• Home
  • »
  • News
  • »
  • jobs
  • »
  • UPPCL Recruitment 2022: ITI ಅಭ್ಯರ್ಥಿಗಳಿಗೆ ಬಂಪರ್ ಉದ್ಯೋಗ, 876 ಎಲೆಕ್ಟ್ರಿಕ್ ತಂತ್ರಜ್ಞ ಹುದ್ದೆಗೆ ಅರ್ಜಿ ಆಹ್ವಾನ

UPPCL Recruitment 2022: ITI ಅಭ್ಯರ್ಥಿಗಳಿಗೆ ಬಂಪರ್ ಉದ್ಯೋಗ, 876 ಎಲೆಕ್ಟ್ರಿಕ್ ತಂತ್ರಜ್ಞ ಹುದ್ದೆಗೆ ಅರ್ಜಿ ಆಹ್ವಾನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

UPPCL Recruitment 2022: ಒಟ್ಟು 876 ಎಲೆಕ್ಟ್ರಿಕ್ ತಂತ್ರಜ್ಞ ಹುದ್ದೆಗಳು ಖಾಲಿ ಇರುವುದರಿಂದ ಅವಕಾಶ ನಿಮ್ಮದಾಗಿಸಿಕೊಳ್ಳಿ 27 ಸೆಪ್ಟೆಂಬರ್ 2022 ನಂದು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಿ.

  • Share this:

ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್ (UPPCL) ಎಲೆಕ್ಟ್ರಿಕ್ ತಂತ್ರಜ್ಞ (Electrical Technician) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ITI ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶವಿದೆ.  876 ಖಾಲಿ ಹುದ್ದೆಗಳನ್ನ ಹೊಂದಿದ್ದು ನೀವೂ ಅರ್ಜಿ ಸಲ್ಲಿಸಬಹುದು. 27 ಸೆಪ್ಟೆಂಬರ್ 2022 ರಿಂದ ಅಭ್ಯರ್ಥಿಗಳಿಗೆ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭವಾಗಲಿದೆ (Started). ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಅಕ್ಟೋಬರ್ 2022. ಅಧಿಕೃತ ವೆಬ್‌ಸೈಟ್‌ನಲ್ಲಿ ಅಂದರೆ upenergy.in ನಲ್ಲಿ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಈ ಹುದ್ದೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಇಲ್ಲಿವೆ ನೋಡಿ.

ಹುದ್ದೆಎಲೆಕ್ಟ್ರಿಕ್ ತಂತ್ರಜ್ಞ
ಸಂಸ್ಥೆಪವರ್ ಕಾರ್ಪೊರೇಷನ್ ಲಿಮಿಟೆಡ್  ತಂತ್ರಜ್ಞ (UPPCL)
ಖಾಲಿ ಹುದ್ದೆಗಳ ಸಂಖ್ಯೆ876
ಸಂಬಳರೂ. 27200/-
ವಿದ್ಯಾರ್ಹತೆ12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಾನ18 ರಿಂದ 40 ವರ್ಷಗಳು
ಅರ್ಜಿ ಸಲ್ಲಿಕೆಇಲ್ಲಿ ಕ್ಲಿಕ್ ಮಾಡಿ
ಕೊನೆ ದಿನಾಂಕ19 ಅಕ್ಟೋಬರ್ 2022
ಆರಂಭಿಕ ದಿನಾಂಕ27 ಸೆಪ್ಟೆಂಬರ್ 2022
ಅರ್ಜಿ ಶುಲ್ಕ1180/- SC / ST : 826/-

ಈ ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟು 876 ಹುದ್ದೆಗಳು ಖಾಲಿ ಇರುವುದರಿಂದ ಅವಕಾಶ ನಿಮ್ಮದಾಗಿಸಿಕೊಳ್ಳಿ 27 ಸೆಪ್ಟೆಂಬರ್ 2022 ನಂದು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಿ. ಪರೀಕ್ಷಾ ಶುಲ್ಕ ಭರ್ತಿ ಮಾಡಿ ಮತ್ತು ಕೆಳಗೆ ನೀಡಿರುವ ವಿವರದಂತೆ ಎಲ್ಲಾ ಕ್ರಮಗಳನ್ನು ಅನುಸರಿಸಿ.


UPPCL ತಂತ್ರಜ್ಞ ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ - 27 ಸೆಪ್ಟೆಂಬರ್ 2022
UPPCL ತಂತ್ರಜ್ಞ ಆನ್‌ಲೈನ್ ಅಪ್ಲಿಕೇಶನ್‌ನ ಕೊನೆಯ ದಿನಾಂಕ - 19 ಅಕ್ಟೋಬರ್ 2022
UPPCL ತಂತ್ರಜ್ಞರ ಪರೀಕ್ಷಾ ದಿನಾಂಕ - ನವೆಂಬರ್ 2022 ರ 4 ನೇ ವಾರ


ಇದನ್ನೂ ಓದಿ: 75 ಪ್ರಾಜೆಕ್ಟ್​ ಅಸಿಸ್ಟೆಂಟ್​ ಹುದ್ದೆಗೆ ವಾಕ್​ ಇನ್​ ಇಂಟರ್​ವ್ಯೂ; ಬೆಂಗಳೂರಿನಲ್ಲಿ ಕೆಲಸ


ಶೈಕ್ಷಣಿಕ ಅರ್ಹತೆ:


ಅಭ್ಯರ್ಥಿಯು ವಿಜ್ಞಾನ ಮತ್ತು ಗಣಿತ ವಿಷಯಗಳೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಎಲೆಕ್ಟ್ರಿಷಿಯನ್/ಎಲೆಕ್ಟ್ರಿಕಲ್‌ನಲ್ಲಿ ITI ಅಥವಾ NCVT/SCVT


UPPCL ತಂತ್ರಜ್ಞರ ವಯಸ್ಸಿನ ಮಿತಿ:
18 ರಿಂದ 40 ವರ್ಷಗಳು


UPPCL ತಂತ್ರಜ್ಞರ ಸಂಬಳ
ರೂ. 27200/-


UPPCL ತಂತ್ರಜ್ಞರ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ


ಲಿಖಿತ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ
UPPCL ತಂತ್ರಜ್ಞರ ಪರೀಕ್ಷೆಯ ಮಾದರಿ 2022
ಎರಡು ಭಾಗಗಳಿರುತ್ತವೆ:
ಭಾಗ 1: ಇದು NIELIT CCL ಮಟ್ಟದ ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹೊಂದಿರುತ್ತದೆ
ಭಾಗ 2: ಇದು ಜಿಕೆ, ರೀಸನಿಂಗ್, ಸಾಮಾನ್ಯ ಹಿಂದಿ, ಟೆಕ್ನಿಕನ್ ವಿಷಯ ಮತ್ತು ಸಾಮಾನ್ಯ ಇಂಗ್ಲಿಷ್‌ನಿಂದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. 


ಇದನ್ನೂ ಓದಿ: ಬ್ಯಾಂಕ್​ ಆಫ್​ ಬರೋಡದಲ್ಲಿ ಬೃಹತ್​ ನೇಮಕಾತಿ; 346 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ


ಅರ್ಜಿ ಶುಲ್ಕ:
ಸಾಮಾನ್ಯ / OBC / EWS : 1180/-
SC / ST : 826/-


UPPCL ತಂತ್ರಜ್ಞರ ನೇಮಕಾತಿ 2022 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು, UPPCL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ನಂತರ, ನೇಮಕಾತಿ ಅಥವಾ ವೃತ್ತಿ ವಿಭಾಗಕ್ಕೆ ಹೋಗಿ
ಈಗ, ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ
ವಿವರಗಳನ್ನು ನಮೂದಿಸಿ
ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರವೇಶ ಪತ್ರದ ಪ್ರಿಂಟ್ ಔಟ್ ತೆಗೆದುಕೊಳ್ಳಿ
ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / ಇ ಚಲನ್ ಮೂಲಕ ಪಾವತಿಸಿ.

First published: