UHS Bagalkot Recruitment: ಬಾಗಲಕೋಟೆ ತೋಟಗಾರಿಕಾ ವಿವಿಯಲ್ಲಿ ನೇಮಕಾತಿ; ಬೇಗ ಅರ್ಜಿ ಸಲ್ಲಿಸಿ

ಈ ಹುದ್ದೆಯೂ ಮೂರು ವರ್ಷಗಳ ಒಪ್ಪಂದ ಆಧಾರದ ಮೇ ನಡೆಯುವ ನೇಮಕಾತಿ ಆಗಿದೆ.

ಬಾಗಲಕೋಟೆ ತೋಟಗಾರಿಕಾ ವಿವಿ

ಬಾಗಲಕೋಟೆ ತೋಟಗಾರಿಕಾ ವಿವಿ

  • Share this:
    ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (University of Horticultural Sciences Bagalkot)  ಖಾಲಿ ಇರುವ ಹುದ್ದೆಗಳ ಭರ್ತಿ ಕ್ರಮಕ್ಕೆ ಮುಂದಾಗಲಾಗಿದೆ. ಬಾಗಲಕೋಟೆ, ಶಿರಸಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 11 ಆಗಿದೆ. ಅರ್ಜಿಯನ್ನು ಆಫ್​​​ಲೈನ್​ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಇದೆ.

    ಈ ಹುದ್ದೆಯೂ ಮೂರು ವರ್ಷಗಳ ಒಪ್ಪಂದ ಆಧಾರದ ಮೇ ನಡೆಯುವ ನೇಮಕಾತಿ ಆಗಿದೆ. ಈ ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಸೇರಿದಂತೆ ಉಳಿದ ವಿವರ ಕೆಳಗಿನಂತೆ ಇದೆ.

    ವಿಶ್ವವಿದ್ಯಾಲಯದ ಹೆಸರು: ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ
    ಹುದ್ದೆಗಳ ಸಂಖ್ಯೆ: 3
    ಉದ್ಯೋಗ ಸ್ಥಳ: ಬಾಗಲಕೋಟೆ - ಬೆಂಗಳೂರು - ಶಿರಸಿ
    ಹುದ್ದೆಯ ಹೆಸರು: ಅಧಿಕಾರಿಗಳು
    ವೇತನ: 144200-218200 ರೂ ಪ್ರತಿ ತಿಂಗಳು



















    ಹುದ್ದೆಹುದ್ದೆ ಸಂಖ್ಯೆ
    ಶಿಕ್ಷಣ ನಿರ್ದೇಶಕರು1
    ಡೀನ್, ತೋಟಗಾರಿಕೆ ಕಾಲೇಜು, ಬೆಂಗಳೂರು1
    ಡೀನ್, ತೋಟಗಾರಿಕೆ ಕಾಲೇಜು, ಶಿರಸಿ1

    ಶೈಕ್ಷಣಿಕ ಅರ್ಹತೆ: ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ತೋಟಗಾರಿಕೆ/ಕೃಷಿ ವಿಜ್ಞಾನದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪದವಿಯನ್ನು ಪೂರ್ಣಗೊಳಿಸಿರಬೇಕು.

    ವಯಸ್ಸಿನ ಮಿತಿ: ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

    ವಯಸ್ಸಿನ ಸಡಿಲಿಕೆ:
    ಬಾಗಲಕೋಟ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ

    ಅರ್ಜಿ ಸಲ್ಲಿಕೆ : ಆಫ್​ಲೈನ್​ ಮುಖಾಂತರ

    ಇದನ್ನು ಓದಿ: ಬ್ಯಾಂಕಿಂಗ್​ನಲ್ಲಿ ಭರ್ಜರಿ ನೇಮಕಾತಿ; 8106 ಹುದ್ದೆಗಳಿಗೆ ನೇಮಕಾತಿ

    ಅರ್ಜಿ ಶುಲ್ಕ
    ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಪ್ರವರ್ಗ-1, ಮಾಜಿ ಸೈನಿಕರು, ವಿಕಲಚೇತನ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
    ಹಿಂದುಳಿದ ಅಭ್ಯರ್ಥಿಗಳು: 1000 ರೂ
    ಸಾಮಾನ್ಯ ಅಭ್ಯರ್ಥಿಗಳು: 2000 ರೂ

    ಅರ್ಜಿ ಶುಲ್ಕ ಪಾವತಿ ವಿಧಾನ: ಚಲನ್

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 13, 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್​ 11

    ಇದನ್ನು ಓದಿ: ಪರಿಸರ ನಿರ್ವಹಣೆ ಸಂಸ್ಥೆಯಲ್ಲಿ ನೇಮಕಾತಿ; ಹಾಸನ-ಬೆಂಗಳೂರಿನಲ್ಲಿ ಉದ್ಯೋಗ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: uhsbagalkot.edu.in

    ಅರ್ಜಿ ಸಲ್ಲಿಕೆ

    -ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
    -ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
    -ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಈ ಕೆಳಗಿನ ವಿಳಾಸಕ್ಕೆ ಸ್ಪೀಡ್​ ಪೋಸ್ಟ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮೂಲಕ ಕಳುಹಿಸಬೇಕಿದೆ
    ರಿಜಿಸ್ಟ್ರಾರ್, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಉದ್ಯಾನಗಿರಿ, ಬಾಗಲಕೋಟ - 587104
    Published by:Seema R
    First published: