Jobs in Dharwad: ಧಾರವಾಡ ಕೃಷಿ ವಿವಿಯಲ್ಲಿ ನೇಮಕಾತಿ; ಮಾಸಿಕ 31 ಸಾವಿರ ರೂ ವೇತನ

ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಗಸ್ಟ್​ 18 ರಂದು ನಡೆಯುವ ವಾಕ್​ ಇನ್​ ಇಂಟರ್​ವ್ಯೂ ನಲ್ಲಿ ಭಾಗಿಯಾಗಬಹುದಾಗಿದೆ.

ಕೃಷಿ ವಿಶ್ವವಿದ್ಯಾಲಯ-ಧಾರವಾಡ

ಕೃಷಿ ವಿಶ್ವವಿದ್ಯಾಲಯ-ಧಾರವಾಡ

  • Share this:
    ಧಾರವಾಡದ ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯದಲ್ಲಿ(University of Agricultural Sciences Dharwad)  ಸೀನಿಯರ್​ ರಿಸರ್ಚ್​ ಫೆಲೋ (Senior Research Fellow) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಗಸ್ಟ್​ 18 ರಂದು ನಡೆಯುವ ವಾಕ್​ ಇನ್​ ಇಂಟರ್​ವ್ಯೂ ನಲ್ಲಿ ಭಾಗಿಯಾಗಬಹುದಾಗಿದೆ.

    ಈ ಹುದ್ದೆಗಳನ್ನು ಸಂಪೂರ್ಣವಾಗಿ ತಾತ್ಕಾಲಿಕ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ವಿಶ್ವವಿದ್ಯಾಲಯದ ಹೆಸರುಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ
    ಹುದ್ದೆಸೀನಿಯರ್ ರಿಸರ್ಚ್ ಫೆಲೋ
    ಹುದ್ದೆಗಳ ಸಂಖ್ಯೆ1
    ಕಾರ್ಯ ನಿರ್ವಹಣೆ ಸ್ಥಳಧಾರವಾಡ
    ವೇತನ31000 ರೂ ಪ್ರತಿ ತಿಂಗಳು

    ಶೈಕ್ಷಣಿಕ ಅರ್ಹತೆ: ಯುಎಎಸ್ ಧಾರವಾಡ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಅಗ್ರಿಕಲ್ಚರ್ ಇಂಜಿನಿಯರಿಂಗ್, ಬ್ಯಾಚುಲರ್ ಪದವಿಯಲ್ಲಿ ಎಂಟೆಕ್ ಪೂರ್ಣಗೊಳಿಸಿರಬೇಕು.

    ವಯಸ್ಸಿನ ಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯುಎಎಸ್ ಧಾರವಾಡ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

    ಇದನ್ನು ಓದಿ: ಎನ್​ಐಟಿಕೆಯಲ್ಲಿ 14 ಬೋಧಕ ಹುದ್ದೆಗಳಿಗೆ ವಾಕ್​-ಇನ್​-ಇಂಟರ್ವ್ಯೂ

    ಆಯ್ಕೆ ವಿಧಾನ: ನೇರ ಸಂದರ್ಶನ

    ವಿಶೇಷ ಸೂಚನೆ : ಈ ಹುದ್ದೆಗೆ ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು 100 ರೂ ಛಾಪಾ ಕಾಗದ ಮೇಲೆ ತಾವು ತಾತ್ಕಾಲಿಕ ಹುದ್ದೆಗೆ ಆಯ್ಕೆಯಾಗುತ್ತಿರುವುದಾಗಿ ನಿಗದಿತ ಅರ್ಜಿಯಲ್ಲಿ ಮುಚ್ಚಳಿಕೆ ಬರೆದುಕೊಡಬೇಕು.

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 03-08-2022
    ವಾಕ್-ಇನ್ ದಿನಾಂಕ: 18-ಆಗಸ್ಟ್-2022 ಮಧ್ಯಾಹ್ನ 12. 30 ರಿಂದ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: uasd.edu

    ಇದನ್ನು ಓದಿ: ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಪದವಿ ಆದವರಿಗೆ ಉದ್ಯೋಗಾವಕಾಶ

    ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ

    ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ಅರ್ಜಿಯನ್ನು ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.
    ಪದವಿ ಮತ್ತು 10ನೇ ತರಗತಿ ಮಾರ್ಕ್ಸ್​ ಕಾರ್ಡ್​​
    ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.
    ಜಾತಿ ಪ್ರಮಾಣ ಪತ್ರ
    ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ
    ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ.
    Published by:Seema R
    First published: