Awasthi) ಎರಡನೇ ಸ್ಥಾನ ಪಡೆದಿದ್ದಾರೆ. ಅಂಕಿತ್​ ಜೈನ್ (Ankita Jain)​ ಮೂರನೇ ಸ್ಥಾನ ಪಡೆದಿದ್ದಾರೆ . ಕರ್ನಾಟಕದ ಅಕ್ಷಯ್ ಸಿಂಹ (Akshay Simha)​ 77ನೇ ಸ್ಥಾನ ಪಡೆಯುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 

    ಇದುವರೆಗೂ ಕರ್ನಾಟಕದ 15 ಅಭ್ಯರ್ಥಿಗಳು ಉತೀರ್ಣರಾಗಿರುವ ಮಾಹಿತಿ ಲಭ್ಯವಾಗಿದ್ದು, ಇವರೆಲ್ಲ ಬೆಂಗಳೂರಿನ ಇಂಡಿಯಾ 4 IAS ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು ಎಂಬ ಮಾಹಿತಿ ಲಭಿಸಿದೆ.

    761 ಅಭ್ಯರ್ಥಿಗಳ ಆಯ್ಕೆ

    ಟಾಪ್​ 25 ಅಭ್ಯರ್ಥಿಗಳಲ್ಲಿ 13 ಪುರುಷರು ಮತ್ತು 12 ಮಹಿಳೆಯರು ಸ್ಥಾನ ಪಡೆದಿದ್ದಾರೆ. ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಇದರಲ್ಲಿ ಬೆಂಚ್‌ಮಾರ್ಕ್ ಅಂಗವೈಕಲ್ಯ ಹೊಂದಿರುವ 25 ಅಭ್ಯರ್ಥಿಗಳಾದರೆ, 7 ಮೂಳೆ ಅಂಗವಿಕಲರು, 4 ದೃಷ್ಟಿಹೀನರು, 10 ಶ್ರವಣ ದೋಷವುಳ್ಳವರು ಮತ್ತು 4 ಬಹು ಅಂಗವೈಕಲ್ಯಗಳು ಆಯ್ಕೆಯಾಗಿದ್ದಾರೆ.

    ಕಳೆದ ಆಗಸ್ಟ್​ 2ರಂದು ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನವನ್ನು ನಡೆಸಲಾಗಿತ್ತು. ವ್ಯಕ್ತಿತ್ವ ಪರೀಕ್ಷೆಗಳನ್ನು ಆಗಸ್ಟ್ 2 ರಿಂದ ಸೆಪ್ಟೆಂಬರ್ 22 ರವರೆಗೆ ನಡೆದಿತ್ತು.

    ಯುಪಿಎಸ್​ಸಿ ಫಲಿತಾಂಶ ನೋಡುವ ವಿಧಾನ
    ಹಂತ 1: upsc.gov.in ವೆಬ್‌ಸೈಟ್‌ಗೆ ಭೇಟಿ ನೀಡಿ

    ಹಂತ 2: 'UPSC ಮುಖ್ಯ ಫಲಿತಾಂಶ ಲಿಂಕ್ 2020' ಮೇಲೆ ಕ್ಲಿಕ್ ಮಾಡಿ

    ಹಂತ 3: ಆಯ್ಕೆಯಾದ ಅಭ್ಯರ್ಥಿಗಳ ಹೆಸರು ಮತ್ತು ರೋಲ್ ಸಂಖ್ಯೆಯೊಂದಿಗೆ ಪಿಡಿಎಫ್ ಫೈಲ್ ಕಾಣಿಸುತ್ತದೆ

    ಹಂತ 4: ಡೌನ್‌ಲೋಡ್ ಮಾಡಿ ಮತ್ತು ಅಗತ್ಯವಿದ್ದರೆ,  ಪ್ರಿಂಟ್‌ಔಟ್ ತೆಗೆದುಕೊಳ್ಳಿ.

    ಇದನ್ನು ಓದಿ: Lok Sabha Recruitment 2021: ತಿಂಗಳಿಗೆ 65 ಸಾವಿರ ಸಂಬಳ; ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ

    ಐಎಎಸ್, ಐಪಿಎಸ್, ಐಎಫ್ಎಸ್, ಐಆರ್​ಎಸ್​​, ಮತ್ತು ಐಆರ್​ಟಿಎಸ್​​ ಸೇರಿದಂತೆ ವಿವಿಧ ಅಖಿಲ ಭಾರತ ಸೇವೆಗಳು ಮತ್ತು ಕೇಂದ್ರ ನಾಗರಿಕ ಸೇವೆಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆಗೆ ಮೂರು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಮೊದಲು ಪ್ರಾಥಮಿಕ, ಇದಾದ ಬಳಿಕ ಮುಖ್ಯ ಪರೀಕ್ಷೆ ಇದರಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು ನಂತರ  ಸಂದರ್ಶನಕ್ಕೆ ಕರೆಯಲಾಗುವುದು. ಈ ರೀತಿಯಾಗಿ ಮೂರು ಹಂತದಲ್ಲಿ ದೇಶದ ಅತ್ಯುನ್ನತ ಹುದ್ದೆಗಳ ಆಯ್ಕೆಗೆ ಪ್ರತಿ ವರ್ಷ ಕೇಂದ್ರ ಲೋಕಸೇವ ಆಯೋಗ ಪರೀಕ್ಷೆ ನಡೆಸುತ್ತದೆ.
    Published by:Seema R
    First published: