Unemployment allowance: ಕೆಲಸ ಕಳೆದುಕೊಂಡ ನಿರುದ್ಯೋಗಿಗಳಿಗೆ ಸರ್ಕಾರದಿಂದ ಶೇ 50ರಷ್ಟು ಭತ್ಯೆ; ಮಾಡಬೇಕಿರುವುದು ಇಷ್ಟೇ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • News18
  • Last Updated :
  • Share this:
    ಉತ್ತಮ ಹುದ್ದೆಯಲ್ಲಿದ್ದು, ಕೈ ತುಂಬಾ ಸಂಬಳ ಏಣಿಸುತ್ತಿದ್ದ ಅದೆಷ್ಟೋ ಮಂದು ಕೆಲಸವನ್ನು ಕೋವಿಡ್​ ಕಿತ್ತುಕೊಂಡಿತು. ಆರಾಮದಾಯಕ ಜೀವನ ನಡೆಸುತ್ತಿದ್ದರು, ಕೈಯಲ್ಲಿದ್ದ ಕೆಲಸ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದರು. ಈ ಸಮಯದಲ್ಲಿ ನಿರುದ್ಯೋಗ, ಕುಟುಂಬ ನಿರ್ವಹಣೆಯೇ ದೊಡ್ಡ ಸವಾಲ್​ ಆಗಿ ಹೋಯಿತು. ದೇಶದ ಅನೇಕ ಮಂದಿಯ ಈ ಸಂಕಷ್ಟವನ್ನು ಗಮನಿಸಿದ ಸರ್ಕಾರ ನಿರುದ್ಯೋಗಿಗಳಿಗಾಗಿಯೇ ವಿಶೇಷ ಯೋಜನೆ ಪ್ರಾರಂಭಿಸಿತು. ಅದೇ ಅಟಲ್​ ಬೀಮಿತ್​ ವ್ಯಕ್ತಿ ಕಲ್ಯಾಣ ಯೋಜನೆ (Atal Bimit Vyakti Kalyan Yojana). ಈ ಯೋಜನೆ ಮೂಲಕ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ (Unemployment allowance) ನೀಡಲಾಗುವುದು.

    ಏನಿದು ಯೋಜನೆ ?
    ನಿರುದ್ಯೋಗಿಗಳಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆ ಈ ಅಟಲ್​ ಬೀಮಿತ್​ ವ್ಯಕ್ತಿ ಕಲ್ಯಾಣ ಯೋಜನೆಯಾಗಿದೆ. ಈ ಯೋಜನೆ ಅಡಿ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಜನರು ಲಾಭಾ ಪಡೆದಿದ್ದಾರೆ. ನೌಕರರ ರಾಜ್ಯ ವಿಮಾ ನಿಗಮ (ESIC) ಈ ಯೋಜನೆಯನ್ನು ನಡೆಸುತ್ತಿದೆ. ದೇಶದಲ್ಲಿ ಇನ್ನು ಕೋವಿಡ್​​ನಿಂದ ಜನಸಾಮಾನ್ಯರ ಆರ್ಥಿಕತೆ ಸುಧಾರಿಸದ ಹಿನ್ನಲೆ ಈ ಅಟಲ್​ ಬೀಮತ್​ ಯೋಜನೆಯನ್ನು ಜೂನ್​ 30, 2022ರವರೆಗೆ ವಿಸ್ತರಿಸಿದೆ.

    ನಿರುದ್ಯೋಗ ಭತ್ಯೆ
    ನಿರುದ್ಯೋಗಿಗಳಿಗೆ ಉದ್ಯೋಗ ಕಳೆದುಕೊಂಡ ಸಂದರ್ಭದಲ್ಲಿ ವ್ಯಕ್ತಿಗೆ ಈ ಯೋಜನೆ ಮೂಲಕ ಹಣಕಾಸಿನ ಸಹಾಯ ಭತ್ಯೆಯನ್ನು ನೀಡಲಾಗುತ್ತದೆ. ನಿರುದ್ಯೋಗಿ ವ್ಯಕ್ತಿಯು 3 ತಿಂಗಳವರೆಗೆ ಈ ಭತ್ಯೆಯ ಲಾಭವನ್ನು ಪಡೆಯಬಹುದು. ಈ ವೇಳೆ ಅವರು ತಮ್ಮ ಸರಾಸರಿ ಸಂಬಳದ 50% ಕ್ಲೇಮ್ ಮಾಡಬಹುದು. ನಿರುದ್ಯೋಗಿಯಾದ 30 ದಿನಗಳ ನಂತರ, ಈ ಯೋಜನೆಗೆ ಸೇರುವ ಮೂಲಕ ಹಕ್ಕು ಪಡೆಯಬಹುದು.

    ನಿರುದ್ಯೋಗಿಗಳ ಖಾತೆಗೆ ಹಣ ಜಮೆ
    ಈ ಯೋಜನೆಯ ಲಾಭ ಪಡೆಯಲು, ESIC ಗೆ ಸಂಬಂಧಿಸಿದ ಉದ್ಯೋಗಿಗಳು ESIC ಯ ಯಾವುದೇ ಶಾಖೆಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇದರ ನಂತರ, ಅರ್ಜಿಯನ್ನು ಇಎಸ್‌ಐಸಿ ಪರಿಶೀಲನೆ ಮಾಡುತ್ತದೆ. ಈ ವೇಳೆ ಸಲ್ಲಿಕೆಯಾದ ಮಾಹಿತಿಗಳು ಸರಿಯಾಗಿದ್ದರೆ, ಹಣವನ್ನು ಸಂಬಂಧಪಟ್ಟ ನಿರುದ್ಯೋಗಿಯ ಖಾತೆಗೆ ಕಳುಹಿಸಲಾಗುತ್ತದೆ.

    ಇದನ್ನು ಓದಿ: ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯುವುದು ಹೇಗೆ? ಇಲ್ಲಿದೆ ಮಾಹಿತಿ

    ಯಾರೆಲ್ಲಾ ಪಡೆಯಬಹುದು ಈ ಲಾಭಾ

    •  ಖಾಸಗಿ ವಲಯದಲ್ಲಿ ಅಂದರೆ ಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಅಂದರೆ ಉದ್ಯೋಗಿಗಳ ಪ್ರತಿ ತಿಂಗಳ ಸಂಬಳದಲ್ಲಿ PF / ESI ಕಡಿತಗೊಳ್ಳುತ್ತದೆ, ಅವರು ಈ ಉದ್ಯೋಗ ಕಳೆದುಕೊಂಡಾಗ ಈ ಯೋಜನೆ ಲಾಭಾ ಪಡೆಯಬಹುದು.

    •  ಖಾಸಗಿ ಕಂಪನಿಗಳು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ಲಾಭ ಸಿಗುತ್ತದೆ. ಈ ಕಾರಣಕಾಗಿ, ಇಎಸ್‌ಐ ಕಾರ್ಡ್ (ESI Card) ಮಾಡಿಸಲಾಗಿರುತ್ತದೆ

    •  ಉದ್ಯೋಗಿಗಳು ಈ ಕಾರ್ಡ್ ಅಥವಾ ಕಂಪನಿಯಿಂದ ತಂದ ಡಾಕ್ಯುಮೆಂಟ್ ಆಧಾರದ ಮೇಲೆ ಯೋಜನೆಯ ಲಾಭವನ್ನು ಪಡೆಯಬಹುದು. ಮಾಸಿಕ ಆದಾಯ 21 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರುವ ಉದ್ಯೋಗಿಗಳಿಗೆ ಇಎಸ್‌ಐ ಲಾಭ ಲಭ್ಯವಿದೆ.


    ಅರ್ಜಿ ಸಲ್ಲಿಕೆ ಹೇಗೆ?

    • ಮೊದಲು ಇಎಸ್‌ಐಸಿ ವೆಬ್‌ಸೈಟ್‌ಗಾಗಿ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆಯ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

    • ಈಗ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ಉದ್ಯೋಗಿಗಳ ರಾಜ್ಯ ವಿಮಾ ನಿಗಮದ (ESIC) ಹತ್ತಿರದ ಶಾಖೆಗೆ ಸಲ್ಲಿಸಿ.

    • ನಂತರ, ಫಾರ್ಮ್ ನೊಂದಿಗೆ ನಾನ್ ಜುಡಿಶಿಯಲ್ ಸ್ಟಾಂಪ್ ಪೇಪರ್ ಮೇಲೆ 20ರೂ. ನೋಟರಿಯ ಅಫಿಡವಿಟ್ ಮಾಡಿಸಬೇಕಾಗುತ್ತದೆ.

    • ಇದರಲ್ಲಿ AB-1 ರಿಂದ AB-4 ಫಾರ್ಮ್ ಸಲ್ಲಿಸಲಾಗುವುದು.
      ಒಂದು ವೇಳೆ ಉದ್ಯೋಗಿಗಳು ತಪ್ಪು ನಡವಳಿಕೆಯಿಂದಾಗಿ ಕೆಲಸವನ್ನು ಕಳೆದುಕೊಂದಿದ್ದರೆ ಈ ಯೋಜನೆಯ ಲಾಭ ಸಿಗುವುದಿಲ್ಲ.

    Published by:Seema R
    First published: