Jobs in Sirsi: ಉತ್ತರ ಕನ್ನಡದ ಶಿರಸಿಯಲ್ಲಿದೆ ಉದ್ಯೋಗಾವಕಾಶ; ಬೇಗ ಅರ್ಜಿ ಸಲ್ಲಿಸಿ

ಶಿರಸಿ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಈ ಸಂದರ್ಶಕ ವೈದ್ಯರ ಹುದ್ದೆ ನೇಮಕಾತಿ ನಡೆಸಲಾಗುತ್ತಿದೆ.

 ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

  • Share this:
    ಧಾರವಾಡ ಕೃಷಿ ವಿಶ್ವವಿದ್ಯಾಲಯ (University of Agricultural Sciences Dharwad) ಸಂದರ್ಶಕ​ ವೈದ್ಯರ (Visiting Doctor) ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಉತ್ತರ ಕನ್ನಡದ ಶಿರಸಿಯಲ್ಲಿ(Sirsi) ಕಾರ್ಯ ನಿರ್ವಹಿಸಲು ಈ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಈ ಹುದ್ದೆಗೆ ಆಗಸ್ಟ್​ 2 ರಂದು ಬೆಳಗ್ಗೆ 10ಗಂಟೆಗೆ ವಾಕ್​ ಇನ್​ ಇಂಟರ್​​ವ್ಯೂ ನಡೆಯಲಿದೆ.

    ಶಿರಸಿ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಈ ಸಂದರ್ಶಕ ವೈದ್ಯರ ಹುದ್ದೆ ನೇಮಕಾತಿ ನಡೆಸಲಾಗುತ್ತಿದೆ. ಈ ಹುದ್ದೆ ತಾತ್ಕಾಲಿಕವಾಗಿದ್ದು, 179 ದಿನಗಳ ಅವಧಿಗೆ ನೇಮಕಾ ಮಾಡಲಾಗುವುದು. ಈ ಹುದ್ದೆ ಆಯ್ಕೆ, ನೇಮಕಾತಿ ಮತ್ತು ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.



























    ಹುದ್ದೆಹುದ್ದೆ ಮಾಹಿತಿ
    ವಿಶ್ವವಿದ್ಯಾಲಯದ ಹೆಸರುಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ
    ಹುದ್ದೆವಿಸಿಟಿಂಗ್ ಡಾಕ್ಟರ್
    ಹುದ್ದೆ1
    ಉದ್ಯೋಗ ಸ್ಥಳಶಿರಸಿ
    ವೇತನ20,000 ರೂ ಮಾಸಿಕ

    ಶೈಕ್ಷಣಿಕ ಅರ್ಹತೆ: ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಂಬಿಬಿಎಸ್​, ಬಿಎಎಂಎಸ್​, ಬಿಎಚ್​ಎಂಎಸ್​​ ಅನ್ನು  ಪೂರ್ಣಗೊಳಿಸಿರಬೇಕು.

    ಇದನ್ನು ಓದಿ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​ನಲ್ಲಿದೆ ಉದ್ಯೋಗ; ಇಲ್ಲಿದೆ ಹುದ್ದೆ ವಿವರ

    ವಯಸ್ಸಿನ ಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

    ವಯೋಮಿತಿ ಸಡಿಲಿಕೆ:
    ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನಿಯಮಾವಳಿ ಪ್ರಕಾರ

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಇದನ್ನು ಓದಿ: ಮೆಕ್ಯಾನಿಕ್​ ಕೆಲಸ ಗೊತ್ತಿದ್ರೆ, ಕ್ರೇಡ್​ಆರ್​ ನೀಡುತ್ತಿದೆ ಅವಕಾಶ; ಮಿಸ್​ ಮಾಡಬೇಡಿ

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 12 ಜುಲೈ  2022
    ವಾಕ್-ಇನ್ ದಿನಾಂಕ: 02-ಆಗಸ್ಟ್-2022 ಬೆಳಗ್ಗೆ 10:30

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: uasd.edu

    ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ

    ನೇರ ಸಂದರ್ಶನದ ದಿನ ನೀಡುವ ನಿಗದಿತ ಅರ್ಜಿಯನ್ನು ಅಭ್ಯರ್ಥಿಗಳು ಭರ್ತಿ ಮಾಡಬೇಕಿದೆ. ಇದರ ಜೊತೆಗೆ ಈ ದಾಖಲೆಗಳನ್ನು ಲಗತ್ತಿಸುವುದು ಅವಶ್ಯವಾಗಿದೆ.

    -ಎರಡು ಪಾಸಪೋರ್ಸ್​ ಸೈಜ್​ ಫೋಟೋ
    -ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
    -ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ

    ನೇರ ಸಂದರ್ಶನ ನಡೆಯುವ ಸ್ಥಳ: ಡೀನ್ ಕಚೇರಿ (ಅರಣ್ಯ), ಅರಣ್ಯ ವಿಶ್ವವಿದ್ಯಾಲಯ, ಶಿರಸಿ,ಉತ್ತರ ಕನ್ನಡ ಜಿಲ್ಲೆ – 581401.
    Published by:Seema R
    First published: