ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವಿವಿಧ ಹುದ್ದೆಗಳನ್ನು(Job) ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು 24 ಜನವರಿ ಕೊನೆಯ ದಿನವಾಗಿದೆ. ಡೆಪ್ಯೂಟಿ ಡೈರೆಕ್ಟರ್ 5, ಅಸಿಸ್ಟೆಂಟ್ ಡೈರೆಕ್ಟರ್ 2, ಟೆಕ್ನಿಕಲ್ ಆಫೀಸರ್ 3, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ 1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಹೆಚ್ಚಿನ ಮಾಹಿತಿ ತಿಳಿದಿರಬೇಕು. ಈ ಹುದ್ದೆಯ ಬಗ್ಗೆ ಇಲ್ಲಿದೆ ಮಾಹಿತಿ
ಇಲಾಖೆ |
ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) |
ಹುದ್ದೆ |
ಡೆಪ್ಯೂಟಿ ಡೈರೆಕ್ಟರ್ , ಅಸಿಸ್ಟೆಂಟ್ ಡೈರೆಕ್ಟರ್ , ಟೆಕ್ನಿಕಲ್ ಆಫೀಸರ್ , ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ |
ಒಟ್ಟು ಹುದ್ದೆಗಳು |
11 |
ವಿದ್ಯಾರ್ಹತೆ |
ಡೆಪ್ಯೂಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗಳಿಗೆ ಇಂಜಿನಿಯರಿಂಗ್ನಲ್ಲಿ ಪದವಿ. |
ಅನುಭವ |
ಡೆಪ್ಯೂಟಿ ಡೈರೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಾಫ್ಟ್ವೇರ್ ಡೆವಲಪ್ಮೆಂಟ್, ಡೇಟಾಬೇಸ್, ನೆಟ್ವರ್ಕ್ ಸೆಕ್ಯೂರಿಟಿ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. |
ವಯೋಮಿತಿ |
ಗರಿಷ್ಠ 56 ವರ್ಷ |
ಅರ್ಜಿ ಸಲ್ಲಿಕೆ ವಿಧಾನ |
ಆನ್ಲೈನ್ ಮತ್ತು ಆಫ್ಲೈನ್ |
ಅರ್ಜಿ ಸಲ್ಲಿಸುವ ಲಿಂಕ್ |
uidai.gov.in |
ಆಫ್ಲೈನ್ ಅರ್ಜಿ ಸಲ್ಲಿಸುವ ವಿಳಾಸ |
Unique Identification Authority of India (UIDAI), Aadhaar Complex, NTI Layout, Tata Nagar, Kodigehalli, Technology Centre, Bengaluru 560092 |
ಆಯ್ಕೆ ವಿಧಾನ |
ಲಿಖಿತ ಪರೀಕ್ಷೆ ಮತ್ತು ಸಂದರ್ಶನ |
ಡೆಪ್ಯೂಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗಳಿಗೆ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದವರು, ಸ್ನಾತಕೋತ್ತರ ಪದವಿ ಪಡೆದವರು, ಎಂಸಿಎ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: SSLC, PUC ಪಾಸಾದವರಿಗೆ ಕೋಸ್ಟ್ ಗಾರ್ಡ್ನಲ್ಲಿ ಉದ್ಯೋಗ, ಅರ್ಜಿ ಸಲ್ಲಿಸಲು ಹೀಗೆ ಮಾಡಿ
ಟೆಕ್ನಿಕಲ್ ಆಫೀಸರ್, ಅಸಿಸ್ಟೆಂಟ್ ಟೆಕ್ನಿಕಲ್ ಆಫೀಸರ್ ಹುದ್ದೆಗೆ ಯುಐಡಿಎಐ ನೇಮಕಾತಿ ನಿಯಮಗಳ ಅನ್ವಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ಮಾಡಲು ವಿಳಾಸ;
Unique Identification Authority of India (UIDAI), Aadhaar Complex, NTI Layout, Tata Nagar, Kodigehalli, Technology Centre, Bengaluru 560092.
ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ '
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ, ನಿಗದಿತ ದಾಖಲೆಗಳನ್ನು ಲಗತ್ತಿಸಿ, ಸ್ವಯಂ ದೃಢೀಕರಣ ಮಾಡಿ ಸಲ್ಲಿಸಬೇಕು. i
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ